ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ, ಪ್ರಯಾಣಿಕರ ಸೇವೆ ತಾತ್ಕಾಲಿಕ ಸ್ಥಗಿತ!

By Chethan Kumar  |  First Published Nov 15, 2024, 3:15 PM IST

ಮುಂಬೈ ಮೆಟ್ರೋ ನಿಲ್ದಾದಲ್ಲಿ ಬೆಂಕಿ ಕಾಣಿಸಿಕೊಂಡ ಭಾರಿ ಅನಾಹುತ ಸೃಷ್ಟಿಯಾಗಿದೆ. BKC ನಿಲ್ದಾಣದ ಪ್ರವೇಸ ಹಾಗೂ ನಿರ್ಗಮನ ದ್ವಾರದ ಬಳಿ ಬೆಂಕಿ ಕಾಣಿಸಿಕೊಂಡ ಕಾರಣ  ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. 
 


ಮುಂಬೈ(ನ.15) ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡದಿಂದ ತಾತ್ಕಾಲಿಕವಾಗಿ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(BKC) ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ಎ4 ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿದೆ.  ಬೆಂಕಿಯಿಂದ ಮೆಟ್ರೋ ನಿಲ್ದಾಣದ ಸುತ್ತ ದಟ್ಟ ಹೊಗೆಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಿಕೆಎಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಇದೀಗ ಪ್ರಯಾಣಿಕರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿ ಕಾರ್ಯ ಮಾಡಿದೆ. ಗೇಟ್ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಪ್ರಯತ್ನದಿಂದ ಬೆಂಕಿ ನಂದಿಸಲಾಗಿದೆ. ಆದರೆ ದಟ್ಟ ಹೊಗೆ ಸುತ್ತ ಮುತ್ತ ಆವರಿಸಿದೆ. ಮೆಟ್ರೋ ನಿಲ್ದಾಣದಲ್ಲೂ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೆಟ್ರೋ ರೈಲು ನಿಲ್ದಾಣ ಸೇವೆ ಸ್ಛಗಿತಗೊಂಡಿದೆ. ಇನ್ನು ಪ್ರಯಾಣಕರು ಬಾಂದ್ರಾ ಕಾಲೋನಿ ಮೆಟ್ರೋ ನಿಲ್ದಾಣ ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ.

Tap to resize

Latest Videos

ಗುಂಡಿ ಬಿದ್ದ ರಸ್ತೆಯಲ್ಲಿ ಪಟಾಕಿ ಕೊಂಡೊಯ್ಯುವಾಗ ಸ್ಫೋಟ, ಸ್ಕೂಟರ್ ಸವಾರ ಮೃತ!

ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರೂ, ಸಿಬ್ಬಂದಿಗಳು, ಸ್ಥಳೀಯರಿಗೆ ಗಾಯವಾಗಿಲ್ಲ. ಸುರಕ್ಷತಾ ದೃಷ್ಟಿಯಿಂದ ಮುಂದಿನ ಸೂಚನೆವರೆಗೆ ಬಾಂದ್ಲಾ ಕುರ್ಲಾ ಕಾಂಪ್ಲೆಕ್ಸ್ ಸ್ಥಗಿತಗೊಳಿಿಸಲಾಗಿದೆ ಎಂದು ಮುಂಬೈ ಮೆಟ್ರೋ ಸಂಸ್ಥೆ ಹೇಳಿದೆ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಿರುವ ಕಾರಣ ಬಿಕೆಸಿ ನಿಲ್ದಾಣಧ ಪ್ರಯಾಣಿಕರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈ ಮೆಟ್ರೋ ಹೇಳಿದೆ. ಹೊಗೆ ಕಡಿಮೆಯಾದ ಬಳಿಕ ಸುರಕ್ಷತಾ ಪರಿಶೀಲನೆ ನಡೆಯಲಿದೆ. ಸುರಕ್ಷತೆ ಖಚಿತಪಡಿಸಿಕೊಂಡ ಬಳಿಕ ರೈಲು ಸೇವೆ ಪುನರ್ ಆರಂಭಗೊಳ್ಳಲಿದೆ ಎಂದು ಸೂಚಿಸಿದೆ.ಪ್ರಯಾಣಿಕರ ತಾಳ್ಮೆಗೆ ಅಭಿನಂದನೆಗಳು ಎಂದು ಮುಂಬೈ ಮೆಟ್ರೋ ಹೇಳಿದೆ. 

ಮೆಟ್ರೋ ನಿಲ್ದಾಣದಿಂದ 40 ರಿಂದ 50 ಅಡಿ ಆಳದಲ್ಲಿರುವ ಪೀಠೋಪರಣಗಳ ಮಳಿಗೆ ಹಾಗೂ ಸ್ಟೋರೇಜ್ ಶಾಪ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅನಾಹುತ ಸೃಷ್ಟಿಯಾಗಿದೆ. ಮೆಟ್ರೋ ನಿಲ್ದಾಣದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಎ4 ಪ್ರವೇಶ ದ್ವಾರದ ಬಳಿಕ ಈ ಸ್ಟೋರ್ ಇರುವುದರಿಂದ ಪ್ರಯಾಣಿಕರಿಗೂ ಸಮಸ್ಯೆಯಾಗಿದೆ. ಹೀಗಾಗಿ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈ ಮೆಟ್ರೋ ಹೇಳಿದೆ. 

ಮುಂಬೈ ಮೆಟ್ರೋ ಇತರ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಕೇವಲ ಬಿಕೆಸಿ ನಿಲ್ದಾಣ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯ ಅಧಿಕಾರಿಗಳು ಬಿಕೆಸಿ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದಾರೆ. ಸಿಬ್ಬಂದಿಗಳು ಮತ್ತೆ ಮೆಟ್ರೋ ಸೇವೆ ಪುನರ್ ಆರಂಭಿಸಲು ತ್ವರಿತ ಕೆಲಸ ನಡೆಯುತ್ತಿದೆ. ಇತ್ತ ಮುಂಬೈನ ಚೆಂಬೂರ್‍‌ನಲ್ಲೂ ವಲಯದಲ್ಲಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಒರ್ವ ಗಾಯಗೊಂಡಿದ್ದಾನೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 60 ವರ್ಷದ ವ್ಯಕ್ತಿ ಬೆಂಕಿಯಿಂದ ಗಾಯಗೊಂಡಿದ್ದಾನೆ.

ಬೈಕ್ ಟ್ಯಾಂಕ್‌ಗೆ ಪಟಾಕಿ ಇಟ್ಟು ಸಿಡಿಸಿದ ಯುವಕ; ಬೈಕ್ ಗತಿ ಏನಾಯ್ತು ನೋಡಿ!

click me!