
ನವದೆಹಲಿ: ಪ್ರತಿವರ್ಷ ಸರ್ಕಾರ ದೇಶದ ಜನತೆಗಾಗಿ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುತ್ತವೆ. ಹಾಗೆ ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಆದೇಶವನ್ನು ಪ್ರಕಟಿಸುತ್ತಿರುತ್ತವೆ. 2025ರಲ್ಲಿಯೂ ಹಲವು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಈ ಮೂಲಕ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ಸರ್ಕಾರಗಳು ಹೊಂದಿರುತ್ತವೆ. ಇದರ ಜೊತೆಗೆ ದೇಶವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುತ್ತವೆ. ಉಚಿತ ಪಡಿತರ ವಿತರಣೆ, ವಿದ್ಯುತ್, ಶಿಕ್ಷಣ, ಕೌಶಲ್ಯ ತರಬೇತಿ, ಪಿಂಚಣಿ, ತೆರಿಗೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒಳಗೊಂಡಿರುತ್ತವೆ. ಮೇ 1ರಿಂದ ದೇಶದ ಜನತೆಗೆ ಉಚಿತವಾಗಿ ಸಿಗಲಿರುವ ಪ್ರಮುಖ 10 ಸೇವೆಗಳ ಮಾಹಿತಿ ಇಲ್ಲಿವೆ.
1.ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Free Ration Scheme)
ಪ್ರತಿ ತಿಂಗಳು ದೇಶದ 80 ಕೋಟಿ ಜನರು ಈ ಯೋಜನೆಯಡಿಯಲ್ಲಿ 5 ಕೆಜಿ ಗೋಧಿ ಮತ್ತು 1 ಕೆಜಿ ಬೇಳೆಯನ್ನು ಉಚಿತವಾಗಿ ಪಡೆಯುತ್ತಾರೆ. ಮೋದಿ ಸರ್ಕಾರ ಕೋವಿಡ್ ಕಾಲಘಟ್ಟದಲ್ಲಿ ಈ ಯೋಜನೆಯನ್ನು ತಂದಿತ್ತು. ನಂತರ ಈ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಮೇ ತಿಂಗಳಲ್ಲಿಯೂ ಈ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗಲಿದೆ.
2.ಪಿಎಂ ಸೂರ್ಯು ಘರ್ ಉಚಿತ ವಿದ್ಯುತ್ ಯೋಜನೆ
ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತನ್ನು ಸೋಲಾರ್ ರೂಫ್ ಟಾಪ್ ಸಿಸ್ಟಮ್ ಮೂಲಕ ನೀಡಲಾಗುತ್ತದೆ. ಈ ಯೋಜನೆಯಿಂದ ಮನೆಗೆ ವರ್ಷಕ್ಕೆ 15 ರಿಂದ 18,000 ರೂಪಾಯಿ ಉಳಿತಾಯವಾಗುತ್ತದೆ.
3.ಯುನೈಫೈಡ್ ಪೆನ್ಷನ್ ಸ್ಕೀಮ್ (UPS - Unified Pension Scheme)
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ಮಾಸಿಕ ಪಿಂಚಣಿ 10,000 ರೂ. ನೀಡಲಾಗುತ್ತದೆ. ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ 10% ರಷ್ಟು ಕೊಡುಗೆ ನೀಡಬೇಕು. ಅಸ್ತಿತ್ವದಲ್ಲಿರುವ NPS ಕವರ್ ಹೊಂದಿರುವ ಉದ್ಯೋಗಿಗಳು ಮತ್ತು ಏಪ್ರಿಲ್ 1, 2025 ರ ನಂತರ ನೇಮಕಗೊಂಡವರು ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರ ಈ ಯೋಜನೆಯಿಂದಾಗಿ ಆರ್ಥಿಕ ಭದ್ರತೆ ಸಿಗುತ್ತದೆ.
4.ಜಿಎಸ್‌ಟಿ ವಿನಾಯ್ತಿ (GST Exemption)
ಕೇಂದ್ರ ಸರ್ಕಾರ ಹಲವು ವಸ್ತುಗಳಿಗೆ ಜಿಎಸ್‌ಟಿ ವಿನಾಯ್ತಿಯನ್ನು ನೀಡಿದೆ. ಈ ವಿನಾಯ್ತಿ ಮೇ ತಿಂಗಳಲ್ಲಿಯೂ ಮುಂದುವರಿಯಲಿದೆ. ತಾಜಾ ಹಾಲು, ಮೊಸರು, ಮೊಟ್ಟೆ, ಹಣ್ಣು-ತರಕಾರಿ ಮೇಲೆ ಸಂಪೂರ್ಣ ಜಿಎಸ್‌ಟಿ ವಿನಾಯ್ತಿ ಒದಗಿಸಲಾಗಿದೆ. ಎಲ್‌ಸಿಡಿ, ಎಲ್‌ಇಡಿ ಕಾಂಪೊನೆಟ್ಸ್ ಮೇಲೆ ಶೇ.5ರಷ್ಟು ವಿನಾಯ್ತಿ.
5.ಟಿಡಿಎಸ್ ಲಿಮಿಟ್ ಹೆಚ್ಚಳ (TDS Limit Increase)
6.ನ್ಯೂ ಸ್ಕಿಲಿಂಗ್ ಪ್ರೋಗ್ರಾಂ (New Skill Training Program)
ಮುಂದಿನ 5 ವರ್ಷಗಳಲ್ಲಿ ಈ ಯೋಜನೆಯಡಿ 20 ಲಕ್ಷ ಯುವಕ/ತಿಯರಿಗೆ ತರಬೇತಿ ನೀಡಲಾಗುವುದು. ಈ ವಿಶೇಷ ತರಬೇತಿಯಿಂದ ಯುವ ಸಮುದಾಯಕ್ಕೆ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗುತ್ತದೆ. ಸ್ಕೂಲ್-ಕಾಲೇಜ್ ಡ್ರಾಪ್ ಔಟ್, ನಿರುದ್ಯೋಗಿಗಳು ಈ ಯೋಜನೆ ಮೂಲಕ ತರಬೇತಿ ಪಡೆದು ಕುಶಲಕರ್ಮಿಗಳು ಆಗಬಹುದು.
7.ಇನ್‌ಟರ್ನ್‌ಶಿಪ್ ಸ್ಕೀಮ್ (Internship Scheme)
ಮುಂದಿನ 5 ವರ್ಷದಲ್ಲ 1 ಕೋಟಿ ಯುವ ಜನತೆಗೆ ಉಚಿತವಾಗಿ ಇಂಟರ್ನ್‌ಶಿಪ್ ನೀಡಲಾಗುತ್ತದೆ. ಈ ವೇಳೆ ಶಿಷ್ಯವೇತನವನ್ನು ಸಹ ನೀಡಲಾಗುತ್ತದೆ. ಇನ್‌ಟರ್ನ್‌ಶಿಪ್ ಬಳಿಕ ಅಲ್ಲಿಯೇ ಉದ್ಯೋಗ ಸಿಗುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ: 189 ದೇಶಕ್ಕೆ ಹೋದರೂ ಅನ್‌ಲಿಮಿಟೆಡ್, ರೋಮಿಂಗ್ ಡೇಟಾ ಪ್ಲಾನ್ ಘೋಷಿಸಿದ ಏರ್‌ಟೆಲ್
8.ಕ್ರೆಡಿಟ್ ಗ್ಯಾರಂಟಿ ಸ್ಕೀಮ್ (Credit Guarantee Scheme)
ಈ ಯೋಜನೆಯಡಿಯಲ್ಲಿ ಯಾವುದೇ MSMEsಗೆ ಯಾವುದೇ ಗ್ಯಾರಂಟಿ ಇಲ್ಲದೇ 100 ಕೋಟಿ ರೂಪಾಯಿವರೆಗೆ ಸಾಲ ದೊರೆಯುತ್ತದೆ. ಈ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
9.ಉಚಿತ ಆರೋಗ್ಯ ವಿಮೆ (Free Health Insurance)
ಈ ಯೋಜನೆಯಡಿ ಹೆಲ್ತ್ ವರ್ಕರ್‌ಗೆ 50 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಕೋವಿಡ್ 19 ಅಥವಾ ಕರ್ತವ್ಯದಲ್ಲಿದ್ದಾಗ ಮೃತರಾದ್ರೆ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯಲಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಹೆಲ್ತ್ ವರ್ಕರ್‌ಗೆ ಈ ಯೋಜನೆಯ ಲಾಭ ಸಿಗಲಿದೆ.
10.ಉಜ್ವಲ ಯೋಜನೆ (Ujjwala Yojana)
ಈ ಯೋಜನೆಯಡಿ ಬಡವರಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೆನಕ್ಷನ್ ನೀಡಲಾಗುತ್ತದೆ. ಈ ಯೋಜನೆಯೂ ಮೇ ತಿಂಗಳಲ್ಲಿ ಮುಂದುವರಿಯಲಿದೆ.
ಇದನ್ನೂ ಓದಿ: ಪ್ಯಾನ್-ಆಧಾರ್ ಸುರಕ್ಷತೆ: ಡೇಟಾ ಕಳ್ಳತನ ತಡೆಯುವುದು ಹೇಗೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ