Farm Laws: ಒಂದೇ ಏಟಿಗೆ ವಿಪಕ್ಷಗಳ ಅಸ್ತ್ರ ನಿಷ್ಕ್ರಿಯ; ಬಿಜೆಪಿ ಯೂ-ಟರ್ನ್ ಹೊಡೆದಿದ್ದೇಕೆ?

Published : Nov 20, 2021, 09:02 AM ISTUpdated : Nov 20, 2021, 09:45 AM IST
Farm Laws: ಒಂದೇ ಏಟಿಗೆ ವಿಪಕ್ಷಗಳ ಅಸ್ತ್ರ ನಿಷ್ಕ್ರಿಯ; ಬಿಜೆಪಿ ಯೂ-ಟರ್ನ್ ಹೊಡೆದಿದ್ದೇಕೆ?

ಸಾರಾಂಶ

* ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ * ಮೋದಿ ಘೋಷಣೆ ಬೆನ್ನಲ್ಲೇ ಪಕ್ಷಗಳ ರಾಜಕೀಯ ಆಟ * ಪಂಚ ರಾಜ್ಯ ಚುನಾವಣೆ ಮೇಲೆ ಪಕ್ಷಗಳ ಗಮನ  

ನವದೆಹಲಿ(ನ.20): ಕೃಷಿ ಕಾನೂನುಗಳ (Farm Law) ಹಿಂಪಡೆದಿರುವುದಾಗಿ ಪ್ರಧಾನಿ ಮೋದಿ (Prime Minister narendra Modi) ಘೋಷಿಸಿರುವ ಬೆನ್ನಲ್ಲೇ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬಿಜೆಪಿ (BJP) ಹೇಳಲು ಪ್ರಾರಂಭಿಸಿದರೆ, ವಿರೋಧ ಪಕ್ಷಗಳು ತಾವು ಈ ಹೋರಾಟದಲ್ಲಿ ಗೆದ್ದಿರುವುದಾಗಿ ಹೇಳಿಕೊಳ್ಳುತ್ತಿವೆ. ಕಾನೂನು ಹಿಂಪಡೆದ ಬಳಿಕ ಬಿಜೆಪಿ ‘ಧನ್ಯವಾದ ಮೋದಿ’ ಅಭಿಯಾನ ಆರಂಭಿಸಿದೆ. ಅಲ್ಲದೇ ಮೋದಿಯಂತಹ ಬಲಿಷ್ಠ ನಾಯಕರಿಂದ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಹೇಳಲು ಪ್ರಯತ್ನಿಸುತ್ತಿದೆ.

ಆದರೆ ಇದನ್ನೆಲ್ಲಾ ಬದಿಗಿಟ್ಟರೆ, ಈ ನಿರ್ಧಾರ ಮುಂದಿನ ವರ್ಷ ನಡೆಯಲಿರುವ ಪಂಚರಾಜ್ಯ ಚುನಾವಣೆ (Five States Election) ವಿಚಾರದಲ್ಲಿ ಭಾರೀ ಮಹತ್ವ ಪಡೆದುಕೊಳ್ಳುತ್ತದೆ. ಮುಂದಿನ ವರ್ಷ ಯುಪಿ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಐದು ರಾಜ್ಯಗಳಲ್ಲಿ ಚುನಾವಣೆ ಇದೆ. ಹೀಗಿರುವಾಗ ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರ ಪಂಜಾಬ್, ಯುಪಿ ಮತ್ತು ಉತ್ತರಾಖಂಡದಲ್ಲಿ (Uttar Pradesh and Uttarakhand) ಬದಲಾವಣೆ ತರಲಿದೆ ಎಂದು ಬಿಜೆಪಿ ನಾಯಕರ ನಂಬಿಕೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿತ್ತು. ಯುಪಿಯಲ್ಲೂ ರೈತರ ಚಳವಳಿಯ ಪರಿಣಾಮ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಲಖಿಂಪುರ-ಖೇರಿ ಘಟನೆಯ ನಂತರ, ಈ ವಿಷಯವು ಹೆಚ್ಚು ಕಾವು ಪಡೆದುಕೊಂಡಿತ್ತು

ಪಶ್ಚಿಮ ಉತ್ತರ ಪ್ರದೇಶದಲ್ಲಿ (West Uttar Pradesh), ತನಗೆ ಭಾರೀ ಹಿನ್ನಡೆಯಾಗಬಹುದೆಂಬ ಭಯ ಬಿಜೆಪಿಗಿತ್ತು, ಆದರೆ ಕಳೆದ ಚುನಾವಣೆಯಲ್ಲಿ ಪಶ್ಚಿಮ ಯುಪಿಯಲ್ಲಿ ಸಿಕ್ಕ ಗೆಲುವು ಬಿಜೆಪಿಗೆ ಭಾರೀ ಬಲ ಕೊಟ್ಟಿತ್ತು. ಗುರುವಾರ ಬಿಜೆಪಿ ನಡೆಸಿದ ಕಾರ್ಯತಂತ್ರದಲ್ಲಿ ಪಶ್ಚಿಮ ಯುಪಿಯಲ್ಲಿ ಬೂತ್ ಸಮಾವೇಶದ ಜವಾಬ್ದಾರಿಯನ್ನು ಅಮಿತ್ ಶಾಗೆ ನೀಡಲಾಗಿದೆ. ಹೀಗಿರುವಾಗ ಪ್ರತಿಪಕ್ಷಗಳು ಚುನಾವಣೆಯಲ್ಲಿ ಯಾವ ವಿಚಾರವನ್ನಿಟ್ಟುಕೊಂಡು ಕಿಡಿ ಹಚ್ಚಿಸಲು ಯತ್ನಿಸುತ್ತಿದ್ದರೋಮ, ಅದಕ್ಕೀಗ ತಣ್ಣೀರೆರಚಿದಂತಾಗಿದೆ ಎಂಬುವುದು ಬಿಜೆಪಿ ಲೆಕ್ಕಾಚಾರ.

ಪಂಜಾಬ್‌ನಲ್ಲೂ ಉಸಿರಾಡುವ ನಿರೀಕ್ಷೆಯಲ್ಲಿ ಬಿಜೆಪಿ

ಮತ್ತೊಂದೆಡೆ ಪಂಜಾಬ್‌ನಲ್ಲಿಯೂ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ಬಿಜೆಪಿ ಆಟವನ್ನೇ ಬದಲಿಸಿದೆ. ಇದೀಗ ಪಂಜಾಬ್ ಚುನಾವಣೆಯ ರೇಸ್ ಗೆ ಬಿಜೆಪಿ ಸೇರ್ಪಡೆಯಾಗಿದೆ. ಅಕಾಲಿದಳ ಮತ್ತು ಬಿಜೆಪಿ ಮತ್ತೆ ಒಂದಾಗಲಿದೆಯೇ ಎಂಬ ಊಹಾಪೋಹ ಜೋರಾಗಿದೆ. ಮತ್ತೊಂದೆಡೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗ ಬಿಜೆಪಿ ಜೊತೆಗಿದ್ದು, ತಮಗೆ ಇದರ ಲಾಭವಾಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಅಕಾಲಿದಳ ಈಗಾಗಲೇ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮಹಾರಾಷ್ಟ್ರದ ಉದಾಹರಣೆಯನ್ನು ನೀಡಿದ ಬಿಜೆಪಿ ನಾಯಕ, ಪಂಜಾಬ್‌ನಲ್ಲಿ ಬಿಜೆಪಿ ತನ್ನ ನೆಲೆಯನ್ನು ಸ್ಥಾಪಿಸಬೇಕಾದರೆ, ಅಕಾಲಿದಳದಿಂದ ದೂರ ಇರುವುದೇ ಉತ್ತಮ ಎಂದಿದ್ದಾರೆ. ನಾವು ಅಕಾಲಿದಳದ ಕಿರಿಯ ಪಾಲುದಾರರಾಗಿ ಪಂಜಾಬ್‌ನಲ್ಲಿ ಏಕೆ ಉಳಿಯಬೇಕು? ಎಂದೂ ಪ್ರಶ್ನಿಸಿದ್ದಾರೆ. ಉತ್ತರಾಖಂಡ ಚುನಾವಣೆಯಲ್ಲೂ ಬಿಜೆಪಿಗೆ ಲಾಭವಾಗಲಿದೆ ಎಂದು ಬಿಜೆಪಿ ಭಾವಿಸಿದೆ. ಉತ್ತರಾಖಂಡದ ತೇರಾಯ್ ಪ್ರದೇಶದಲ್ಲಿ ರೈತ ಚಳುವಳಿ ಪ್ರಭಾವ ಬೀರಿತ್ತು ಎಂಬುವುದು ಉಲ್ಲೇಖನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!