ಟ್ವೀಟರ್‌ಗೆ ಸಡ್ಡು: ದೇಶಿ ‘ಕೂ’ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ!

By Suvarna News  |  First Published Feb 11, 2021, 8:42 AM IST

ಟ್ವೀಟರ್‌ಗೆ ಸಡ್ಡು: ದೇಶಿ ‘ಕೂ’ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ| ಸಚಿವ ಪಿಯೂಷ್‌, ಪ್ರಸಾದ್‌, ಕ್ರಿಕೆಟಿಗ ಕುಂಬ್ಳೆ, ಸಿಎಂ ಚೌಹಾಣ್‌, ಜಗ್ಗಿ ವಾಸುದೇವ್‌ ಖಾತೆ ಆರಂಭ


ನವದೆಹಲಿ(ಫೆ.11): ಅಮೆರಿಕ ಮೂಲದ ಟ್ವೀಟರ್‌ ಸಂಸ್ಥರತ ಸರ್ಕಾರದೊಂದಿಗೆ ತಿಕ್ಕಾಟಕ್ಕೆ ಇಳಿದಿರುವಾಗಲೇ, ಟ್ವೀಟರ್‌ಗೆ ಪರ್ಯಾಯ ಎಂದೇ ಬಿಂಬಿತ ದೇಶೀ ಚುಟುಕು ಜಾಲತಾಣ ‘ಕೂ’ನಲ್ಲಿ ಹಲವು ಕೇಂದ್ರ ಸಚಿವರು, ಬಿಜೆಪಿ ನಾಯಕರು, ಮುಖ್ಯಮಂತ್ರಿಗಳು, ಕ್ರಿಕೆಟಿಗರು, ಧಾರ್ಮಿಕ ನಾಯಕರು ಖಾತೆ ತೆರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಟ್ವೀಟರ್‌ ರೀತಿಯಲ್ಲೇ ಸೇವೆ ನೀಡುವ ಈ ದೇಶಿ ಆ್ಯಪ್‌ ‘ಕೂ’ನಲ್ಲಿ ಇದೀಗ ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌, ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಸದ್ಗುರು ಜಗ್ಗಿ ವಾಸುದೇವ್‌ ಖಾತೆ ತೆರೆದಿದ್ದು, ಈ ಪಟ್ಟಿಗೀಗ ಮತ್ತೋರ್ವ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಕೂಡಾ ಸೇರಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರದ ಹಲವು ಇಲಾಖೆ, ಸಚಿವಾಲಯಗಳು ಕೂಡಾ ಕೂ ನಲ್ಲಿ ತಮ್ಮ ಖಾತೆ ತೆರೆದಿವೆ.

Latest Videos

undefined

ಸುವರ್ಣ ನ್ಯೂಸ್ ಕೂ ಆ್ಯಪ್ ಆ್ಯಪ್ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಕೂ ನಲ್ಲಿ ಮಾಹಿತಿ ನೀಡಿರುವ ಗೋಯಲ್‌, ‘ನಾನೀನ ಕೂ ನಲ್ಲೂ ಇದ್ದೇನೆ. ತತ್‌ಕ್ಷಣದ, ಎಕ್ಸ್‌ಕ್ಲೂಸಿವ್‌ ಮಾಹಿತಿಗಾಗಿ ಭಾರತೀಯ ಚುಟುಕು ಜಾಲತಾಣದಲ್ಲಿ ನನ್ನೊಂದಿಗೆ ಸೇರಿಕೊಳ್ಳಿ. ಕೂ ನಲ್ಲಿ ನಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ’ ಎಂದಿದ್ದಾರೆ.

click me!