ಭಾರತದಿಂದಲೇ ಹೊಸ ಜನರೇಟಿವ್‌ ಎಐ ಮಾಡೆಲ್‌: ಚೀನಾದ ಡೀಪ್‌ಸೀಕ್‌ಗೆ ಭಾರತದ ಉತ್ತರ

Published : Jan 31, 2025, 07:47 AM IST
ಭಾರತದಿಂದಲೇ ಹೊಸ ಜನರೇಟಿವ್‌ ಎಐ ಮಾಡೆಲ್‌: ಚೀನಾದ ಡೀಪ್‌ಸೀಕ್‌ಗೆ ಭಾರತದ ಉತ್ತರ

ಸಾರಾಂಶ

ಚೀನಾದ ಡೀಪ್‌ಸೀಕ್‌ ಆ್ಯಪ್‌ ಜನಪ್ರಿಯತೆ ಗಳಿಸುತ್ತಿರುವ ಹೊತ್ತಲ್ಲೇ ಭಾರತ ತನ್ನದೇ ಆದ ಜನರೇಟಿವ್‌ ಎಐ ಮಾಡೆಲ್‌ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ ಘೋಷಿಸಿದ್ದಾರೆ. ಭಾರತೀಯ ಭಾಷೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಈ ಮಾಡೆಲ್‌ ಅನ್ನು ವಿನ್ಯಾಸಗೊಳಿಸಲಾಗುವುದು.

ನವದೆಹಲಿ: ಚೀನಾದ ಡೀಪ್‌ಸೀಕ್ ಆ್ಯಪ್‌, ಜಾಗತಿಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಹೊತ್ತಿನಲ್ಲೇ, ಭಾರತ ಕೂಡಾ ಶೀಘ್ರವೇ ತನ್ನದೇ ಆದ ಜನರೇಟಿವ್‌ ಎಐ ಮಾಡೆಲ್‌ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ ಪ್ರಕಟಿಸಿದ್ದಾರೆ.

ಒಡಿಶಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್, ‘ಭಾರತೀಯ ಭಾಷೆ, ಸಂಸ್ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಎಐ ಮಾಡೆಲ್ ರಚಿಸಲಾಗುತ್ತದೆ. ನಮ್ಮ ದೇಶ ಮತ್ತು ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ದತ್ತಾಂಶಗಳನ್ನು ರೂಪಿಸಲಾಗುವುದು. 18000 ಗ್ರಾಫಿಕ್‌ ಪ್ರೊಸೆಸಿಂಗ್‌ ಯುನಿಟ್‌ ಒಳಗೊಂಡಿರುವ ಇಂಡಿಯಾ ಎಐ ಕಂಪ್ಯೂಟಿಂಗ್‌ ಬಳಸಿಕೊಂಡು ಹೊಸ ಎಐ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಜೊತೆಗೆ ಎಐ ಸಂಶೋಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಈ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವೈಷ್ಣವ್‌ ಹೇಳಿದರು.

ಭಾರತೀಯ ಸರ್ವರ್‌ಗಳಲ್ಲಿ ಡೀಪ್ ಸೀಕ್ ಅಳವಡಿಕೆ

ನವದೆಹಲಿ: ಚೀನಾದ ಡೀಪ್‌ಸೀಕ್‌ನಲ್ಲಿನ ಡೇಟಾ ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಗಳನ್ನು ಪರಿಹರಿಸಲು ಡೀಪ್‌ಸೀಕ್ ಓಪನ್ ಸೋರ್ಸ್ ಮಾಡೆಲ್ ಅನ್ನು ಶೀಘ್ರದಲ್ಲೇ ಭಾರತೀಯ ಸರ್ವರ್‌ಗಳಲ್ಲಿ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಭದ್ರತಾ ಅಂಶಗಳನ್ನು ಖಚಿತಪಡಿಸಿಕೊಳ್ಳಲು ಯಾವೆಲ್ಲ ಅಪ್ಲಿಕೇಶನ್ ಅಥವಾ ಸಿಸ್ಟಮ್‌ಗಳನ್ನು ಪರೀಕ್ಷಿಸಬೇಕೋ ಅವನ್ನು ಪರೀಕ್ಷಿಸಲಾಗುವುದು ಮತ್ತು ಬಳಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಇದನ್ನೂ ಓದಿ:ಪಾಕಿಸ್ತಾನದ ಬಾಲ ಕತ್ತರಿಸಿದ ಡೊನಾಲ್ಡ್ ಟ್ರಂಪ್; ಸರ್ಜಿಕಲ್ ಸ್ಟ್ರೈಕ್ ಅಂದ್ರು  ನೆಟ್ಟಿಗರು

ಡೀಪ್‌ ಸೀಕ್‌ಗೆ ಅಮೆರಿಕದ ನೌಕಾಪಡೆ ನಿರ್ಬಂಧ

ಚೀನಾದ ಡೀಪ್‌ಸೀಕ್‌ ಆ್ಯಪ್‌ ಬಳಕೆಗೆ ಅಮೆರಿಕದ ನೌಕಾಪಡೆ ನಿರ್ಬಂಧ ಹೇರಿದೆ. ದೇಶದ ಭದ್ರತೆಯ ಕಾರಣಕ್ಕೆ ಈ ಚೀನಿ ಎಐನ್ನು ಬಳಸದಂತೆ ನೌಕಾಪಡೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇತ್ತ ಟ್ರಂಪ್ ಇಂದೊಂದು ಎಚ್ಚರಿಕೆ ಕರೆ ಎಂದಿದ್ದಾರೆ. ಭದ್ರತೆ ಮತ್ತು ನೈತಿಕ ಕಾಳಜಿಯ ಕಾರಣದಿಂದ ಡೀಪ್‌ ಸೀಕ್ ಬಳಸಬಾರದು ಎಂದು ಸಿಬ್ಬಂದಿಗೆ ಇಮೇಲ್ ಮೂಲಕ ನೌಕಾಪಡೆ ಆದೇಶಿಸಿದೆ. ವೈಯಕ್ತಿಕ ಅಥವಾ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳೇ ಇರಲಿ ಯಾವುದಕ್ಕೂ ಡೀಪ್‌ಸೀಪ್ ಡೌನ್ಲೋಡ್‌ ಮತ್ತು ಬಳಕೆ ಮಾಡಬಾರದು ಎಂದಿದೆ.

ಇದನ್ನೂ ಓದಿ: Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..