ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ..!

Published : Jul 20, 2023, 12:00 AM IST
ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ..!

ಸಾರಾಂಶ

ಊಟ ನೀಡುವ ಅಂಗಡಿಗಳನ್ನು ಜನರಲ್‌ ಬೋಗಿಗಳು ನಿಲ್ಲುವ ಪ್ಲಾಟ್‌ಫಾರಂನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. 2 ಬಗೆಯಲ್ಲಿ ಈ ಊಟವನ್ನು ವಿಭಾಗಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್‌ಗೆ 20 ರು. ಹಾಗೂ 2 ಬಗೆಯ ಊಟ ಹೊಂದಿರುವ ಪ್ಯಾಕೆಟ್‌ಗೆ 50 ರು. ಬೆಲೆ ಇರಲಿದೆ. ಅಲ್ಲದೇ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್‌ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ.

ನವದೆಹಲಿ(ಜು.20):  ರೈಲಿನ ಜನರಲ್‌ ಬೋಗಿಗಳಲ್ಲೂ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕ್‌ ಮಾಡಲಾದ ನೀರಿನ ಬಾಟಲ್‌ಗಳನ್ನು ಒದಗಿಸಲು ರೈಲ್ವೆ ನಿರ್ಧರಿಸಿದೆ. ಇದಕ್ಕಾಗಿಯೇ ವಿಶೇಷವಾಗಿ ಇವುಗಳನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಊಟವನ್ನು ನೀಡುವ ಅಂಗಡಿಗಳನ್ನು ಜನರಲ್‌ ಬೋಗಿಗಳು ನಿಲ್ಲುವ ಪ್ಲಾಟ್‌ಫಾರಂನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. 2 ಬಗೆಯಲ್ಲಿ ಈ ಊಟವನ್ನು ವಿಭಾಗಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್‌ಗೆ 20 ರು. ಹಾಗೂ 2 ಬಗೆಯ ಊಟ ಹೊಂದಿರುವ ಪ್ಯಾಕೆಟ್‌ಗೆ 50 ರು. ಬೆಲೆ ಇರಲಿದೆ. ಅಲ್ಲದೇ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್‌ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನಲ್ಲಿ ಬೆಂಕಿ

ಬಹುತೇಕ ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು ಕನಿಷ್ಠಪಕ್ಷ 2 ಜನರಲ್‌ ಬೋಗಿಗಳನ್ನು ಹೊಂದಿರುತ್ತವೆ. ಹಾಗಾಗಿ ಈ ಬೋಗಿಗಳು ನಿಲ್ಲುವ ಕಡೆ ಈ ಅಂಗಡಿಗಳನ್ನು ತೆರೆಯಬೇಕು ಎಂದು ನಿಲ್ದಾಣಗಳಿಗೆ ಸೂಚಿಸಲಾಗಿದೆ. ಅಲ್ಲದೇ 6 ತಿಂಗಳೊಳಗೆ ಇದರ ನಿರ್ಮಾಣ ಪೂರ್ಣವಾಗಬೇಕು ಎಂದು ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!