PM Covid review meeting ಸಿಎಂ ಜೊತೆ ಪ್ರಧಾನಿ ಕೊರೋನಾ ಸಭೆ, ಬೊಮ್ಮಾಯಿ ಸೇರಿ ಮುಖ್ಯಮಂತ್ರಿಗಳಿಗೆ ಮೋದಿ ಮಹತ್ವದ ಸೂಚನೆ!

Published : Jan 13, 2022, 06:27 PM ISTUpdated : Jan 13, 2022, 06:38 PM IST
PM Covid review meeting ಸಿಎಂ ಜೊತೆ ಪ್ರಧಾನಿ ಕೊರೋನಾ ಸಭೆ, ಬೊಮ್ಮಾಯಿ ಸೇರಿ ಮುಖ್ಯಮಂತ್ರಿಗಳಿಗೆ ಮೋದಿ ಮಹತ್ವದ ಸೂಚನೆ!

ಸಾರಾಂಶ

ಕೊರೋನಾ ಹೆಚ್ಚಳದ ಬೆನ್ನಲ್ಲೇ ಮುಖ್ಯಮಂತ್ರಿಗಳ ಜೊತೆ ಜೊತೆ ಪ್ರಧಾನಿ ಸಭೆ ಸಭೆಯ ಆರಂಭದಲ್ಲಿ ಕರ್ನಾಟಕದ ಸ್ಥಿತಿ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ತೆಗೆದುಕೊಂಡಿರೋ ಕ್ರಮಗಳ ಬಗ್ಗೆ ಮಾಹಿತಿ

ನವದೆಹಲಿ(ಜ.13): ದೇಶದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಒಂದೊಂದೆ ರಾಜ್ಯಗಳು ಲಾಕ್ ಆಗುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಮುಖ್ಯಮಂತ್ರಿಗಳ ಜೊತೆ ಕೊರೋನಾ ಸ್ಥಿತಿಗತಿಗಳ ಸಭೆ ನಡೆಸಿದ್ದಾರೆ. ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ(Chief Ministers) ಜೊತೆ ಮೋದಿ ಕೊರೋನಾ ಸ್ಥಿತಿಗತಿ ಸಭೆ(PM Covid review meeting) ನಡೆಸಿದ್ದಾರೆ. ಸಭೆಯಲ್ಲಿ ಮೋದಿ ಮಹತ್ವದ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಅಸ್ತ್ರಕ್ಕಿಂತ ಮೈಕ್ರೋಕಂಟೈನ್ಮೆಂಟ್ ಜೋನ್, ಹೋಮ್ ಐಸೋಲೇಶನ್, ಟ್ರಾಕ್ ಹಾಗೂ ಟ್ರೀಟ್ಮೆಂಟ್‌ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮೋದಿ ಸೂಚಿಸಿದ್ದಾರೆ.

ಎಲ್ಲಾ ಸಿಎಂಗಳಿಂದ ಮಾಹಿತಿ ಪಡೆದ ಬಳಿಕ ಮೋದಿ ಮಹತ್ವದ ಸೂಚನೆ ನೀಡಿದ್ದಾರೆ. ಮೊದಲಿಗೆ ಸಂಕ್ರಾತಿ ಹಬ್ಬದ ಶುಭಾಶಯ ಕೋರಿದ್ದಾರೆ. ಕೊರೋನಾ ಹಾಗೂ ಓಮಿಕ್ರಾನ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಎಲ್ಲಾ ಮುಖ್ಯಮಂತ್ರಿಗಳ ಮಾತು ಕೇಳಿದ ನನಗೆ, ದೇಶ ಈ ಬಾರಿ ಎದ್ದಿರುವ ಕೊರೋನಾ ಆತಂಕವನ್ನೂ ಸಂಪೂರ್ಣವಾಗಿ ಗೆಲ್ಲಲಿದೆ ಅನ್ನೋ ವಿಶ್ವಾಸವಿದೆ ಎಂದರು.

Narendra Modi ಬೊಮ್ಮಾಯಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ 

ಅಮೆರಿಕದಂತ ದೇಶದಲ್ಲಿ 14 ಲಕ್ಷ ಕೇಸ್‌ಗಳು ಪತ್ತೆಯಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿದೆ. ಹಬ್ಬಗಳಲ್ಲಿ(Festivals) ನಾವು ಕೊರೋನಾ ಮಾರ್ಗಸೂಚಿ(Covid Guidelines) ಪಾಲನೆಯಲ್ಲಿ ಹಿಂದೇ ಬೀಳಬಾರದು. ನಾವು ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ, ಮುಂಜಾಗ್ರತೆ ಅತೀ ಅವಶ್ಯಕವಾಗಿದೆ ಎಂದು ಮೋದಿ ಹೇಳಿದ್ದಾರೆ. 

ಭಾರತ ವಯಸ್ಕರಿಗೆ ಶೇಕಡಾ 92 ರಷ್ಟು ಮೊದಲ ಡೋಸ್(Vaccine Dose) ನೀಡಲಾಗಿದೆ. ನಮ್ಮ ಲಸಿಕಾ ಅಭಿಯಾನ(Vaccination Drive) ಒಂದು ವರ್ಷ ಪೂರೈಸಲು ಇನ್ನು 3 ದಿನ ಮಾತ್ರ ಬಾಕಿ ಇದೆ. ದೇಶ ಕಳೆದ ಒಂದು ವರ್ಷದಲ್ಲಿ ಲಸಿಕಾ ಅಭಿಯಾನದ ಮೂಲಕ ಸಂಪೂರ್ಣ ಜನತೆಗೆ ಲಸಿಕೆ ಹಾಕುವ ಮಹತ್ ಕಾರ್ಯದಲ್ಲಿ ತೊಡಗಿದೆ ಎಂದರು.

National Youth Day ಯುವ ಭಾರತದತ್ತ ಜಗತ್ತಿನ ಭರವಸೆಯ ನೋಟ: ಯುವಜನೋತ್ಸವದಲ್ಲಿ ಮೋದಿ ಮಾತು

ರಾಜ್ಯಗಳು ಕೊರೋನಾ ಹೆಚ್ಚಳವಾಗುತ್ತಿದೆ ನಿಜ. ಆದರೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಆರ್ಥಿಕ ಸ್ಥಿತಿಗತಿ, ರಾಜ್ಯದ ಜನರ ಸ್ಥಿತಿಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಹೀಗಾಗಿ ಲಾಕ್‌ಡೌನ್ ಮಾನದಂಡವಲ್ಲ. ಇದರ ಬದಲು ಮೈಕ್ರೋಕಂಟೈನ್ಮೆಂಟ್ ಜೋನ್, ಹೋಮ್ ಐಸೋಲೇಶನ್, ಟ್ರಾಕಿಂಗ್ ಹಾಗೂ ಚಿಕಿತ್ಸೆ ವ್ಯವಸ್ಥೆ ಹೆಚ್ಚಿಸುವುದು ಸೂಕ್ತ ಎಂದು ಮೋದಿ ಹೇಳಿದ್ದಾರೆ. ದೇಶದ ಪರಂಪರಾಗತವಾಗಿ ಬಂದಿರುವ ಆರ್ಯುವೇದ ಔಷಧಿ ಕೊರೋನಾಗೆ ನೇರ ಮದ್ದಲ್ಲ. ಆದರೆ ಆರ್ಯುವೇದ ವಿಧಾನ ಮಾನವನ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ. ಹೀಗಾಗಿ ಈ ಕುರಿತು ಗಮನವಹಿಸುವುದು ಸೂಕ್ತ ಎಂದು ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ ದೇಶದಲ್ಲಿನ ಕೊರೋನಾ ಹೆಚ್ಚಳ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.  ಸಭೆ ಆರಂಭದಲ್ಲೇ ಮೋದಿ, ಕರ್ನಾಟಕದ ಕೊರೋನಾ ಸಂಖ್ಯೆ, ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕೊರೋನಾ ಕುರಿತ ಸಂಪೂರ್ಣ ಮಾಹಿತಿಯನ್ನು ಪ್ರಧಾನಿಗೆ ನೀಡಿದ್ದಾರೆ. ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ರಾಜ್ಯದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿನ ಕೊರೋನಾ ಕೇಸ್ ಗಣನೀಯ ಏರಿಕೆ ಹಾಗೂ ಎದುರಿಸಲಿರುವ ಸವಾಲುಗಳ ಕುರಿತು ಬೆಳಕು ಚೆಲ್ಲಿದ್ದಾರೆ.

PM Covid 19 Meeting ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ 19 ಉನ್ನತ ಮಟ್ಟದ ಸಭೆ ಅಂತ್ಯ, ಮಹತ್ವದ ಸೂಚನೆ ನೀಡಿದ ಮೋದಿ!

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಮಾರ್ಗಸೂಚಿಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಅತೀ ಮುಖ್ಯವಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಸೂಚಿಸಿದ್ದಾರೆ.  ಕೊರೋನಾ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಸೂಚಿಸಲಾಗಿದೆ. ಶೀಘ್ರದಲ್ಲೇ ಶೇಕಡಾ 100 ರಷ್ಟು ಎರಡು ಡೋಸ್ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲಾ ಹಾಗೂ ಗ್ರಾಮದಲ್ಲಿನ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆದು ಡೋಸ್ ಬಾಕಿ ಇದ್ದವರಿಗೂ ಲಸಿಕೆ ವಿತರಣೆ ಮಾಡಬೇಕು. ಇದರ ಜೊತೆಗೆ 15 ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಬೂಸ್ಟರ್ ಡೋಸ್ ಕುರಿತು ಗಮನ ಹರಿಸುವಂತೆ ಸೂಚಿಸಲಾಗಿದೆ.

ಸಭೆಯ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶದ ಮುಖ್ಯಮಂತ್ರಿಗಳಿಂದ ಆಯಾ ರಾಜ್ಯಗಳ ಕೊರೋನಾ ಸ್ಥಿತಿಗತಿ ಕುರಿತು ಸಂಪೂರ್ಣ ವರದಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಆಯಾ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ. 

ಸಿಎಂ ಸಭೆಗೂ ಮುನ್ನ ಉನ್ನತ ಮಟ್ಟದ ಸಭೆ ನಡೆಸಿದ್ದ ಮೋದಿ:
ಮುಖ್ಯಮಂತ್ರಿಗಳ ಸಬೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶದ ಕೊರೋನಾ ಸ್ಥಿತಿಗತಿಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ವೇಳೆ ತಜ್ಞರು ಹಲವು ಸೂಚನೆಗಳನ್ನು ನೀಡಿದ್ದಾರೆ. ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಹಾಗೂ ಓಮಿಕ್ರಾನ್ ಪ್ರಕರಣ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ಮೋದಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದರು. 

ದೇಶದಲ್ಲಿನ ಲಸಿಕಾ ಅಭಿಯಾನಕ್ಕೆ ಯಾವುದೇ ಸಮಸ್ಯೆಯಾಗದಂತೆ ಈ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  15 ರಿಂದ 18 ವರ್ಷದೊಳಗಿನ ಮಕ್ಕಳು, ಬೂಸ್ಟರ್ ಡೋಸ್ ಸೇರಿದಂತೆ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಲಸಿಕೆಯ ಅಗತ್ಯವಿದೆ. ಹೀಗಾಗಿ ಯಾವುದೇ ರಾಜ್ಯಗಳಿಗೆ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ