Pulwama Operation ಪುಲ್ವಾಮಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ,JeM ಉಗ್ರ ಸಂಘಟನೆಯ ನಾಲ್ವರ ಸೆರೆ!

By Suvarna News  |  First Published Mar 13, 2022, 8:39 PM IST
  • ಜೈಶ್ ಇ ಮೊಹಮ್ಮದ್ ಉಗ್ರಸಂಘಟನೆಯ ನಾಲ್ವರು ಅರೆಸ್ಟ್
  • ಶಸ್ತ್ರಾಸ್ತ್ರ ಸೇರಿ ಸ್ಫೋಟಕಗಳನ್ನು ಉಗ್ರರಿಗೆ ರವಾನಿಸುತ್ತಿದ್ದ ನಾಲ್ವರು
  • ಬಹುದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ
     

ಪುಲ್ವಾಮಾ(ಮಾ.13): ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದ 4 ದಿನಗಳಲ್ಲಿ ನಾಲ್ಕಕ್ಕೂ ಹೆಚ್ಚು ಉಗ್ರರ ದಾಳಿಯಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಪರಿಣಾಮ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರನ್ನು ಸೇನೆ ಬಂಧಿಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲಿಯಲ್ಲಿ ಭಾರತೀಯ ಸೇನೆ ಸತತ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಉಗ್ರರು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಅರೆಸ್ಟ್ ಮಾಡಿರುವ ಉಗ್ರರನ್ನು ಚೆವಾ ಕಲ್ಲನ್ ಗ್ರಾಮದ ಇಮ್ತಿಯಾಝ್ ಅಹಮ್ಮದ್, ಮದರಸಾ ಆಡಳಿ ಮಂಡಳಿ ಸದಸ್ಯ ನಾಸೀರ್ ಅಹಮ್ಮದ್ ಮಲ್ಲಿಕ್, ರಾಯೀಸ್ ಅಹಮ್ಮದ್ ಹಾಗೂ ಯಾವರ್ ರಶೀದ್ ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ. 

Tap to resize

Latest Videos

ಪೊಲೀಸ್ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಸಾವು

ಕಾಶ್ಮೀರ ಎನ್‌ಕೌಂಟರ್‌: ಪಾಕ್‌ ಕಮಾಂಡರ್‌ ಸೇರಿ ನಾಲ್ವರ ಹತ್ಯೆ, ಓರ್ವ ಸೆರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆ ವೇಳೆ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಪಾಕಿಸ್ತಾನಿ ಕಮಾಂಡರ್‌ ಸೇರಿದಂತೆ ನ್ವಾಲರು ಭಯೋತ್ವಾದಕರನ್ನು ಹತ್ಯೆಗೈಯಲಾಗಿದ್ದು, ಒಬ್ಬ ಉಗ್ರನನ್ನು ಸೆರೆ ಹಿಡಿಯಲಾಗಿದೆ. ದಾಳಿಯಲ್ಲಿ ಹತ್ಯೆಯಾದವರಲ್ಲಿ ಒಬ್ಬನನ್ನು ಜೈಷ್‌ ಸಂಘಟನೆಯ ಕಮಾಂಡರ್‌ ಕಮಾಲ್‌ ಭಾಯಿ ಅಲಿಯಾಸ್‌ ಜಟ್‌ ಎಂದು ಗುರುತಿಸಲಾಗಿದೆ. ಈತ ಕಳೆದ 2018ರಿಂದ ಹಲವಾರು ಭಯೋತ್ವಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಹಾಗೂ ಪುಲ್ವಾಮ-ಶೋಪಿಯಾನ್‌ ಪ್ರದೇಶದಲ್ಲಿ ಸಕ್ರಿಯವಾಗಿದ್ದ. ಪುಲ್ವಾಮಾ, ಗಂದರ್‌ಬಾಲ್‌, ಹಂದ್ವಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.

Army Chopper Crash ಇಂಡೋ-ಪಾಕ್ ಗಡಿ ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ, ಪೈಲೆಟ್ ಸಾವು!

ಜೈಷ್‌ ಕಮಾಂಡರ್‌ ಸೇರಿ ಐವರು ಉಗ್ರರು ಸೇನೆಯ ಗುಂಡಿಗೆ ಬಲಿ
ಜಮ್ಮುಕಾಶ್ಮೀರದಲ್ಲಿ ಶನಿವಾರ ರಾತ್ರಿ ನಡೆದ 2 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಸೇರಿ ಐವರು ಉಗ್ರರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ.ಪುಲ್ವಾಮ ಮತ್ತು ಬದ್ಮಾಮ್‌ಗಳಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇಲೆ ಸೇನಾಪಡೆಗಳು ಕಾರ್ಯಾಚರಣೆ ನಡೆಸಿದ್ದವು.ಜೈಷ್‌ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್‌ ಝಾಜಿದ್‌ ವಾನಿ ಈ ಕಾರ್ಯಾರಚಣೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪುಲ್ವಾಮ ಐಜಿಪಿ ತಿಳಿಸಿದ್ದಾರೆ. ವಾನಿ 2017ರಿಂದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಕಣಿವೆ ರಾಜ್ಯದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತು ಯುವಕರನ್ನು ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದ. ಸಮೀರ್‌ ದಾರ್‌ ಅವರನ್ನು ಹತ್ಯೆ ಮಾಡಿದ ನಂತರ ಈತನನ್ನು ಜಿಲ್ಲಾ ಕಮಾಂಡರ್‌ ಆಗಿ ನೇಮಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಕಂದಹಾರ್‌ ಏರಿಂಡಿಯಾ ವಿಮಾನ ಅಪಹರಿಸಿದ್ದ ಪಾಕ್‌ ಉಗ್ರ ಬಲಿ
1999ರಲ್ಲಿ ಏರ್‌ ಇಂಡಿಯಾ ಐಸಿ - ​814 ವಿಮಾನವನ್ನು ಕಾಠ್ಮುಂಡುವಿನಿಂದ ಅಪ್ಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿದ್ದ ಜಹೂರ್‌ ಮಿಸ್ತ್ರಿ ಎಂಬ ಜೈಷ್‌ ಎ ಮೊಹಮ್ಮದ್‌ ಉಗ್ರ ಪಾಕಿಸ್ತಾನದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾನೆ. ಮಾ 1ರಂದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜಹೂರ್‌ ಮಿಸ್ತ್ರಿ ಯನ್ನು ಕರಾಚಿಯಲ್ಲಿನ ಆತನ ಮನೆಯ ಬಳಿಯೇ ಗುಂಡಿಟ್ಟು ಕೊಂದಿದ್ದಾರೆ. ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಸ್ಕ್‌ ಧರಿಸಿದ್ದ ಕಾರಣ ಅವರ ಗರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಹೂರ್‌ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ, ಆದರೆ ವ್ಯಾಪಾರಿಯಂತೆ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.

click me!