
ದೆಹಲಿ (ಜು.26) ಗೆಳೆತನ, ಲೀವ್ ಇನ್ ರಿಲೇಶನ್‌ಶಿಪ್, ಪ್ರೀತಿ ಹೀಗೆ ಹಲವು ಸಂಬಂಧಗಳು ಮದುವೆ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಅಂತ್ಯಗೊಂಡು ಕೋರ್ಟ್ ಮೆಟ್ಟಿಲೇರಿದ ಹಲವು ಘಟನೆಗಳಿವೆ. ಎಲ್ಲಾ ಪ್ರಕರಣಗಳಲ್ಲಿ ಕೇಳಿ ಬರುವ ಪ್ರಮುಖ ಆರೋಪ ದೈಹಿಕ ಸಂಪರ್ಕ. ಇದೀಗ ಅಪ್ರಾಪ್ತೆಯೊಂದಿಗೆ ಗೆಳೆತನ ಬೆಳೆಸಿದ ವ್ಯಕ್ತಿ ಬಳಿಕ ಆಕೆಯೊಂದಿಗೆ ಆತ್ಮೀಯನಾಗಿದ್ದಾನೆ. ಬಳಿಕ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ದೂರವಾಗಿದ್ದಾನೆ. ಈ ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದರು.ಬಂಧನದಲ್ಲಿರುವ ಆರೋಪಿ ಆಕೆ ತನ್ನ ಗೆಳತಿಯಾಗಿದ್ದಳು, ಅತ್ಮೀಯಳಾಗಿದ್ದಳು. ಹೀಗಾಗಿ ಈ ಪ್ರಕರಣ ಅತ್ಯಾ*ರ ಪರಿಗಣಿಸದೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆಯೊಂದಿಗೆ ಜಾಮೀನು ನೀರಾಕರಿಸಿದೆ.
ಗೆಳೆತನ ದೆಹಿಕ ಸಂಪರ್ಕಕ್ಕೆ ಕೊಡುವ ಅನುಮತಿಯಲ್ಲ
ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ. ಆತ್ಮೀಯತೆ, ಗೆಳೆತನ ಎಲ್ಲವೂ ಒಕೆ. ಆದರೆ ಈ ಗೆಳತನ ಅನ್ನೋದು ದೈಹಿಕ ಸಂಪರ್ಕಕ್ಕೆ ಕೊಟ್ಟ ಅನುಮತಿ ಅಲ್ಲ. ಯಾವುದೇ ಹುಡುಗಿ ಜೊತೆಗೆ ಫ್ರೆಂಡ್‌ಶಿಪ್ ಇದೆ ಎಂದರೆ ಅದು ನಿಮಗೆ ಸಿಕ್ಕ ದೈಹಿಕ ಸಂಪರ್ಕದ ಲೈಸೆನ್ಸ್ ಅಲ್ಲ. ಇಷ್ಟೇ ಅಲ್ಲ ಅಪ್ರಾಪ್ತೆ ಮೇಲೆ ಅತ್ಯಾ*ರ ನಡೆದಿದೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಜಸ್ಟೀಸ್ ಗಿರೀಶ್ ಕಠಪಾಲಿಯಾ ಅರ್ಜಿ ತಿರಸ್ಕರಿಸಿದ ಘಟನೆ ನಡೆದಿದೆ.
ಏನಿದು ರಿಲೇಶನ್‌ಶಿಪ್ ಪ್ರಕರಣ ?
ವಿಕಾಸಪುರಿ ನಿವಾಸಿಯೊಬ್ಬ ಅಪ್ರಾಪ್ತೆ ಜೊತೆ ಗೆಳೆತನ ಬೆಳೆಸಿದ್ದಾನೆ. ಇಬ್ಬರು ಆತ್ಮೀಯರಾಗಿದ್ದಾರೆ. 2023ರಲ್ಲಿ ಕೆಲ ಕಾರಣ ನೀಡಿ ಆಕೆಯಿಂದ ದೂರವಾಗಿದ್ದಾನೆ. ಆದರೆ ಜೊತೆಗಿರುವ ಕೆಲ ಫೋಟೋ, ವಿಡಿಯೋಗಳನ್ನು ಬಳಸಿಕೊಂಡು ಈತ ಆಕೆಯನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. 2023ರ ಎಪ್ರಿಲ್ ತಿಂಗಳನಲ್ಲಿ ಅಪ್ರಾಪ್ತೆ ಗೆಳತನದಿಂದ ದೂರವಾದ ಬಳಿಕ ನವೆಂಬರ್ ವರೆಗೆ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹಲವು ಬೆದರಿಕೆ ಹಾಕಿದ ಕಾರಣ ಅಪ್ರಾಪ್ತೆ ಅನಿವಾರ್ಯವಾಗಿ ಮೌನಕ್ಕೆ ಜಾರಿದ್ದಳು.
ಅಪ್ರಾಪ್ತೆ ಆಪ್ತರು ನೀಡಿದ ಧೈರ್ಯದಿಂದ ಪ್ರಕರಣ ದಾಖಲು
ಅಪ್ರಾಪ್ತೆ ಆಪ್ತರು ಧೈರ್ಯ ತುಂಬಿದ್ದಾರೆ. ಬಳಿಕ ಕುಟುಂಬಸ್ಥರಿಗೂ ಪ್ರಕರಣ ಗೊತ್ತಾಗಿದೆ. ಹೀಗಾಗಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಂತ್ರಸ್ತೆ ತನ್ನ ಗೆಳೆತಿಯಾಗಿದ್ದಳು. ದೈಹಿಕ ಸಂಪರ್ಕದ ವೇಳೆ ಆಕೆ ಅಪ್ರಾಪ್ತೆ ಆಗಿರಲಿಲ್ಲ. ಈ ಪ್ರಕರಣ ಬಲವಂತದ ಅತ್ಯಾ*ರವಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಶಾಲಾ ದಾಖಲೆ ಪ್ರಕಾರ ಅಪ್ರಾಪ್ತೆ
ಆರೋಪಿ ವಾದದ ಪ್ರಕಾರ ಕೋರ್ಟ್ ಅಪ್ರಾಪ್ತೆಯ ಶಾಲಾ ದಾಖಲೆ ಪರಿಶೀಲಿಸಿದೆ. ಈ ವೇಳೆ ಈಕೆ ಅಪ್ರಾಪ್ತೆ ಅನ್ನೋದು ಖಚಿತವಾಗಿದೆ. ಹೀಗಾಗಿ ಆರೋಪಿ ವಿರುದ್ದ ಪೋಕ್ಸೋ ಕೇಸ್ ದಾಖಲಾಗಿದೆ. ಅನುಮತಿ ಇಲ್ಲದೆ ನಡೆಸಿದ ಸಂಪರ್ಕವಾಗಿದೆ. ಗೆಳತನ ಹೆಸರಿನಲ್ಲಿ ದೈಹಿಕ ಸಂಪರ್ಕಕ್ಕೆ ಯಾವುದೇ ಅವಕಾಶವಿಲ್ಲ. ಗೆಳತನ ದೈಹಿಕ ಸಂಪರ್ಕಕ್ಕೆ ಕೊಡುವ ಲೈಸೆನ್ಸ್ ಅಲ್ಲ. ಒಂದು ವೇಳೆ ಆಕೆಯ ಒಪ್ಪಿಗೆ ಮೇರೆಗೆ ಸಂಪರ್ಕ ಬೆಳಸಿದ್ದರೂ ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಸ್ಪಷ್ಟ. ಕಾರಣ ಆಕೆ ಅಪ್ರಾಪ್ತೆ ಎಂದು ಕೋರ್ಟ್ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ