‘ಮಾದರಿ’ ಕೇರಳದಲ್ಲಿ ಕೊರೋನಾ ಅಟ್ಟಹಾಸ!

By Kannadaprabha NewsFirst Published Oct 7, 2020, 7:17 AM IST
Highlights

‘ಮಾದರಿ’ ಕೇರಳದಲ್ಲಿ ಕೊರೋನಾ ಅಟ್ಟಹಾಸ| 10 ಲಕ್ಷಕ್ಕೆ 2421 ಸಕ್ರಿಯ ಕೇಸ್‌| ದೇಶದಲ್ಲೇ ಹೆಚ್ಚು| ಸೋಂಕು ನಿರ್ವಹಣೆಗಾಗಿ ಮೆಚ್ಚುಗೆ ಗಳಿಸಿದ್ದ ರಾಜ್ಯ| 

 

ಕೊಚ್ಚಿ(ಅ.07): ದೇಶದಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿ, ಬಳಿಕ ಸೋಂಕು ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಕೇರಳ ಸರಾಸರಿ ಸಕ್ರಿಯ ಸೋಂಕಿತರು ಹಾಗೂ ಹೊಸ ಸೋಂಕಿತರ ಪ್ರಮಾಣದಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೇರಿದೆ. ಜೊತೆಗೆ ರಾಜ್ಯ ಇನ್ನೆರಡು ವಾರದಲ್ಲಿ ತನ್ನ ಗರಿಷ್ಠ ಮಟ್ಟಮುಟ್ಟಬಹುದು ಎನ್ನಲಾಗಿದೆ.

ಪ್ರಸಕ್ತ ಕೇರಳದಲ್ಲಿ ಪ್ರತಿ 10 ಲಕ್ಷಕ್ಕೆ 2421 ಸಕ್ರಿಯ ಸೋಂಕಿತರು ಇದ್ದಾರೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (2297), ಕರ್ನಾಟಕ (1845), ದೆಹಲಿ (1503) ರಾಜ್ಯಗಳಿವೆ. ಅದೇ ರೀತಿ ಪ್ರತಿ 10 ಲಕ್ಷ ಜನರಿಗೆ ಹೊಸ ಕೇಸು ಪತ್ತೆಯಾಗುವುದರಲ್ಲೂ ಕೇರಳ ಮೊದಲ ಸ್ಥಾನದಲ್ಲಿದೆ. ಸೆ.26ರಿಂದ ಅ.3ರ ವಾರದಲ್ಲಿ ಕೇರಳದಲ್ಲಿ ಪ್ರತಿ 10 ಲಕ್ಷ ಜನರಿಗೆ 1599 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ದೆಹಲಿ (1198), ಕರ್ನಾಟಕ (1055), ಮಹಾರಾಷ್ಟ್ರ (976) ರಾಜ್ಯಗಳಿವೆ.

ಮತ್ತೊಂದೆಡೆ ಸೋಂಕು ಪರೀಕ್ಷೆ ವೇಳೆ ಸೋಂಕಿತರು ಪತ್ತೆಯಾಗುವ ಪ್ರಮಾಣ ಕೇರಳದಲ್ಲಿ ಶೇ.13.8ಕ್ಕೆ ಏರಿದೆ. ಇದು ರಾಷ್ಟ್ರೀಯ ಸರಾಸರಿಯಾದ ಶೇ.7.3ಕ್ಕಿಂತ ಬಹಳ ಹೆಚ್ಚಿದೆ. ಕೇರಳ ಹೊರತುಪಡಿಸಿದರೆ ಗರಿಷ್ಠ ಪ್ರಮಾಣ ಹೊಂದಿರುವ ಮತ್ತೊಂದು ರಾಜ್ಯವೆಂದರೆ ಮಹಾರಾಷ್ಟ್ರ (ಶೇ.16.7) ಎಂದು ವರದಿಗಳು ತಿಳಿಸಿವೆ.

click me!