ನವದೆಹಲಿ: ಪಂಚರಾಜ್ಯ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಎಬಿಪಿ ನ್ಯೂಸ್-ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದ್ದು, ಮಧ್ಯಪ್ರದೇಶ, ಛತ್ತೀಸ್‌ಗಢ ಕಾಂಗ್ರೆಸ್, ರಾಜಸ್ಥಾನ ಬಿಜೆಪಿ ಪಾಲಾಗಲಿವೆ. ತೆಲಂಗಾಣ ಹಾಗೂ ಮಿಜೋರಂನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದೆ ಎಂದು ಭವಿಷ್ಯ ನುಡಿದಿವೆ.
ಮಧ್ಯಪ್ರದೇಶ: 230 ಸ್ಥಾನ ಇರುವ ಮಧ್ಯಪ್ರದೇಶದಲ್ಲಿ (Madhya Pradesh) ಕಾಂಗ್ರೆಸ್ 119 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ. ಬಿಜೆಪಿ 110ರಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ. ಹಾಲಿ ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
ಛತ್ತೀಸ್‌ಗಢ: 90 ಸ್ಥಾನ ಇರುವ ಛತ್ತೀಸ್‌ಗಢದಲ್ಲಿ (Chattisgarh) ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಕಾಂಗ್ರೆಸ್ 48 ಸ್ಥಾನ ನೆಲ್ಲಲಿದೆ. ಬಿಜೆಪಿ 40 ಸೀಟು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ದೇಶದ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ: ಸಮೀಕ್ಷೆ
ರಾಜಸ್ಥಾನ: 200 ಸೀಟು ಇರುವ ರಾಜಸ್ಥಾನದಲ್ಲಿ (Rajasthan) ಬಿಜೆಪಿ 132 ಸೀಟು ಗೆದ್ದು ಕಾಂಗ್ರೆಸ್‌ನಿಂದ ಅಧಿಕಾರ ಕೀಳಲಿದೆ. ಕಾಂಗ್ರೆಸ್ 64 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ತೆಲಂಗಾಣ: 119 ಸ್ಥಾನಗಳ ತೆಲಂಗಾಣದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದ್ದು, ಆಡಳಿತಾರೂಢ ಬಿಆರ್‌ಎಸ್ (BRS) 49 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ಇಲ್ಲಿ ಪುಟಿದೆದ್ದು 54 ಸ್ಥಾನ ಗಳಿಸಲಿದೆ. ಇತರರು ಇಲ್ಲಿ ನಿರ್ಣಾಯಕ ಆಗಬಲ್ಲರು ಎನ್ನಲಾಗಿದೆ.
ಮಿಜೋರಂ: 40 ಸ್ಥಾನದ ಮಿಜೋರಂ ಅತಂತ್ರವಾಗಬಹುದು. ಆಡಳಿತಾರೂಢ ಎಂಎನ್‌ಎಪ್ 11 ಸ್ಥಾನಕ್ಕೆ ಕುಸಿಯಲಿದೆ. ಕಾಂಗ್ರೆಸ್ 12 ಹಾಗೂ ಝಡ್‌ಪಿಎಂ 11 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ನ.23ಕ್ಕೆ ರಾಜಸ್ಥಾನದಲ್ಲಿ 1 ಲಕ್ಷ ಮದುವೆ, ಅಂದು ಚುನಾವಣೆ ಬೇಡ: ಶೆಖಾವತ್
ಜೈಪುರ: ಕೇಂದ್ರ ಚುನಾವಣಾ ಆಯೋಗವು ಘೋಷಣೆ ಮಾಡಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ನ.23ರಂದು ರಾಜಸ್ಥಾನ ಚುನಾವಣೆ ನಿಗದಿಯಾಗಿದ್ದು, ನ.23ರಂದೇ ರಾಜಸ್ಥಾನದಲ್ಲಿ ಬರೋಬ್ಬರಿ 1 ಲಕ್ಷ ಮದುವೆಗಳಿವೆ. ಹೀಗಾಗಿ ಅಂದು ಚುನಾವಣೆ ನಡೆಸುವುದು ಸೂಕ್ತವಲ್ಲ. ರಾಜ್ಯದಲ್ಲಿ ಚುನಾವಣಾ ದಿನಾಂಕವನ್ನು ಬದಲಾಯಿಸಿ ಎಂದು ರಾಜಸ್ಥಾನ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಆಗ್ರಹಿಸಿದ್ದಾರೆ.
3 ರಾಜ್ಯಗಳಲ್ಲಿ ಟಿಕೆಟ್ ಘೋಷಣೆ ಮಾಡಿದ ಬಿಜೆಪಿ: ರಾಜಸ್ಥಾನದಲ್ಲಿ 7 ಮಂದಿ ಸಂಸದರು ಕಣಕ್ಕೆ
ಒಂದು ಲಕ್ಷ ಮದುವೆಯೆಂದರೆ ರಾಜ್ಯದ ಬಹುತೇಕ ಜನರು ಅಂದು ಮದುವೆ ಸಮಾರಂಭಗಳಲ್ಲಿ ತೊಡಗಿರುತ್ತಾರೆ. ಹೀಗಿರುವಾಗ ಮತದಾನ ತೀರಾ ಕನಿಷ್ಠಕ್ಕೆ ಕುಸಿತವಾಗಲಿದೆ. ಅಂದು ಜನರು ಮತದಾನಕ್ಕೆ ಮುಂದಾಗುವುದಿಲ್ಲ ಎಂಬುದು ಶೇಖಾವತ್ ಅವರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ