ಡಿಫೆನ್ಸ್ ಲ್ಯಾಂಡ್ ಮಾರಾಟಕ್ಕೆ ಅವಕಾಶ: 250 ವರ್ಷ ಹಿಂದಿನ ಕಾನೂನು ಬದಲಾವಣೆಗೆ ಸಿದ್ಧತೆ!

By Suvarna NewsFirst Published Jul 20, 2021, 1:53 PM IST
Highlights

* ರಕ್ಷಣಾ ಪಡೆಗಳ ಭೂಮಿ ಮಾರಾಟ ಮಾಡಲು ಅವಕಾಶ

* 250 ವರ್ಷ ಹಿಂದಿನ ಕಾನೂನು ಬದಲಾವಣೆಗೆ ಮೋದಿ ಸರ್ಕಾರದ ಸಿದ್ಧತೆ

* 1765 ರ ನಂತರ ಮೊದಲ ಬಾರಿಗೆ ಬದಲಾವಣೆ

ನವದೆಹಲಿ(ಜು.20): ರಕ್ಷಣಾ ಪಡೆಯ ಭೂ ನೀತಿಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. 250 ವರ್ಷಗಳ ಹಳೆಯ ನೀತಿಯನ್ನು ಬದಲಾಯಿಸಿ ಹೊಸ ನಿಯಮಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿದೆ. ಹೊಸ ಬದಲಾವಣೆಗಳ ಬಳಿಕ, ಸೇನಾ ಭೂಮಿಯನ್ನು ಸಾರ್ವಜನಿಕ ಯೋಜನೆಗಳಿಗೆ ಕೂಡಾ ಬಳಸಬಹುದು. ರಕ್ಷಣಾ ಭೂಮಿಯನ್ನು ಪಡೆದು, ಅವರಿಗೆ ಅದೇ ಪ್ರಮಾಣದ ಭೂಮಿಯನ್ನು ಅಥವಾ ಆ ಜಮೀನಿಗೆ ಬದಲಾಗಿ ಪಾವತಿಸಬಹುದು.

ರಕ್ಷಣಾ ಭೂ ನೀತಿಯನ್ನು ಬದಲಾಯಿಸುವ ಮೂಲಕ ಇದು ಸಾಧ್ಯವಾಗಲಿದೆ. 1765 ರ ನಂತರ ಮೊದಲ ಬಾರಿಗೆ ಬದಲಾವಣೆಗಳನ್ನು ಮಾಡಲಾಗುತ್ತಿದೆ. 1765 ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ಮೊದಲ ಕಂಟೋನ್ಮೆಂಟ್‌ನ್ನು ರಚಿಸಿದ್ದರು. ಇದರ ನಂತರ ಸೇನೆಯ ಜಮೀನು ಮಿಲಿಟರಿ ಕೆಲಸಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಸಲಾಬಾರದೆಂಬ ಕಾನೂನು ರೂಪಿಸಲಾಯಿತು. ಅದನ್ನು ಖರೀದಿಸಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದು ಯಾವತ್ತೂ ಸೇನೆಗಷ್ಟೇ ಬಳಸಬೇಕೆಂದು ಆದೇಶಿಸಲಾಗಿತ್ತು.

ಬಳಿಕ 1801 ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್-ಜನರಲ್-ಕೌನ್ಸಿಲ್, ಯಾವುದೇ ಕಂಟೋನ್ಮೆಂಟ್‌ನ ಯಾವುದೇ ಬಂಗಲೆಗಳು ಮತ್ತು ಕ್ವಾರ್ಟರ್ಸ್ ಅನ್ನು ಸೈನ್ಯಕ್ಕೆ ಸಂಬಂಧಿಸದ ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಅನುಮತಿ ಇಲ್ಲ ಎಂದೂ ಆದೇಶಿಸಲಾಗಿತ್ತು.

ಇನ್ನು ಕಾನೂನು ಬದಲಾಗುತ್ತದೆ

ಈಗ ಮೋದಿ ಸರ್ಕಾರ ರಕ್ಷಣಾ ಭೂ ಸುಧಾರಣೆಗಳಿಗಾಗಿ ಕಂಟೋನ್ಮೆಂಟ್ ಮಸೂದೆ -2020 ಅನ್ನು ಜಾರಿಗೊಳಿಸಲಾಗಿದೆ. ಈ ಮಸೂದೆ ಅಂಗೀಕಾರವಾದ ತಕ್ಷಣ, ಕಂಟೋನ್ಮೆಂಟ್ ವಲಯದ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಬಹುದು ಹಾಗೂ ಅಭಿವೃದ್ಧಿಪಡಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಮೆಟ್ರೊ ಕಟ್ಟಡ, ರಸ್ತೆಗಳು, ರೈಲ್ವೆ ಮತ್ತು ಫ್ಲೈಓವರ್‌ಗಳಂತಹ ದೊಡ್ಡ ಸಾರ್ವಜನಿಕ ಯೋಜನೆಗಳಿಗೆ ಸೈನ್ಯದ ಭೂಮಿ ಅಗತ್ಯವಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ಪಡೆ ಬಳಿ 17.95 ಲಕ್ಷ ಎಕರೆ ಜಮೀನು

ಡಿಜಿ ಡಿಫೆನ್ಸ್ ಎಸ್ಟೇಟ್ಗಳ ವರದಿಯ ಪ್ರಕಾರ, ರಕ್ಷಣಾ ವಲಯಕ್ಕೆ ಸುಮಾರು 17.95 ಲಕ್ಷ ಎಕರೆ ಭೂಮಿಯನ್ನು ಹೊಂದಿದೆ. ಇದರಲ್ಲಿ 16.35 ಲಕ್ಷ ಎಕರೆ 62 ಕಂಟೋನ್ಮೆಂಟ್‌ಗಳ ಹೊರಗಿದೆ. ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಘಟಕಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಭಾರತ್ ಡೈನಾಮಿಕ್, ಭಾರತ್ ಅರ್ಥ್ ಮೂವರ್ಸ್, ಗಾರ್ಡನ್ ರೀಚ್ ವರ್ಕ್‌ಶಾಪ್ಸ್, ಮಜಾಗನ್ ಡಾಕ್ಸ್‌ನ್ನು ಒಳಗೊಂಡಿಲ್ಲ. ಅಲ್ಲದೆ, 50,000 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಗಡಿ ರಸ್ತೆ ಸಂಘಟನೆಯನ್ನೂ ಸೇರಿಸಲಾಗಿಲ್ಲ.

click me!