
ನವದೆಹಲಿ (ಅ.20) ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ದೆಹಲಿ ಸ್ವೀಟ್ ಶಾಪ್ ಮಾಲೀಕ ರಾಹುಲ್ ಗಾಂಧಿಗೆ ಹೇಳಿದ್ದಾರೆ. ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯ ಐತಿಹಾಸಿಕ ಗಂಟೆವಾಲ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಕೆಲ ಸಿಹಿ ತಿನಿಸುಗಳನ್ನು ಕೈಯಾರೆ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕರ ಜೊತೆಗಿನ ಮಾತುಕತೆ ವಿಡಿಯೋಗಳು ಇದೀಗ ಸದ್ದು ಮಾಡುತ್ತಿದೆ. ಈ ವೇಳೆ ಗಂಟೆವಾಲ ಸ್ವೀಟ್ ಶಾಪ್ ಮಾಲೀಕ ಸುಶಾಂತ್ ಜೈನ್ ರಾಹುಲ್ ಗಾಂಧಿಗೆ ಮದುವೆಯಾಗಲು ಸಲಹೆ ನೀಡಿದ್ದಾರೆ. ಆದರೆ ಈ ಸಲಹೆ ಹಿಂದೆ ಮಹತ್ವದ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಮಾತು ಇದೀಗ ಭಾರಿ ವೈರಲ್ ಆಗುತ್ತಿದೆ.
ರಾಹುಲ್ ಗಾಂಧಿ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಜಿಲೇಬಿ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ. ಈ ವೇಳೆ ಮಾಲೀಕ ಸುಶಾಂತ್ ಜೈನ್, ರಾಹುಲ್ ಗಾಂಧಿಗೆ, ನೀವು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇದ್ದೀರಿ, ನೀವು ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ. ಸುಶಾಂತ್ ಜೈನ್ ಮಾತುಗಳನ್ನು ಕೇಳಿಸಿಕೊಂಡ ರಾಹುಲ್ ಗಾಂಧಿ ನಕ್ಕಿದ್ದಾರೆ. ಆದರೆ ಬಳಿಕ ಹೇಳಿದ ಮಾತು, ರಾಹುಲ್ ಗಾಂಧಿ ಮುಖದಲ್ಲಿ ಮತ್ತಷ್ಟು ನಗು ತರಿಸಿತ್ತು. ಕಾರಣ ನೀವು ಮದುವೆಯಾಗಿ, ಕಾರಣ ನಿಮ್ಮ ಮದುವೆ ಸ್ವೀಟ್ಸ್ ಆರ್ಡರ್ ಪಡೆಯಲು ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.
ದೆಹಲಿಯ ಗಂಟೆವಾಲ ಸ್ವೀಟ್ ಶಾಪ್‌ಗೆ ಸುದೀರ್ಘ ಇತಿಹಾಸವಿದೆ. ರಾಜೀವ್ ಗಾಂಧಿ ಕಾಲದಲ್ಲೇ ಈ ಸ್ವೀಟ್ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಹಲವು ದಶಕಗಳಿಂದ ದೆಹಲಿಯಲ್ಲಿ ಸ್ವೀಟ್ಸ್ ವ್ಯವಹಾರದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ರಾಹುಲ್ ಗಾಂಧಿ ಭೇಟಿ ವೇಳೆ, ನಿಮ್ಮ ತಂದೆ ರಾಜೀವ್ ಗಾಂಧಿಗೆ ಜಿಲೇಬಿ ತುಂಬಾ ಇಷ್ಟದ ಸಿಹಿ ತಿಂಡಿಯಾಗಿತ್ತು.ನೀವು ಟ್ರೈ ಮಾಡಿ, ಇದರ ಜೊತೆಗೆ ಅವರಿಗೆ ಬೇಸನ್ ಲಡ್ಡುಕೂಡ ತುಂಬಾ ಇಷ್ಟವಿತ್ತು ಎಂದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಜಲೇಬಿ ಹಾಗೂ ಬೇಸನ್ ಲಡ್ಡು ಸ್ವೀಟ್ ಕೈಯಾರಿ ತಯಾರಿಸಿದ್ದಾರೆ. ಸ್ವೀಟ್ ಶಾಪ್ ಮಾಲೀಕ ಹಾಗೂ ಚೆಫ್ ಮಾರ್ಗದರ್ಶನದಲ್ಲಿ ಸ್ವೀಟ್ಸ್ ತಯಾರಿಸಿದ್ದಾರೆ. ಇಷ್ಟೇ ಅಲ್ಲ ಜಿಲೇಬಿ ಹಾಗೂ ಬೇಸನ್ ಲಡ್ಡು ಖರೀದಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ವೀಟ್ ಶಾಪ್ ಭೇಟಿಯ ವಿಡಿಯೋ ಹಂಚಿಕೊಂಡಿದ್ದಾರೆ. ಶತಮಾನಗಳ ಹಳೆಯ ಸ್ವೀಟ್ ಶಾಪ್‌ನಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಿದ್ದೇನೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಾಪ್‌ಗೆ ಬೇಟಿ ನೀಡಿ ಸ್ವೀಟ್ಸ್ ತಯಾರಿಸಿದ್ದೇನೆ. ಈ ಸ್ವೀಟ್ ಶಾಪ್‌ನಲ್ಲಿ ದಶಕಗಳ ಹಿಂದೆ ಇದ್ದ ಅದೇ ಸ್ವಾದ, ಅದೇ ಸಿಹಿ, ಅದೇ ರುಚಿ ಈಗಲೂ ಇದೆ. ಸಾಂಪ್ರದಾಯಿಕ ರೀತಿಯ ತಯಾರಿಕೆ, ವಿಶೇಷ ಖಾದ್ಯಗಳು ಈ ಶಾಪ್ ಜೊತೆಗಿನ ಸಂಬಂಧ ಮತ್ತಷ್ಟುಗಟ್ಟಿಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ದೀಪಾವಳಿ ಸಂಭ್ರಮ ಒಂದೆಡೆಯಾದರೆ ರಾಹುಲ್ ಗಾಂಧಿಗೆ ಬಿಹಾರ ಚುನಾವಣೆ ಬಿಸಿ ಹೆಚ್ಚಾಗುತ್ತಿದೆ. ಒಂದೆಡೆ ಮೈತ್ರಿ ಪಕ್ಷಗಳ ಟಿಕೆಟ್ ವಿಚಾರದಲ್ಲಿನ ಬೇಡಿಕೆ ಹಾಗೂ ಗೊಂದಲ, ಮತ್ತೊಂದೆಡೆ ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ಹೆಚ್ಚಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತಲೆನೋವು ಹೆಚ್ಚಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ