ಪ್ರಾಣಿಗಳಂತೆ ಮಕ್ಕಳಿಗೆ ಜನ್ಮ ಕೊಡುವುದು ದೇಶಕ್ಕೆ ಮಾರಕ| RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ವಿವಾದ ಹುಟ್ಟು ಹಾಕಿದೆ ವಸೀಂ ಸ್ಟೇಟ್‌ಮೆಂಟ್|
ಲಕ್ನೋ[ಜ.21]: ಉತ್ತರ ಒಪ್ರದೇಶದ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಸೀಂ ರಿಜ್ವಿ ನೀಡಿರುವ ಹೇಳಿಕೆಯೊಂದು ಭಾರೀ ವಿವಾದ ಹುಟ್ಟು ಹಾಕಿದೆ. ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ಕೊಡುವುದು 'ಪ್ರಾಣಿ'ಗಳಿಗೆ ಸಮ. ಇದು ದೇಶಕ್ಕೆ ಮಾರಕ ಎಂದಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ವಸೀಂ ರಿಜ್ವಿ 'ಮಕ್ಕಳಿಗೆ ಜನ್ಮ ಕೊಡುವುದು ನೈಸರ್ಗಿಕ ಕ್ರಿಯೆ, ಇದಕಲ್ಕೆ ಯಾವುದೇ ತೊಡಕಾಗಬಾರದೆಂಬುವುದು ಕೆಲವರ ಅಭಿಪ್ರಾಯವಾಗಿದೆ. ಆದರೆ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ಕೊಡುವುದು ಪ್ರಾಣಿಗಳಿಗೆ ಸಮ. ಇದು ಸಮಾಜ ಹಾಗೂ ದೇಶಕ್ಕೆ ಮಾರಕ. ಹೀಗಾಗಿ ಜನಸಂಖ್ಯೆ ನಿಯಂತ್ರಿಸಲು ಹೊಸ ಕಾನೂನು ಜಾರಿಗೊಳಿಸಿದರೆ ಉತ್ತಮ' ಎಂದಿದ್ದಾರೆ.
undefined
ಜನಸಂಖ್ಯೆ ನಿಯಂತ್ರಣ ಕಾನೂನು ತುರ್ತು ಅವಶ್ಯ: ಮೋಹನ್ ಭಾಗವತ್!
RSS ಮುಖ್ಯಸ್ಥ ಮೋಹನ್ ಭಾಗವತ್ ಜನಸಂಖ್ಯೆ ನಿಯಂತ್ರಿಸಲು ಸೂಕ್ತ ನಿಯಮ, ಕಾನೂನು ಜಾರಿಗೊಳಿಸಬೇಕೆಂಬ ಹೇಳಿಕೆ ಕೊಟ್ಟ ಬೆನ್ನಲ್ಲೇ ವಸೀಂ ಈ ಹೇಳಿಕೆ ನೀಡಿದ್ದಾರೆಂಬುವುದು ಉಲ್ಲೇಖನೀಯ.
ಮೋಹನ್ ಭಾಗವತ್ ಹೇಳಿದ್ದೇನು?
ಜನಸಂಖ್ಯೆ ನಿಯಂತ್ರಣಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ದೇಶ ಬಹುದೊಡ್ಡ ಗಂಡಾಂತರಕ್ಕೆ ತುತ್ತಾಗಲಿದೆ ಎಂದಿರುವ ಭಾಗವತ್, ಜನಸಂಖ್ಯೆ ನಿಯಂತ್ರಣದಿಂದ ಮುಂಬರುವ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದ್ದರು.
2 ಮಕ್ಕಳ ಮಿತಿ ಹೇರಬೇಕು ಎಂದು ಹೇಳಿಲ್ಲ: ಭಾಗವತ್
ಒಂದು ವೇಳೆ ಸರ್ಕಾರ ಎರಡು ಮಕ್ಕಳು ಕಡ್ಡಾಯ ನೀತಿಯನ್ನು ಜಾರಿಗೊಳಿಸಿದರೆ ಅದನ್ನು RSS ಬೆಂಬಲ ನೀಡಲಿದೆ ಎಂದಿದ್ದರು. ಅವರ ಈ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿತ್ತು.
ವಿವಾದದ ಬೆನ್ನಲ್ಲೇ ಸ್ಪಷ್ಟನೆ
ತಮ್ಮ ಹೇಳಿಕೆ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಮೋಹನ್ ಭಾಗವತ್ ‘ಕೆಲವು ತಪ್ಪು ತಿಳುವಳಿಕೆಗಳಿಂದ ‘ಸಂಘವು ಎರಡು ಮಕ್ಕಳ ಮಿತಿ’ ನೀತಿಯನ್ನು ಬಯಸಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಸರ್ಕಾರವು ಸಮಾಜದ ಎಲ್ಲ ವರ್ಗಗಳ ಅನಿಸಿಕೆಯನ್ನು ಆಲಿಸಿ ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ರೂಪಿಸಬೇಕು ಎಂಬುದು ನಮ್ಮ ನಿಲುವು. ಎಷ್ಟುಮಕ್ಕಳು ಇರಬೇಕು ಎಂಬುದನ್ನು ಆ ನೀತಿಯೇ ಹೇಳಬೇಕು. ಇದೇ ರೀತಿ ನಿಯಮ ಇರಬೇಕು ಎಂಬುದನ್ನು ನಾನು ಹೇಳಿಲ್ಲ. ಏಕೆಂದರೆ ಅದು ನನ್ನ ಕೆಲಸವಲ್ಲ’ ಎಂದಿದ್ದರು.