ಹಾಲಿ ಪ್ರಧಾನಿಯನ್ನು ಹಾಡಿಹೊಗಳಿದ ದೇವೇಗೌಡ

By Web DeskFirst Published Oct 12, 2019, 9:57 PM IST
Highlights

ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ| ಟ್ವೀ ಟ್ ಮಾಡುವ ಮೂಲಕ ಮೋದಿ ಕ್ರಮವನ್ನು ಪ್ರಶಂಸಿಸಿದ ದೇವೇಗೌಡ| ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಬರಿಗಾಲಲ್ಲಿ ಪ್ಲಾಸ್ಟಿಕ್ ಕಸ ತೆಗೆದಿದ್ದಕ್ಕೆ ಮೆಚ್ಚುಗೆ.

ಬೆಂಗಳೂರು, [ಅ.12]: ದೇಶದಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ಮೋದಿ ಸರಣಿ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ. ಇದರ ಭಾಗವಾಗಿ ತಮಿಳುನಾಡಿನ ಮಹಾಬಲಿಪುರಂನ ಕಡಲ ಕಿನಾರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನ ಹೆಕ್ಕುವ ಮೂಲಕ ಪರಿಸರ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರು. 

ಇಂದು [ಶನಿವಾರ] ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮೋದಿ, ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಜತೆಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟು, ಆರೋಗ್ಯ ಮತ್ತು ಸ್ವಾಸ್ಥ್ಯವನ್ನ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಅವರು ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಶೆಗಳು ವ್ಯಕ್ತವಾಗುತ್ತಿವೆ. 

ಸಮುದ್ರ ತೀರದಲ್ಲಿ ಮೋದಿ ಪ್ಲಾಗಿಂಗ್: ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ!

ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ದೊಡ್ಡಗೌಡ್ರು
ಹೌದು...ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಮೋದಿಯನ್ನು ಒಂದಿಲ್ಲೊಂದು ವಿಚಾರದಲ್ಲಿ ಟೀಕಿಸುತ್ತಿದ್ದ ದೇವೇಗೌಡ್ರು, ಮಹಾಬಲಿಪುರಂನ ಕಡಲ ಕಿನಾರೆಯಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶವನ್ನು ಸಾರಿದ ಮೊದಿಯನ್ನು ಹಾಡಿ ಹೊಗಳಿದ್ದಾರೆ

ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಇದು ಪ್ರೇರಣೆ ನೀಡುವ ಹೆಜ್ಜೆ ಎಂದು ದೇವೇಗೌಡ ಅವರು ಮೋದಿ ಕಾರ್ಯಕ್ಕೆ ಟ್ವಿಟ್ಟರ್ ನಲ್ಲಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

I saw the video of plogging barefoot at a beach in Mamallapuram, TN. This is an inspiring start to traverse towards a plastic-free India. https://t.co/tdDI2L8pRM

— H D Devegowda (@H_D_Devegowda)
click me!