ಹೋಟೆಲಲ್ಲಿ ಮೌತ್‌ಫ್ರೆಷ್ನರ್‌ ತಿಂದ ಐವರಿಗೆ ರಕ್ತವಾಂತಿ: ಆಸ್ಪತ್ರೆಗೆ ದಾಖಲು

By Kannadaprabha News  |  First Published Mar 5, 2024, 11:06 AM IST

ಹೋಟೆಲೊಂದರಲ್ಲಿ ಮೌತ್‌ ಫ್ರೆಷ್ನರ್‌ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ನವದೆಹಲಿ: ಹೋಟೆಲೊಂದರಲ್ಲಿ ಮೌತ್‌ ಫ್ರೆಷ್ನರ್‌ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಕಿತ್‌ ಕುಮಾರ್‌ ದಂಪತಿ ಹಾಗೂ ಅವರ ಮೂವರು ಸ್ನೇಹಿತರು ಹೋಟೆಲಿಗೆ ತೆರಳಿ ಆಹಾರ ಸೇವಿಸಿದ ಬಳಿಕ ಮೌತ್‌ ಫ್ರೆಷ್ನರ್‌ ಪಡೆದುಕೊಂಡರು. ಅದನ್ನು ಬಾಯಿಗೆ ಹಾಕಿಕೊಂಡ ಬಳಿಕ ಏಕಾಏಕಿ ಬಾಯಿಯಲ್ಲಿ ಸುಡುವ ಅನುಭವವಾಗಿ ಅದನ್ನು ಹೊರಗೆ ಉಗುಳಿದರು. ಇದರ ಬೆನ್ನಲ್ಲೇ ಮತ್ತೊಬ್ಬರು ಬಾಯಿಂದ ರಕ್ತದ ವಾಂತಿ ಮಾಡಿದ್ದಾರೆ. ಇದಕ್ಕೆ ಪರಿಹಾರ ಹುಡುಕಲು ಬಾಯಿಗೆ ನೀರು ಹಾಕಿಕೊಂಡರು ಸಮಸ್ಯೆ ಬಗೆ ಹರಿಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುಗ್ರಾಮದ ಸೆಕ್ಟರ್ 90ರಲ್ಲಿರುವ ಲಾಫೊರೆಸ್ಟಾ ಕೆಫೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗಿದ್ದು, ಅಂಕಿತ್ ಕುಮಾರ್ ಅವರ ಪತ್ನಿ ಹಾಗೂ ಸ್ನೇಹಿತರು ನಾಲಿಗೆ ಸುಟ್ಟ ಅನುಭವದಿಂದ ಅಳುತ್ತಿರುವುದು ಕಿರುಚುತ್ತಿರುವುದು ಕಾಣಿಸುತ್ತಿದೆ. ಅದರಲ್ಲೂ ಓರ್ವ ವ್ಯಕ್ತಿ ರೆಸ್ಟೋರೆಂಟ್‌ನ ಪ್ಲೋರ್ ಮೇಲೆಯೇ ವಾಂತಿ ಮಾಡಿದ್ದಾರೆ.  ಮತ್ತೊಬ್ಬರು ಹೀಗೆ ಸುಟ್ಟ ಅನುಭವವಾದವರಿಗೆ ಐಸ್ ನೀಡಿ ಸಮಾಧಾನಿಸುವುದು ಕಂಡು ಬಂದಿದೆ. ಕೆಲವರು ಮೌತ್ ಫ್ರೆಶ್ನರ್ ತಿಂದ ಮೇಲೆ ಬಾಯಿ ಸುಡುತ್ತಿದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ. 

Latest Videos

undefined

Personal Care: ಮೀಟಿಂಗ್ ಇರಲಿ ಡೇಟಿಂಗ್, ಜೇಬಿನಲ್ಲಿರಲಿ ಈ ಸ್ಪ್ರೇ

ಮೌತ್ ಪ್ರಶ್ನೆರ್‌ನಲ್ಲಿ ಅವರು ಏನು ಮಿಶ್ರಣ ಮಾಡಿದ್ದರೋ ಗೊತ್ತಿಲ್ಲ,  ಇಲ್ಲಿ ಅದನ್ನು ಸೇವಿಸಿದ ಪ್ರತಿಯೊಬ್ಬರು ವಾಂತಿ ಮಾಡ್ತಿದ್ದಾರೆ.  ತಿಂದವರ ಬಾಯೆಲ್ಲಾ ಸುಟ್ಟ ಅನುಭವವಾಗಿದೆ.  ಅವರು ಯಾವ ರೀತಿಯ ಆಸಿಡ್ ನಮಗೆ ನೀಡಿದ್ದಾರೆ ಎಂದು ಗೊತ್ತಿಲ್ಲ ಎಂದು ಕುಮಾರ್ ಹೇಳಿದ್ದಾರೆ. ಆರಂಭದಲ್ಲಿ ವಾಂತಿಯಾದ ನಂತರ ನಾಲಗೆ ಸುಟ್ಟಂತ ಅನುಭವವಾಗಿದ್ದು, ಬಾಯನ್ನು ನೀರಲ್ಲಿ ತೊಳೆದ ನಂತರವೂ ಒಂಥರ ಕಿರಿಕಿರಿಯ ಅನುಭವವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು,  ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ  ಸಂತ್ರಸ್ತರು ದೂರು ನೀಡಿದ ಹಿನ್ನೆಲೆ ಪೊಲೀಸರು ಹೊಟೇಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಬಾಯಿಯ ವಾಸನೆ ತಡೆಗಟ್ಟಲು ನೆಲ್ಲಿಕಾಯಿ Mouth Freshener ತಯಾರಿಸಿ!

click me!