ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಗುಡ್‌ನ್ಯೂಸ್!

Published : Jul 20, 2021, 10:37 AM IST
ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಗುಡ್‌ನ್ಯೂಸ್!

ಸಾರಾಂಶ

* ಕೊರೋನಾ ಸೋಂಕಿತರಲ್ಲಿ 9 ತಿಂಗಳ ತನಕ ಪ್ರತಿಕಾಯ ಶಕ್ತಿ ಇರಲಿದೆ: ಅಧ್ಯಯನ * ಇಟಲಿಯಲ್ಲಿ ನಡೆಸಲಾದ ಅಧ್ಯಯನದಲ್ಲಿ ಮಾಹಿತಿ * ಕೊರೋನಾದಿಂದ ಗುಣಮುಖರಾದವರ ಪೈಕಿ ಶೇ.98ರಷ್ಟುಜನರಲ್ಲಿ ಗುರುತಿಸಬಹುದಾದಷ್ಟುಪ್ರತಿಕಾಯ ಶಕ್ತಿ ಉತ್ಪತ್ತಿ

ಲಂಡನ್‌(ಜು.20): ಕೊರೋನಾ ಸೋಂಕಿನಿಂದ ಗುಣಮುಖರಾದ 9 ತಿಂಗಳ ತನಕ ದೇಹದಲ್ಲಿ ಪ್ರತಿಕಾಯ ಶಕ್ತಿ ಅಧಿಕವಾಗಿರುತ್ತದೆ ಎಂಬ ಸಂಗತಿ ಇಟಲಿಯಲ್ಲಿ ನಡೆಸಲಾದ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಪಡುವಾ ವಿಶ್ವವಿದ್ಯಾಲಯ ಹಾಗೂ ಇಂಪೀರಿಯಲ್‌ ಕಾಲೇಜ್‌ ಲಂಡನ್‌ನ ಸಂಶೋಧಕರು ಇಟಲಿಯ ವೊ ಎಂಬ ಪ್ರಾಂತ್ಯದಲ್ಲಿ ಕಳೆದ ವರ್ಷ ಫೆಬ್ರವರಿ ಮತ್ತು ಮಾಚ್‌ರ್‍ನಲ್ಲಿ ಕೊರೋನಾ ಸೋಂಕಿತರಾದವರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಅವರನ್ನು ಮೇ ಮತ್ತು ನವೆಂಬರ್‌ನಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಫೆಬ್ರವರಿ ಮತ್ತು ಮಾಚ್‌ರ್‍ನಲ್ಲಿ ಕೊರೋನಾದಿಂದ ಗುಣಮುಖರಾದವರ ಪೈಕಿ ಶೇ.98ರಷ್ಟುಜನರಲ್ಲಿ ಗುರುತಿಸಬಹುದಾದಷ್ಟು ಪ್ರತಿಕಾಯ ಶಕ್ತಿ ಉತ್ಪತ್ತಿ ಇದ್ದಿದ್ದು ಕಂಡುಬಂದಿತ್ತು.

ಆದರೆ, ಮೇ ಮತ್ತು ನವೆಂಬರ್‌ ವೇಳೆಗೆ ಅವರಲ್ಲಿ ಪ್ರತಿಕಾಯ ಶಕ್ತಿ ಕುಂದಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಇದೇ ವೇಳೆ ಕೊರೋನಾದ ಲಕ್ಷಣ ಹೊಂದಿದ್ದವರು ಮತ್ತು ಲಕ್ಷಣ ರಹಿತರಲ್ಲಿಯೂ ಒಂದೇ ರೀತಿಯ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬುದನ್ನು ಫಲಿತಾಂಶಗಳು ತೋರಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ