ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

By Suvarna NewsFirst Published May 24, 2020, 11:31 AM IST
Highlights

ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

ಧೀಮಾಪುರ(ಮೇ.24): ದೂರದ ಚೀನಾದ ವುಹಾನ್‌ ಎಂಬ ನಗರದಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ನೋಡನೋಡುತ್ತಿದ್ದಂತೆಯೇ ವಿಶ್ವದೆಲ್ಲೆಡೆ ಹರಡಿ ಜನರ ನಿದ್ದೆಗೆಡಿಸಿದೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಅನೇಕ ಮಂದಿ ತಮ್ಮ ಮನೆಯಿಂದ ದೂರ ಸಿಲುಕಿದ್ದಾರೆ. ಈ ನಡುವೆ ಹಲವಾರು ಸಾವು ನೋವು ಸಂಭವಿಸುತ್ತಿವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೆಲ ಸಾಹಸ ಹಾಗೂ ಮಾನವೀಯತೆಯಿಂದ ಕೂಡಿದ ವರದಿಗಳೂ ಸದ್ದು ಮಾಡುತ್ತವೆ.  ಸದ್ಯ ಕರ್ನಾಟಕದ ಇಬ್ಬರು ಚಾಲಕರು ದೂರದ ನಾಗಾಲ್ಯಾಂಡ್‌ನ ಮಹಿಳೆಯ ಶವ ಆಕೆ ಕುಟುಂಬಕ್ಕೆ ಹಸ್ತಾಂತರಿಸಲು ಬರೋಬ್ಬರಿ ಮೂರು ಸಾವಿರ ಕಿ. ಮೀ ದೂರ ಆಂಬುಲೆನ್ಸ್ ಚಲಾಯಿಸಿರುವ ಘಟನೆ ವರದಿಯಾಗಿದೆ.

ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್!

ಹೌದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಾಗಾಲ್ಯಾಂಡ್‌ನ ಸುಮಿ ಸಮುದಾಯದ ಮಹಿಳೆಯೊಬ್ಬಳಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೇ. 15ರಂದು ಮೃತಪಟ್ಟಿದ್ದರು. ಹೀಗಿರುವಾಗ ಚಾಲಕರಾದ ಕೋಮಟಿಗುಂಟ ಶಿವಪ್ರಸಾದ್ ಹಾಗೂ ಭಾಸ್ಕರ್ ಕೆ. ವಿ ಬರೋಬ್ಬರಿ ಮೂರು ಸಾವಿರ ಕಿ. ಮೀಟರ್‌ ದೂರದಲ್ಲಿರುವ ನಾಗಾಲ್ಯಾಂಡ್‌ನ ದೀಮಪುರಕ್ಕೆ ತೆರಳಿ ಮೇ. 19ರಂದು ಮೃತ ಮಹಿಳೆಯ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಿದ್ದಾರೆ. 

ಇನ್ನು ಬೆಂಗಳೂರಿನಿಂದ ಹೊರಟಿದ್ದ ಕೋಮಟಿಗುಂಟ ಶಿವಪ್ರಸಾದ್ ಹಾಗೂ ಭಾಸ್ಕರ್ ಕೆ. ವಿ ಜೊತೆ ಅಘೋಟೋ ಝಿಮೋಮಿ ಹಾಗೂ ಹುಕಾಟೋ ಹೆಸರಿನ ನಾಗಾಲ್ಯಾಂಡ್‌ನ ಇಬ್ಬರು ಯುವಕರೂ ತೆರಳಿದ್ದರೆಂಬುವುದು ಉಲ್ಲೇಖನೀಯ. ಈ ಚಾಲಕರು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಹೀಗೆ ಒಟ್ಟು ಒಂಭತ್ತು ರಾಜ್ಯಗಳ ಮೂಲಕ ನಾಗಾಲ್ಯಾಂಡ್ ತಲುಪಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸರಿಯಾಗಿ ಆಹಾರವೂ ಸಿಕ್ಕಿರಲಿಲ್ಲ ಎಂಬುವುದು ಚಾಲಕರ ಮಾತಾಗಿದೆ.

ಆ್ಯಂಬುಲೆನ್ಸ್‌ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!

ಇನ್ನು ಈ ಯುವತಿಯ ಮೃತದೇಹವನ್ನು ಬೆಂಗಳೂರಿನಿಂದ ದೀಮಾಪುರಕ್ಕೆ ಸಾಗಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸುಮಿ ವಿದ್ಯಾರ್ಥಿಗಳ ಸಂಘ ಬೆಂಗಳೂರು ಹಾಗೂ ಸುಮಿ ಸಹಭಾಗಿತ್ವದಲ್ಲಿ ಮಾಡಲಾಗಿತ್ತು.
 

click me!