Former VP Hamid Ansari Remark : ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಬೆಳೆಯುತ್ತಿದೆ!

By Kannadaprabha NewsFirst Published Jan 28, 2022, 4:45 AM IST
Highlights

* ಅಮೆರಿಕ ಕಾರ್ಯಕ್ರಮದಲ್ಲಿ ಭಾರತ ಟೀಕಿಸಿದ ಮಾಜಿ ಉಪರಾಷ್ಟ್ರಪತಿ
* ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚಳ: ಅಮೆರಿಕ ಸಂಸದ
* ಹಿಂದು ರಾಷ್ಟ್ರೀಯತೆ ಹೇಳಿಕೆಗೆ ಬಿಜೆಪಿ ತಿರುಗೇಟು

ವಾಷಿಂಗ್ಟನ್‌ (ಜ. 28): ಪ್ರಸ್ತುತ ಭಾರತದಲ್ಲಿರುವ ಮಾನವ ಹಕ್ಕುಗಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ (Former vice president Of India Hamid Ansari) ಟೀಕಿಸಿದ್ದಾರೆ. ಇಂಡಿಯನ್‌ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌ನ  (Indian American Muslim Council)ವಚ್ರ್ಯುವಲ್‌ ಆಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನ್ಸಾರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ವಿದೇಶದ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾನು ಉಪರಾಷ್ಟ್ರಪತಿಯಾಗಿದ್ದ ದೇಶವನ್ನೇ ಅವರು ಬಿಂಬಿಸಿದ ರೀತಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅನ್ಸಾರಿ, ‘ಪ್ರಸ್ತು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಡೀ ದೇಶದಲ್ಲಿ ಹಿಂದೂ ರಾಷ್ಟ್ರೀಯತೆ ಬೆಳೆಯುತ್ತಿದೆ. ಒಂದು ಸಂಸ್ಕೃತಿಗೆ ಸೇರಿದ ಕಾಲ್ಪನಿಕ ರಾಷ್ಟ್ರೀಯತೆಯು ನಾಗರಿಕರನ್ನು ಅವರ ನಂಬಿಕೆಯ ಆಧಾರ ಮೇಲೆ ಪ್ರತ್ಯೇಕಿಸುತ್ತದೆ. ಅಸಹಿಷ್ಣುತೆಯನ್ನು ಹೊರಹಾಕಿ ಆತಂಕ, ಅಭದ್ರತೆಯನ್ನು ಉತ್ತೇಜಿಸುತ್ತದೆ’ ಎಂದು ಆರೋಪಿಸಿದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಾರತ ವಿರೋಧಿ ನಾಲ್ವರು ಅಮೆರಿಕ ಸಂಸದರು ಕೂಡಾ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚುತ್ತಿದೆ ಎಂದು ಟೀಕಿಸಿದರು. ಮ್ಯಾಸಚೂಸೆಟ್ಸ್‌ನ ಹಿರಿಯ ಸೆನೆಟರ್ ಎಡ್ ಮಾರ್ಕಿ (Ed Markey, Senior Senator from Massachusetts), ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ಬಹುಕಾಲದಿಂದ ಸಾರ್ವತ್ರಿಕ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಕ್ಕೆ ಬದ್ಧವಾಗಿದೆ, ಆದರೆ ಈಗ ಅವುಗಳ ಬಗ್ಗೆ ಕಳವಳಗಳಿವೆ ಎಂದು ಹೇಳಿದರು. "ಆ ಬದ್ಧತೆಯು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮಿತಿಗೊಳಿಸುವ ಕ್ರಮಗಳಿಂದ ದೂರವಿರುವುದನ್ನು ಒಳಗೊಂಡಿದೆ," ಎಂದು ಮಾರ್ಕಿ ಹೇಳಿದ್ದರು.
 

🚨Reportedly Former VP of India Hamid Ansari & alleged actress Swara Bhaskar participating in an event organized by Indian American Muslim Council (IAMC), which recently paid money to get India black-listed by the US. pic.twitter.com/nHoDgrOL76

— OSINT Updates 🚨 (@OsintUpdates)


ಬಿಜೆಪಿ ತಿರುಗೇಟು: ಅನ್ಸಾರಿ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ‘ಭಾರತವು ಎಲ್ಲ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸಿದೆ. ಮಾನವ ಹಕ್ಕುಗಳ ರಕ್ಷಣೆ ಖಚಿತಪಡಿಸಿಕೊಳ್ಳಲು ದೇಶದ ಸಂವಿಧಾನ ವಿವಿಧ ಶಾಸನಗಳ ಅಡಿಯಲ್ಲಿ ಸುರಕ್ಷತೆ ಒದಗಿಸುತ್ತದೆ’ ಎಂದು ತಿರುಗೇಟು ನೀಡಿದೆ. ಇನ್ನು ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ‘ದೇಶದ ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ರಾಷ್ಟ್ರವಿಲ್ಲ, ನರೇಂದ್ರ ಮೋದಿಗಿಂತ ಉತ್ತಮ ನಾಯಕ ಮತ್ತು ಹಿಂದೂಗಳಿಗಿಂತ ಉತ್ತಮ ಸ್ನೇಹಿತರು ಇಲ್ಲ’ ಎಂದು ಹೇಳಿದ್ದಾರೆ.

ಹಮೀದ್ ಅನ್ಸಾರಿಗೆ ಹಿಂದುತ್ವದ ಅರ್ಥ ತಿಳಿಸಿದ ದೇವೇಂದ್ರ ಫಡ್ನವೀಸ್!
ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ (Senior BJP leader and Union Minister Mukhtar Abbas Naqvi ) ಅವರು ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಅನ್ಸಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಖ್ವಿ, 'ಪ್ರಧಾನಿ ನರೇಂದ್ರ ಮೋದಿಯವರ ಕೆಳಗಿಳಿಸುವ ಮೂರ್ಖತನ, ಭಾರತವನ್ನು ಹೀನವಾಗಿ ಕಾಣುವ ಪಿತೂರಿಯಾಗಿ ಬದಲಾಗುತ್ತಿದೆ' ಎಂದು ಹೇಳಿದರು. ಮೋದಿಯನ್ನು ಛೀಮಾರಿ ಹಾಕುತ್ತಾ ಭಾರತದ ಕುರಿತಾಗಿ ಮಾತನಾಡಿದಾಗ ಇಂಥ ಧ್ವನಿಗಳನ್ನು ನೀವು ನಿರೀಕ್ಷಿಸಬಹುದು.... ಅಲ್ಪಸಂಖ್ಯಾತರ ಮತಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಜನರು ಈಗ ದೇಶದಲ್ಲಿ ಚಾಲ್ತಿಯಲ್ಲಿರುವ ಸಕಾರಾತ್ಮಕ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.

ಮಸೂದೆ ಏಕೆ ಪಾಸು ಮಾಡಲು ಬಿಡ್ತಿಲ್ಲ ಎಂದು ಕೇಳಿದ್ದ ಮೋದಿ!
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕೂಡ ಅನ್ಸಾರಿ ಅವರ ಹೇಳಿಕೆಯನ್ನು ಟೀಕಿಸಿದೆ. ಹಮೀದ್ ಅನ್ಸಾರಿಯಂತಹವರು ಸಾಂವಿಧಾನಿಕ ಹುದ್ದೆಯಿಂದ ಕೆಳಗಿಳಿದ ತಕ್ಷಣ ನೇರವಾಗಿ ಕೆಳಗೆ ಬೀಳುವುದೇಕೆ? ಪಿಎಫ್‌ಐ ಮತ್ತು ಐಎಎಂಸಿಯಂತಹ ಸಂಘಟನೆಗಳ ಸಂಪರ್ಕಕ್ಕೆ ಬಂದ ತಕ್ಷಣ ಅವರೊಳಗಿನ ಜಿಹಾದಿ ಇಸ್ಲಾಂ ಏಕೆ ಪ್ರಾಬಲ್ಯ ಸಾಧಿಸುತ್ತದೆ ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಪ್ರಶ್ನೆ ಮಾಡಿದ್ದಾರೆ.

click me!