Asianet Suvarna News Asianet Suvarna News

ಆ್ಯಂಬುಲೆನ್ಸ್‌ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!

ಟ್ರಾಫಿಕ್ ನಿಯಮ ಪಾಲಿಸುವುದರಲ್ಲಿ ಭಾರತೀಯರು ಎಲ್ಲರಿಗಿಂತ ಭಿನ್ನ. ದುಬಾರಿ ಮೊತ್ತದ ಫೈನ್ ಜಾರಿಗೆ ತಂದಾಗ ಪ್ರತಿಭಟನೆಗೆ ಬಹುತೇಕರು ಸಜ್ಜಾಗಿದ್ದರು. ಆದರೆ ನಿಯಮ ಪಾಲಿಸಲು ಮಾತ್ರ ಹಲವರಿಗೆ ಅಸಡ್ಡೆ. ಅದರಲ್ಲೂ ತುರ್ತು ಸೇವೆಗಳಿಗೆ ಅಡ್ಡಿ ಪಡಿಸಿದರೆ ದುಬಾರಿ ದಂಡ ಮಾತ್ರವಲ್ಲ, ಜೈಲು ಶಿಕ್ಷೆ ಕೂಡ ಅನುಭವಿಸಬೇಕು. ಹೀಗೆ ಆ್ಯಂಬುಲೆನ್ಸ್‌ಗೆ 17 ವರ್ಷದ ಬಾಲಕನೋರ್ವ ದಾರಿ ಬಿಡದೆ ಅಡ್ಡಿ ಪಡಿಸಿದ್ದಾನೆ. ಇದೀಗ ಬಾಲಕ ಹಾಗೂ ಪೋಷಕರ ಮೇಲೆ ಕೇಸ್ ದಾಖಲಾಗಿದೆ.
 

Minor driving a Hyundai Creta obstructed ambulance cops fined him
Author
Bengaluru, First Published Apr 30, 2020, 3:13 PM IST

ಗೋವಾ(ಏ.30): ಸಿಗ್ನಲ್ ಜಂಪ್, ನೋ ಪಾರ್ಕಿಂಗ್‌ಗಿಂತ ಅತೀ ದೊಡ್ಡ ಅಪರಾಧ ತುರ್ತು ಸೇವೆಗೆ ಅಡ್ಡಿ ಪಡಿಸುವುದು. ಇದೀಗ 17ರ ಪೋರ ತುರ್ತು ಸೇವೆಯಲ್ಲಿದ್ದ ಆ್ಯಂಬುಲೆನ್ಸ್‌ಗೆ ಸುಮಾರು 5 ಕೀಲೋಮೀಟರ್ ದೂರದ ವರೆಗೆ ದಾರಿ ಬಿಡದೆ ದರ್ಪ ತೋರಿದ ಘಟನೆ ನಡೆದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು 17ರ ಪೋರ ಹಾಗೂ ಆತನ ಪೋಷಕರಿಗೆ ದುಬಾರಿ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸಿದ್ದಾರೆ. 

ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!..

ತುರ್ತು ಸೇವೆಯಲ್ಲಿದ್ದ ಆ್ಯಂಬುಲೆನ್ಸ್ ಸೈರನ್ ಮಾಡುತ್ತ ವೇಗವಾಗಿ ಚಲಿಸುತ್ತಿತ್ತು. ರೋಗಿಯೊಬ್ಬರನ್ನು ಆಸ್ಪತ್ರೆ ಸೇರಿಸುವ ಧಾವಂತದಲ್ಲಿದ್ದ ಆ್ಯುಂಬುಲೆನ್ಸ್‌ಗೆ ಹ್ಯುಂಡೈ ಕ್ರೆಟಾ ಅಡ್ಡಿಯಾಗಿದೆ. ಸಿಂಗಲ್ ರೂಟ್‌ನಲ್ಲಿ ಆ್ಯಂಬುಲೆನ್ಸ್ ಹಾರ್ನ್, ಸೈರನ್ ಮಾಡಿದರೂ ಕ್ರೆಟಾ ಕಾರು ಮಾತ್ರ ದಾರಿ ಬಿಡಲೇ ಇಲ್ಲ. ಉದ್ದೇಶ ಪೂರ್ವಕವಾಗಿ ಆ್ಯುಂಬುಲೆನ್ಸ್ ದಾರಿ ನೀಡದೆ ಮಜಾ ತೆಗೆದುಕೊಳ್ಳುತ್ತಿದ್ದ.

ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ!

ಸಿಂಗಲ್ ರೂಟ್ ಆದ ಕಾರಣ ಓವರ್ ಟೇಕ್ ಮಾಡುವಷ್ಟು ಅಗಲವಾದ ರಸ್ತೆ ಆಗಿರಲಿಲ್ಲ. ಮುಂಭಾಗದಲ್ಲಿರವ ವಾಹನ ಸೈಡ್ ನೀಡಿದರೇ ಮಾತ್ರ ಓವರ್ ಟೇಕ್ ಮಾಡಲು ಸಾಧ್ಯ. ಆದರೆ ಕ್ರೆಟಾ ಕಾರು ಆ್ಯಂಬುಲೆನ್ಸ್ ಹತ್ತಿರ ಬರುತ್ತಿದ್ದಂತೆ ಅಡ್ಡಾ ದಿಡ್ಡಿ ಚಲಾಯಿಸಿದ್ದಾನೆ. ಇಷ್ಟೇ ಅಲ್ಲ ದಿಢೀರ್ ಬ್ರೇಕ್ ಹಾಕಿ ಭಯ ಸೃಷ್ಟಿಸಿದ್ದಾನೆ. ಇತ್ತ ಆ್ಯಂಬುಲೆನ್ಸ್‌ನಲ್ಲಿದ್ದ ಆಸ್ಪತ್ರೆ ಸಿಬ್ಬಂಧಿ ಮೊಬೈಲ್ ಮೂಲಕ ಕ್ರೆಟಾ ಕಾರಿನ ಪುಂಡಾಟವನ್ನು ಸೆರೆ ಹಿಡಿದಿದ್ದಾರೆ.

ಗೋವಾ ಪೊಲೀಸರು ವಿಡಿಯೋ ಆಧರಿ ಕ್ರೆಟಾ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದ್ದಾರೆ. ಆ್ಯಂಬುಲೆನ್ಸ್‌ಗೆ ಅಡ್ಡಿ ಪಡಿಸದ ವೇಳೆ ಮಾಲೀಕ 17 ವರ್ಷದ ಪುತ್ರ ಡ್ರೈವಿಂಗ್ ಮಾಡುತ್ತಿದ್ದ. ಹೀಗಾಗಿ ಪೊಲೀಸರು ಅಪ್ರಾಪ್ತ ವಯಸ್ಸಿನಲ್ಲಿ ಡ್ರೈವಿಂಗ್ ಕೇಸ್, ಜೊತೆಗೆ ತುರ್ತು ಸೇವೆಗೆ ಅಡ್ಡಿ ಎರಡು ಕೇಸ್ ದಾಖಲಿಸಿದ್ದಾರೆ. 10,000 ರೂಪಾಯಿ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಪ್ರಾಪ್ತ ಕಾರಣ ಪೊಲೀಸರು 17 ವರ್ಷದ ಹುಡುಗನನ್ನು ಬಾಲಅಪರಾಧ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. 
 

Follow Us:
Download App:
  • android
  • ios