
ಜೊರ್ಹಟ್ (ಜೂ.14) ಭಾರತೀಯ ವಾಯುಪಡೆಯ AN-32 ವಿಮಾನ ಅಸ್ಸಾಂ ಜೋರ್ಹಟ್‌ನಲ್ಲಿ ದುರಂತಕ್ಕೀಡಾದ ಘಟನೆಗೆ ದೇಶವೇ ಮರುಗಿದೆ. ವಾಯುಪಡೆಯ ಐವರು ಅಧಿಕಾರಿಗಳು ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ಕೋ ಪೈಲೆಟ್ ಪವಾಡ ಸದೃಶ್ಯ ಪಾರಾಗಿದ್ದಾರೆ. ಈ ದುರಂತ ಘಟನೆ ಹೇಗಾಯಿತು ಅನ್ನೋ ಕುರಿತು ಸ್ಪಷ್ಟ ವಿಡಿಯೋ ಬಹಿರಂಗವಾಗಿದೆ. ವಾಯುಪಡೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಬಳಿಕ ರನ್‌ವೇನಿಂದ ಪಕ್ಕಕ್ಕೆ ಸರಿದು ದುರಂತ ಸಂಭವಿಸಿದೆ. ಈ ವಿಡಿಯೋ ಅಪಘಾತದ ಕುರಿತ ಸ್ಪಷ್ಟ ಚಿತ್ರಣ ನೀಡುತ್ತಿದೆ.
ಜೋರ್ಹಟ್ ನಿಲ್ದಾಣದಲ್ಲಿ ವಾಯುಪಡೆಯ AN-32 ವಿಮಾನ ಯಾವುದೇ ಅಡೆ ತಡೆ ಇಲ್ಲದೆ, ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ವೇಗವಾಗಿ ಲ್ಯಾಂಡ್ ಆದ ವಿಮಾನ ರನ್‌ವೇನಲ್ಲಿ ಸಾಗುತ್ತಿದ್ದಂತೆ ಪಕ್ಕಕ್ಕೆ ಸರಿದಿದೆ. ಬಳಿಕ ನಿಯಂತ್ರಣವೇ ಸಿಗದಾಗಿದೆ. ಅದೇ ವೇಗದಲ್ಲಿ ಸಾಗಿದ ವಿಮಾನ ಹುಲ್ಲು ಪ್ರದೇಶದ ಮೇಲೆ ಸಾಗಿತ್ತು. ಬಳಿಕ ಹುಲ್ಲು, ಮಣ್ಣಿನ ದಿಬ್ಬಗಳಿಗೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಸಂಪೂರ್ಣ ಆವರಿಸಿಕೊಂಡಿದೆ. ಸೆಕೆಂಡ್‌ಗಳ ಅಂತರದಲ್ಲಿ ದುರಂತ ನಡೆದಿದೆ.
ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಅಷ್ಟರಲ್ಲಾಗಲೇ ವಿಮಾನ ಭಾಗಶಃ ಹೊತ್ತಿ ಉರಿದಿತ್ತು. ಹೀಗಾಗಿ ಬೆಂಕಿ ಜ್ವಾಲೆ ನಿಯಂತ್ರಣಕ್ಕೆ ತರುವುದು ಸುಲಭವಾಗಿರಲಿಲ್ಲ. ಮೊದಲ ಅಗ್ನಿಶಾಮಕ ದಳ ಸಂಪೂರ್ಣ ನೀರನ್ನು ಬಳಿಸಿದರೂ ಬೆಂಕಿ ಆರಲಿಲ್ಲ. ಹೀಗಾಗಿ ಮತ್ತೊಂದು ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಗಿತ್ತು.
Damn! The footage from Jorhat!
Looked very much alright till the landing roll!
Drifted left & lost control!
Om Shanti 🇮🇳 💐 🫡
Jai Hind pic.twitter.com/ZUhrlhnPA4— BlackJack! 🇮🇳 (@B777200F) June 14, 2026
ಮಾಹಿತಿ ತಿಳಿಯುತ್ತಿದ್ದಂತೆ ವಾಯಪಡೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಯಾಚರಣೆ ತೀವ್ರಗೊಂಡಿತ್ತು. ಅಷ್ಟರಲ್ಲಿ ವಿಮಾನ ಬಹುತೇಕ ಹೊತ್ತಿ ಉರಿದಿತ್ತು. ವಾಯುಪಡೆ ವಿಮಾನ ಲ್ಯಾಂಡಿಂಗ್, ರನ್‌ವೇನಿಂದ ಪಕ್ಕಕ್ಕೆ ಸರಿದು ಅಪಘಾತ, ಬಳಿಕ ಅಗ್ನಿಶಾಮಕದಳದ ಕಾರ್ಯಾಚರಣೆ ಸೇರಿ ಸಂಪೂರ್ಣ ಘಟನೆಯ ವಿಡಿಯೋ ಲಭ್ಯವಾಗಿದೆ. ಕೆಲ ಸೆಕೆಂಡ್‌ಗಳ ಕಾಲ ರನ್‌ವೇನಲ್ಲಿ ಸಾಗಿದ್ದರೆ ವಿಮಾನ ಪತನವಾಗುತ್ತಿರಲಿಲ್ಲ. ಆದರೆ ಇದಕ್ಕಿದ್ದಂತೆ ರನ್‌ವೇನಿಂದ ಎಡಕ್ಕೆ ಡ್ರಿಫ್ಟ್ ಆಗಲು ಕಾರಣವೇನು? ಈ ಕುರಿತು ಹಲವು ಪ್ರಶ್ನೆಗಳು ಮೂಡಿದೆ.
ವಾಯುಪಡೆ ಈಗಾಗಲೇ ತನಿಖೆಗೆ ಆದೇಶಿಸಿದ್ದು, ತನಿಖೆ ತೀವ್ರಗೊಂಡಿದೆ. ದುರಂತ ಅಂದರೆ ಐವರು ಅಧಿಕಾರಿಗಳು ಈ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಘಟನೆಯ ಈ ದೃಶ್ಯ ಇದೀಗ ತನಿಖೆಗೆ ಪ್ರಮುಖ ಆಧಾರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ