
ನವದೆಹಲಿ : ಭಾರತದ ಸೇನೆಯ ಭಾಗವಾಗಿರುವ ಸಿ-130 ಜೆ ವಿಮಾನಗಳ ನಿರ್ವಹಣೆಗೆಂದೇ ಅತ್ಯಾಧುನಿಕ ಘಟಕವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಸೋಮವಾರ ಇದರ ಶಂಕುಸ್ಥಾಪನೆ ನೆರವೇರಿದೆ.
ವಿಮಾನದ ನಿರ್ಮಾಣ ಸಂಸ್ಥೆಯಾದ ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಜೊತೆಗೂಡಿ ಭಾರತದ ಟಾಟಾ ಅಡ್ವಾನ್ಸ್ಡ್‌ಸಿಸ್ಟಮ್ಸ್ ಈ ಘಟಕ ಸ್ಥಾಪಿಸುತ್ತಿವೆ. ಬೆಂಗಳೂರು ಅತ್ಯಂತ ಆಯಕಟ್ಟಿನ ಸ್ಥಳವಾಗಿರುವ ಕಾರಣ ಇಲ್ಲಿ ಎಂಆರ್‌ಓ ಘಟಕ ತೆರೆಯಲಾಗುತ್ತಿದ ಎಂದು ಉಭಯ ಕಂಪನಿಗಳೂ ಹೇಳಿವೆ.
ಹೊಸದಾಗಿ ನಿರ್ಮಿಸಲಾಗುತ್ತಿರುವ ಎಂಆರ್‌ಓ ಕೇಂದ್ರವು ಸಿ-130 ಜೆ ವಿಮಾನಗಳ ನಿರ್ವಹಣೆ, ಉಪಕರಣಗಳ ರಿಪೇರಿ, ಪರಿಶೀಲನೆ ಮತ್ತು ಪರೀಕ್ಷೆಗಳನ್ನು ನಡೆಸುತ್ತದೆ. ಜೊತೆಗೆ ವಿಮಾನಗಳ ತಾಂತ್ರಿಕ ಉನ್ನತೀಕರಣ, ಭಾರತೀಯ ಎಂಜಿನಿಯರ್ ಮತ್ತು ನಿರ್ವಹಕರಿಗೆ ತರಬೇತಿಯನ್ನು ಕೊಡುತ್ತದೆ. ಸಿ-130ಜೆ ಜೊತೆಯಲ್ಲಿ ಭವಿಷ್ಯದಲ್ಲಿ ಕೆಸಿ-130ಜೆ, ಸಿ-130ಬಿ-ಎಚ್ ವಿಮಾನಗಳನ್ನು ನಿರ್ವಹಿಸುವ ಅಂಶಗಳನ್ನು ಇವು ಹೊಂದಿದೆ.
ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಎಂಆರ್‌ಓ ದೇಶದ ಮೊದಲನೆಯದ್ದಾಗಿದೆ. ಮುಂದಿನ ವರ್ಷದಾಂತ್ಯಕ್ಕೆ ಕಾಮಗಾರಿ ಅಂತ್ಯಗೊಳ್ಳಲಿದ್ದು, ವಿಶ್ವದ 14ನೇ ಸಿ-130 ಜೆ ವಿಮಾನದ ಎಂಆರ್‌ಓ ಕೇಂದ್ರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ