
ನವದೆಹಲಿ (ಜು.26) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟುಕೊಂಡು ಕಾಕ್ರೋಚ್ ಜನತಾ ಪಾರ್ಟಿ ದೇಶಾದ್ಯಂತ ಭಾರಿ ಹೋರಾಟ ಸಂಘಟಿಸಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಿಂದ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ. ಕಾಕ್ರೋಚ್ ಜನತಾ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಹಲವು ಜನತಾ ಪಾರ್ಟಿಗಳು ಹುಟ್ಟಿಕೊಂಡಿದೆ. ಈ ಪೈಕಿ ಜನರಲ್ ಜನತಾ ಪಾರ್ಟಿ ಹೊಸ ಸಂಚಲನ ಸೃಷ್ಟಿಸಿದೆ.
ಜನರಲ್ ಜನತಾ ಪಾರ್ಟಿ ಆನ್‌ಲೈನ್ ಮೂಲಕ ಹುಟ್ಟಿಕೊಂಡ ಅಭಿಯಾನ ಹಾಗೂ ಆಂದೋಲನ. ಪ್ರಮುಖವಾಗಿ ಸಾಮಾನ್ಯ ವರ್ಗದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಹಾಸ್ಯ ಹಾಗೂ ವ್ಯಂಗ್ಯದ ಮೂಲಕ ಹೇಳುವ ಕೆಲಸವನ್ನು ಈ ಜನರಲ್ ಜನತಾ ಪಾರ್ಟಿ ಮಾಡಲಿದೆ. ಪ್ರಮುಖವಾಗಿ ನೇಮಕಾತಿ ವೇಳೆ ನಡೆಯುವ ಮೀಸಲಾತಿ, ಕಟ್ ಆಫ್ ಅಂಕಗಳಿಂದ ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಟಕ್ಕಾಗಿ ಈ ಜನರಲ್ ಜನತಾ ಪಾರ್ಟಿ ಆರಂಭಿಸಲಾಗಿದೆ.
ಕಟ್‌ಆಫ್ ಸರ್ವೈವರ್ಸ್ ಅಸೋಸಿಯೇಷನ್ ಎಂದೇ ಈ ಜನರಲ್ ಜನತಾ ಪಾರ್ಟಿ ಗುರುತಿಸಿಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ತಯಾರಾಗುವ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಯುವ ಸಮೂಹಕ್ಕಾಗಿ ರೂಪಕೊಂಡು ವೇದಿಕೆ ಇದಾಗಿದೆ ಎಂದು ಜನರಲ್ ಜನತಾ ಪಾರ್ಟಿ ಹೇಳಿಕೊಂಡಿದೆ. ಕಷ್ಟಪಟ್ಟು ಓದಿ ಅಂಕ ಪಡೆದು ಕೊನೆಗೆ ಮೀಸಲಾತಿ ಸೇರಿದಂತೆ ಇತರ ಕಾರಣಗಳಿಂದ ಕೂದಲೆಳೆ ಅಂತರದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳದೆ ಸಂಕಟಪಡುವ ಮಂದಿಯ ನೋವು ತೋಡಿಕೊಳ್ಳುವುದು ಹಾಗೂ ದೇಶದ ಗಮನ ಸೆಳೆದು ಕ್ರಾಂತಿಕ್ರಾರಿ ನಿರ್ಧಾರಗಳಿಗೆ ಕಾರಣವಾಗಲು ಈ ವೇದಿಕೆ ಹುಟ್ಟಿಕೊಂಡಿದೆ ಎಂದಿದೆ.
ಜಿಜೆಪಿ ಪಕ್ಷದ ಸಂಸ್ಥಾಪಕರ ಕುರಿತು ಸ್ಪಷ್ಟ ಮಾಹಿತಿಗಳು ಲಭ್ಯವಿಲ್ಲ. ಆದರೆ ಜನರಲ್ ಜನತಾ ಪಾರ್ಟಿ ಹೇಳುವಂತೆ ಕಷ್ಟಪಟ್ಟು ಓದಿ ಕೊನೆ ಹಂತದಲ್ಲಿ ಅವಕಾಶ ತಪ್ಪಿ, ಮುಂದಿನ ಪ್ರಯತ್ನದಲ್ಲಿ ಖಂಡಿಸ ಪಾಸ್ ಆಗುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿರುವ ಎಲ್ಲರೂ ಈ ಪಾರ್ಟಿಯ ಸಂಸ್ಥಾಪಕರು ಎಂದಿದೆ.
ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಕಡಿಮೆ ಮಾಡುವುದು, ಮೀಸಲಾತಿ ನಿರ್ಮೂಲನೆ ಮಾಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಅರ್ಹತೆಗೆ ತಕ್ಕಂತೆ ಅವಕಾಶ ನೀಡುವುದು, ಪಾರದರ್ಶಕ ಪರೀಕ್ಷೆ, ಪಾರದರ್ಶಕ ನೇಮಕ ಸೇರಿದಂತೆ ಹಲವು ವಿಚಾರಗಳನ್ನು ಜನರಲ್ ಜನತಾ ಪಾರ್ಟಿ ಮುಂದಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ