Ayurveda Treatment ಆಯುರ್ವೇದದಿಂದ ಮರಳಿ ಬಂತು ಮಗಳ ದೃಷ್ಟಿ, ಕೀನ್ಯಾದಲ್ಲಿ ಭಾರತದ ಚಿಕಿತ್ಸೆ ಆರಂಭಿಸಲು ಮಾಜಿ ಪ್ರಧಾನಿ ತಯಾರಿ

Published : Feb 13, 2022, 03:52 PM ISTUpdated : Feb 13, 2022, 03:56 PM IST
Ayurveda Treatment ಆಯುರ್ವೇದದಿಂದ ಮರಳಿ ಬಂತು ಮಗಳ ದೃಷ್ಟಿ, ಕೀನ್ಯಾದಲ್ಲಿ ಭಾರತದ ಚಿಕಿತ್ಸೆ  ಆರಂಭಿಸಲು ಮಾಜಿ ಪ್ರಧಾನಿ ತಯಾರಿ

ಸಾರಾಂಶ

ಭಾರತದ ಆಯುರ್ವೇದಾ ಚಿಕಿತ್ಸೆಗೆ ಮಾರು ಹೋದಾ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಪುತ್ರಿಗೆ ಕೇರಳದಲ್ಲಿ ಕಣ್ಣಿನ ಚಿಕಿತ್ಸೆ, ಮರಳಿ ಪಡೆದ ದೃಷ್ಟಿ ಆಫ್ರಿಕಾ ಸೇರಿದಂತೆ ವಿಶ್ವದಲ್ಲಿ ಆಯುರ್ವೇದಾ ಚಿಕಿತ್ಸೆ ಆರಂಭಿಸಲು ಮನವಿ

ನವದೆಹಲಿ(ಫೆ.13): ಭಾರತದ ಆಯುರ್ವೇದಾ ಚಿಕಿತ್ಸೆ (India Ayurveda Treatmentವಿಶ್ವದಲ್ಲೇ ಜನಪ್ರಿಯವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೈಸರ್ಗಿಕ ಹಾಗೂ ಸಾಂಪ್ರಾದಾಯಿಕ ಔಷಧಿಗಳ ಮೂಲಕ ನೀಡುವ ಚಿಕಿತ್ಸೆಗೆ ಇದೀಗ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದೆ. ಆಯುರ್ವೇದಾ ಚಿಕಿತ್ಸೆಯ ಮಹತ್ವವನ್ನು ಖುದ್ದು ಅನುಭವಿಸಿದ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ(Kenya PM Raila Odinga) ಇದೀಗ ಪ್ರಧಾನಿ ನರೇಂದ್ರ ಮೋದಿ ಬಳಿ ವಿಶೇಷ ಮನವಿ ಮಾಡಿದ್ದಾರೆ. ಭಾರತದ ಸಾಂಪ್ರಾದಾಯಿಕ ಆಯುರ್ವೇದಾ ಚಿಕಿತ್ಸೆಯನ್ನು ಆಫ್ರಿಕಾ ಸೇರಿದಂತೆ ವಿಶ್ವದಲ್ಲಿ ಆರಂಭಿಸಲು ಮನವಿ ಮಾಡಿದ್ದಾರೆ.

ಭಾರತದ ಆಯುರ್ವೇದಾ ಚಿಕಿತ್ಸಾ ಪದ್ದತಿ ಕುರಿತು ದಶಕಗಳ ಹಿಂದಿನಿಂದಲೇ ರೈಲಾ ಒಡಿಂಗಾ ಆಸಕ್ತಿ ಹೊಂದಿದ್ದಾರೆ.  ಇದೀಗ ಸ್ವತಃ ರೈಲಾ ಕುಟುಂಬ ಭಾರತದ ಆಯುರ್ವೇದಾ ಚಿಕಿತ್ಸೆಯ ಫಲ ಕಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆಯುರ್ವೇದಾ ಶಕ್ತಿಯಿಂದ ನನ್ನ ಮಗಳು ಮರಳಿ ದೃಷ್ಟಿ ಪಡೆದಿದ್ದಾಳೆ. ಈ ಅಮೂಲ್ಯ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ(Africa) ಆರಂಭಿಸಬೇಕು. ಇಲ್ಲಿನ ಔಷದಿ ಸಸ್ಯಗಳನ್ನು ಬೆಳೆಯಲು ಪೂರಕ ವಾತಾವರಣವಿದೆ. ಈ ಮೂಲಕ ವಿಶ್ವದ ಆರೋಗ್ಯ ಸಮಸ್ಯೆಗೆ ಭಾರತದ ಆಯುರ್ವೇದಾ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ರೈಲಾ ಒಡಿಂಗಾ ಮೋದಿ ಭೇಟಿಯಲ್ಲಿ ಮನವಿ ಮಾಡದ್ದಾರೆ. 

health benefits peepal tree: ಅರಳಿಯಲ್ಲಡಗಿದೆ ಇಂಪೊಟೆನ್ಸಿಗೆ ಮದ್ದು!

ಹೌದು, ರೈಲಾ ಒಡಿಂಗಾ ಪುತ್ರಿಗೆ ಕೇರಳದಲ್ಲಿ(Kerala) ಆಯುರ್ವೇದಾ ಪದ್ದತಿಯಲ್ಲಿ ಕಣ್ಣಿನ ಚಿಕಿತ್ಸೆ(Eye treatment) ನೀಡಲಾಗಿದೆ. ಪರಿಣಾಮ ಕಳೆದುಕೊಂಡ ದೃಷ್ಟಿ ಮರಳಿ ಪಡೆದಿದ್ದಾರೆ. ರೈಲಾ ಒಡಿಂಗಾ ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ತಂಗಿದ್ದಾರೆ. ಪುತ್ರಿ ರೋಸಮೆರಿ ಒಡಿಂಗಾ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರು. ವಿಶ್ವದ ಹಲವು ಮಲ್ಟಿಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ರೋಸಮೆರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಧಾರೀಯಂ ಆಯುರ್ವೇದಾ ಕಣ್ಣಿ ಆಸ್ಪತ್ರೆ ಕುರಿತು ಮಾಹಿತಿ ಪಡೆದು ನೇರವಾಗಿ ಕೇರಳಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಪರಿಣಾಮ ರೋಸಮೇರಿ ಇದೀಗ ಬಹುತೇಕ ಕಣ್ಣಿನ ದೃಷ್ಟಿ ಪಡೆದಿದ್ದಾರೆ. ಓದಲು ಸಾಧ್ಯವಾಗುತ್ತಿದೆ ಎಂದು ರೈಲಾ ಒಡಿಂಗಾ ಹೇಳಿದ್ದಾರೆ.

ರೋಸಮೆರಿ ಒಡಿಂಗಾ 2019ರಿಂದ  ಶ್ರೀಧಾರೀಯಂ ಆಯುರ್ವೇದಾ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2019ರಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದ ರೋಸಮೇರಿ, ಸತತ ಚಿಕಿತ್ಸೆಯಿಂದ ಮರಳಿ ದೃಷ್ಟಿ ಪಡೆದಿದ್ದಾರೆ. ನನಗೆ ಓದಲು ಸಾಧ್ಯವಾಗುತ್ತಿದೆ. ಫೋನ್ ರಿಸೀವ್ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕಿಂತ ಸಂತಸ ಇನ್ನೇನು ಬೇಕು. ನಾನು ಕೇರಳದ ಶ್ರೀಧಾರೀಯಂ ಆಯುರ್ವೇದಾ ಕಣ್ಣಿ ಆಸ್ಪತ್ರೆಗೆ ಆಭಾರಿಯಾಗಿದ್ದೇನೆ ಎಂದು ರೋಸಮೇರಿ ಹೇಳಿದ್ದಾರೆ.

ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಯುರ್ವೇದ ಕ್ರಮಗಳನ್ನು ಅಳವಡಿಸಿಕೊಳ್ಳಿ!

2017ರಲ್ಲಿ ಟ್ಯೂಮರ್ ಆರೋಗ್ಯ ಸಮಸ್ಯೆಗೆ ತುತ್ತಾದ ರೋಸಮೇರೆ ಕಣ್ಣಿನ ದೃಷ್ಟಿ ಕಳೆದೆಕೊಂಡರು. ಬಳಿಕ ಆಫ್ರಿಕಾ, ಜರ್ಮನಿ, ಇಸ್ರೇಲ್, ಚೀನಾ ಸೇರಿದಂತೆ ಕೆಲ ದೇಶಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ನಿಧಾನವಾಗಿ ಕಣ್ಣಿನ ದೃಷ್ಟಿ ಮರಳಿ ಪಡೆದ ರೋಸಮೇರಿ ಇದೀಗ ಭಾಗಶಃ ದೃಷ್ಟಿ ಪಡೆದುಕೊಂಡಿದ್ದಾರೆ. 

ಮಾಜಿ ಪ್ರಧಾನಿ ರೈಲಾ ಒಡಿಂಗಾ ಕೀನ್ಯಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ರೈಲಾ ಒಡಿಂಗಾ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ. ತಾನು ಅಧ್ಯಕ್ಷನಾದ ಬಳಿಕ ಕೇರಳದ ಶ್ರೀಧಾರೀಯಂ ಆಯುರ್ವೇದಾ ಕಣ್ಣಿನ ಆಸ್ಪತ್ರೆಯನ್ನು ಕೀನ್ಯಾದ ನೈರೋಬಿಯಲ್ಲಿ ಆರಂಭಿಸುವುದಾಗಿ ಹೇಳಿದ್ದಾರೆ. ಭಾರತದ ಆಯುರ್ವೇದಾ ಚಿಕಿತ್ಸಾ ಪದ್ದಿತಿಯನ್ನು ಕೀನ್ಯಾ ಸೇರಿದಂತೆ ಆಫ್ರಿಕಾದಲ್ಲಿ ಆರಂಭಿಸಲು ಬದ್ಧನಾಗಿದ್ದೇನೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೂ ವಿಸ್ತರಿಸಲಿ ಎಂದು ಮಾಧ್ಯಮದ ಮುಂದೆ ಭಾವುಕರಾಗಿ ಹೇಳಿದ್ದಾರೆ.

ಹಲವು ಸಮಸ್ಯೆಗಳನ್ನು ನಿವಾರಿಸುತ್ತೆ ಬ್ರಾಹ್ಮಿ ಎಂಬ ಔಷಧೀಯ ಸಸ್ಯ

ನರೇಂದ್ರ ಮೋದಿ ಜೊತೆ ಉತ್ತಮ ಸಂಬಂಧ ಹೊಂದಿರುವ ರೈಲಾ ಒಡಿಂಗಾ ಇದೇ ವಿಚಾರವಾಗಿ ನವದೆಹಯಲ್ಲಿ ಮೋದಿ ಭೇಟಿಯಾಗಿದ್ದಾರೆ. ಮೋದಿ ಗುಜರಾತ್ ಪ್ರಧಾನಿಯಾಗಿದ್ದಾಗಿನಿಂದಲೇ ರೈಲಾ ಒಡಿಂಗಾ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. 2009ರಲ್ಲಿ ವೈಬ್ರ್ಯಾಂಟ್ ಗುಜರಾತ್ ಸಮ್ಮಿಟ್ ಕಾರ್ಯಕ್ರಮಕ್ಕೆ ರೈಲಾ ಒಡಿಂಗಾ ಬೆಂಬಲ ಸೂಚಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ