
ನವದೆಹಲಿ (ಅ. 17) ಕೇಂದ್ರ ಸರ್ಕಾರ ತನ್ನ ವಿಶೇಷ ಸ್ನೇಹಿತರ ಜೇಬು ಬರ್ತಿ ಮಾಡುವುದರಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.. ಹಸಿವು ಸೂಚ್ಯಂಕದ ವರದಿ ಇಟ್ಟುಕೊಂಡು ದಾಳಿ ಮಾಡಿದ ರಾಹುಲ್ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಬಡವರ ಹಿತ ಮರೆತಿದೆ ಎಂದು ಆರೋಪಿಸಿದ್ದಾರೆ.
ವಿಶ್ವ ಆಹಾರ ದಿನಾಚರಣೆ ಮುಗಿದಿದೆ. ಈ ನಡುವೆ . ಈ ಬಾರಿಯ ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆಯಾಗಿದ್ದು,107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂಲೂ ಭಾರತ ಕೊಂಚ ಹಿಂದಿದೆ.
ನೇಪಾಳ ಮತ್ತು ಬಾಂಗ್ಲಾದೇಶ ಕ್ರಮವಾಗಿ 73 ಮತ್ತು 75 ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 88 ನೇ ಸ್ಥಾನದಲ್ಲಿದೆ. ವೆಲ್ತುಂಗರ್ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್ ವೈಡ್ ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತ ಹಸಿವಿನ ಮಟ್ಟವನ್ನು ತಿಳಿಸಿದೆ.
ಏನ್ ಏನ್ ತಿಂತಾರೆ ಜನ.. ವೀರ್ಯ ಚೀಲವನ್ನು ಬಿಡಲ್ಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಇದೇ ವಿಚಾರ ಇಟ್ಟುಕೊಂಡು ಕೇಂದ್ರದ ಮೇಲೆ ವಾಗ್ದಾಳಿ ಮಾಡಿದ್ದಾರೆ. 2018 ರಲ್ಲಿ ಭಾರತ 103 ನೇ ಸ್ಥಾನದಲ್ಲಿ ಇತ್ತು. ವಿಶ್ವದಲ್ಲಿ 690 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಈ ವರದಿ ತೆರೆದಿಟ್ಟಿದೆ.
ಜಿಎಸ್ಟಿ , ನೋನು ನಿಷೇಧದ ವಿಚಾರ ಇಟ್ಟಕೊಂಡು ರಾಹುಲ್ ಕೇಂದ್ರದ ಮೇಲೆ ವಾಗ್ದಾಳಿ ಮಾಡುತ್ತಲೆ ಬಂದಿದ್ದರು. ಅರ್ಥವ್ಯವಸ್ಥೆ ಕೇಂದ್ರ ಸರ್ಕಾರದ ಕಟ್ಟ ತೀರ್ಮಾನಗಳಿಂದಲೇ ಕೆಳಕ್ಕೆ ಕುಸಿದಿದೆ ಎಂದು ಹಲವು ಸಾರಿ ಹೇಳಿದ್ದಾರೆ.
ಆದರೆ ಹತ್ತು ವರ್ಷದ ಹಿಂದಕ್ಕೆ ಹೋದರೆ ಭಾರತದ ಬೆಳವಣಿಗೆ ಜಾಸ್ತಿಯಾಗಿದೆ. 2000 ದಿಂದ 2006 ರ ಅವಧಿಯಲ್ಲಿ 37.5 ಇದ್ದ ಜಿಎಚ್‌ಐ ಈಗ 27. 2 ಕ್ಕೆ ಇಳಿದಿದೆ. ಕೇಂದ್ರ ಸರ್ಕಾರ ಹಸಿವು ನೀಗಿಸಲು ಮತ್ತು ಜನರಿಗೆ ಪೌಷ್ಠಿಕಾಂಶ ಇರುವ ಆಹಾರ ನೀಡಲು ಕ್ರಮ ತೆಗೆದುಕೊಳ್ಳುತ್ತಿದೆ. ಇತ್ತಿಚೇಗೆ ಅಷ್ಟೆ ಪ್ರಧಾನಿ ನರೇಂದ್ರ ಮೋದಿ ಹೊಸ ತಳಿಯ ಹದಿನೇಳು ಬೆಳೆಗಳನ್ನು ಅನಾವರಣ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ