ಕೇಜ್ರಿ ವಿಷಯುದ್ಧ: ಯಮುನೆಗೆ ಪಾಯ್ಸನ್‌ ಆರೋಪಕ್ಕೆ ನಿರ್ದಿಷ್ಟ ಉತ್ತರ ಕೊಡಿ, ಚುನಾವಣಾ ಆಯೋಗ

Published : Jan 31, 2025, 07:31 AM IST
ಕೇಜ್ರಿ ವಿಷಯುದ್ಧ: ಯಮುನೆಗೆ ಪಾಯ್ಸನ್‌ ಆರೋಪಕ್ಕೆ ನಿರ್ದಿಷ್ಟ ಉತ್ತರ ಕೊಡಿ, ಚುನಾವಣಾ ಆಯೋಗ

ಸಾರಾಂಶ

ಮುಖ್ಯ ಚುನಾವಣಾ ಆಯುಕ್ತರು ನಿವೃತ್ತಿ ನಂತರ ಹುದ್ದೆ ಪಡೆಯಲು ರಾಜಕೀಯ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲಿ ಎಂದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ 

ನವದೆಹಲಿ(ಜ.31):  ಯಮುನಾ ನದಿಗೆ ವಿಷ ಹಾಕಿ ಲಾಗಿದೆ ಎಂಬ ಆರೋಪದ ಪ್ರಕರಣ ಆಪ್ ನಾಯಕ ಅರವಿಂದ್ ಕೇಜ್ರವಾಲ್ ಮತ್ತು ಬಿಜೆಪಿ ನಡುವೆ ಯುದ್ಧಕ್ಕೆ ಕಾರಣವಾದ ಬಳಿಕ ಇದೀಗ ಕೇಜಿ ಮತ್ತು ಚುನಾವಣಾ ಆಯೋಗದ ನಡುವೆ ಸಮರ ಶುರುವಾಗಿದೆ.

ಯಮುನಾ ನದಿಗೆ ಹರ್ಯಾಣ ಬಿಜೆಪಿಗರು ವಿಷ ಬೆರೆಸಿದ್ದಾರೆ ಎಂಬ ತಮ್ಮ ಆರೋಪ ಸಂಬಂಧ ಕೇಜ್ರವಾಲ್‌ ಬುಧವಾರ ಆಯೋಗಕ್ಕೆ ಉತ್ತರ ನೀಡಿದ್ದರು. ಆದರೆ ಉತ್ತರ ಸಮರ್ಪಕವಾಗಿಲ. ದೆಹಲಿ ಜಲ ಮಂಡಳಿಯವರು ಎಲ್ಲಿ? ಯಾವಾಗ? ಹೇಗೆ ನೀರಿನ ಪರೀಕ್ಷೆ ಮಾಡಿದ್ದರು. ಪರೀಕ್ಷೆ ಮಾಡಿದ್ದ ಎಂಜಿನಿಯರ್ ಯಾರು? ನೀರಿನಲ್ಲಿ ಯಾವ ರೀತಿ ವಿಷಯ ಇತ್ತು? ಅದರ ಪ್ರಮಾಣ ವೇನು? ಅದರ ಗುಣಲಕ್ಷಣಗಳೇನು? ಯಮುನೆಯನ್ನು ವಿಷಯುಕ್ತಗೊಳಿಸಿದ್ದು ಹೇಗೆ? ಅದನ್ನು ಕುಡಿದರೆ ಸಾಮೂಹಿಕ ಹತ್ಯಾಕಾಂಡ ಆಗಿ ಹೋದೀತು ಎಂಬ ಆರೋಪಕ್ಕೆ ನಿರ್ದಿಷ್ಟ ಉತ್ತರ ನೀಡಿ ಎಂದು ಚುನಾವಣಾ ಆಯೋಗ ಮತ್ತೆ ಕೇಜೋವಾಲ್‌ಗೆ ನೋಟಿಸ್‌ ನೀಡಿದೆ. ಜೊತೆಗೆ ಈ ನೋಟಿಸ್‌ಗೆ ಉತ್ತರಿಸಲು ಜ.31ರ ಗಡುವು ನೀಡಿದ್ದು, ಸೂಕ್ತ ಉತ್ತರ ನೀಡದೇ ಹೋದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಕೇಜ್ರಿವಾಲ್‌ ವಿಷ ಯುದ್ಧ, ನಾನು ಕುಡಿವ ನೀರಿಗೆ ಬಿಜೆಪಿಗರು ಪಾಯ್ಸನ್‌ ಹಾಕ್ತಾರಾ?: ಮೋದಿ

ಕೇಜ್ರಿವಾಲ್ ಕಿಡಿ: 

ಆಯೋಗದ ಮರು ನೋಟಿಸ್ ಬಗ್ಗೆ ಕಿಡಿಕಾರಿರುವ ಕೇಜ್ರಿವಾಲ್, 'ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ರಾಜಕೀಯಮಾಡುತ್ತಿದ್ದಾರೆ. ನಿವೃತ್ತಿನಂತರದ ಆಯಕಟ್ಟಿನ ಹುದ್ದೆಗಳಿಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಅವರಷ್ಟು ಹಾಳು ಮಾಡಿದವರು ಇನ್ನೊಬ್ಬರಿಲ್ಲ. ಅವರು ಬೇಕಾದರೆ ಮುಂಬರು ವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ. ಆದರೆ ನಾನು ಬದುಕಿರುವವರೆಗೂ ದೆಹಲಿಯ ಜನರು ವಿಷಯುಕ್ತ ನೀರನ್ನು ಕುಡಿಯಲು ಬಿಡುವುದಿಲ್ಲ. ಇನು ಎರಡು ದಿನಗಳಲ್ಲಿ ಅವರು ನನ್ನನ್ನು ಬಂಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಅದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಕೇಜ್ರವಾಲ್ ಸವಾಲು ಹಾಕಿದಾರೆ.

ವಿವಾದಕ್ಕೆ ಕಾರಣವೇನು?

ಚುನಾವಣೆ ಹೊತ್ತಿನಲ್ಲಿ ಆಪ್‌ಗೆ ಕಳಂಕ ಹೊರಿಸಲು ಬಿಜೆಪಿ ಸಂಚು ರೂಪಿಸಿದೆ. ಇದಕ್ಕಾಗಿಯೇ ಯಮುನಾ ನದಿಗೆ ವಿಷಪೂರಿತ ಕೈಗಾರಿಕಾ ತ್ಯಾಜ್ಯವನ್ನು ಉದ್ದೇಶಪೂರ್ವಕವಾಗಿ ಸೇರಿಸುತ್ತಿದೆ. ಈ ಮೂಲಕ ನದಿಯನ್ನು ವಿಷಪೂರಿತ ವಾಗಿಮಾಡುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.

ಯಮುನಾ ನದಿ ನೀರಿಗೆ ವಿಷ ಹಾಕಿ ದೆಹಲಿಗೆ ಕಳಿಸಿದರಾ?: ಹರಿಯಾಣ BJP ಸರ್ಕಾರದ ವಿರುದ್ಧ ಗಂಭೀರ ಆರೋಪ

ಸರಿಯಾದ ಉತ್ತರ ಕೊಡಿ

ಆರೋಪ ಸಂಬಂಧ ನೀಡಿದ್ದ ನೋಟಿಸ್‌ಗೆ ಕೇಜ್ರವಾಲ್ ಉತ್ತರ ಸಮರ್ಪಕವಾಗಿಲ್ಲ. ನಿರ್ದಿಷ್ಟ ಉತ್ತರ ಕೊಡದಿ ದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಚುನಾವಣೆ ಆಯೋಗ ತಿಳಿಸಿದೆ.  

ಸಿಇಸಿ ಚುನಾವಣೆಗೆ ಸ್ಪರ್ಧೆ ಮಾಡಲಿ

ಮುಖ್ಯ ಚುನಾವಣಾ ಆಯುಕ್ತರು ನಿವೃತ್ತಿ ನಂತರ ಹುದ್ದೆ ಪಡೆಯಲು ರಾಜಕೀಯ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲಿ ಎಂದು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು
ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌