ಕ್ಯಾನ್ಸರ್‌ ಪೀಡಿತ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಸಿದ ಅಮೆರಿಕ ಏರ್‌ಲೈನ್ಸ್‌!

By Gowthami K  |  First Published Feb 5, 2023, 10:26 PM IST

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳಾ ಕ್ಯಾನ್ಸರ್ ರೋಗಿಯೊಬ್ಬರು ವಿಮಾನದಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಜನವರಿ 30 ರಂದು ಅಮೆರಿಕ ಏರ್‌ಲೈನ್ಸ್‌ ವಿಮಾನದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  


ನವದೆಹಲಿ (ಫೆ.5): ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳಾ ಕ್ಯಾನ್ಸರ್ ರೋಗಿಯೊಬ್ಬರು ವಿಮಾನದಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಜನವರಿ 30 ರಂದು ಅಮೆರಿಕ ಏರ್‌ಲೈನ್ಸ್‌ ವಿಮಾನದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ವಿಮಾನದ ಸಿಬ್ಬಂದಿಯ ಬಳಿ ಮೀನಾಕ್ಷಿ ಸೇನ್‌ ಗುಪ್ತಾ ಎಂಬುವರು ತಮ್ಮ ಕೈಚೀಲವನ್ನು ಕ್ಯಾಬಿನ್‌ನಲ್ಲಿ ಇಡಲು ಫ್ಲೈಟ್‌ ಅಟೆಂಡೆಂಟ್‌ ಬಳಿ ವಿನಂತಿಸಿದ್ದರು. ಆದರೆ, ಅವರಿಗೆ ವಿಮಾನದ ಗಗನಸಖಿ ಯಾವುದೇ ಸಹಕಾರ ನೀಡಲಿಲ್ಲ. ಅದು ಭಾರ ಇದ್ದ ಕಾರಣ ಗಗನ ಸಖಿಯ ನೆರವು ಕೋರಿದ್ದರು. ಆದರೆ, ವಿಮಾನದ ಸಿಬ್ಬಂದಿ ಸಹಾಯ ಮಾಡುವುದರ ಬದಲಾಗಿ, ಇದು ತಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ಮೀನಾಕ್ಷಿ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.  ಮೀನಾಕ್ಷಿ ಸೇನ್‌ಗುಪ್ತಾ ಈ ಘಟನೆ ವಿರುದ್ಧ ದೂರು ದಾಖಲಿಸಿದ ನಂತರ ಇದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಮೀನಾಕ್ಷಿ ಗುಪ್ತಾ ದೆಹಲಿ ಪೊಲೀಸರಿಗೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ನೀಡಿದ ದೂರಿನಲ್ಲಿ 'ತನ್ನ ಕೈಗಳು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಿಂದ ದುರ್ಬಲವಾಗಿರುವುದರಿಂದ ಹ್ಯಾಂಡ್‌ಬ್ಯಾಗ್‌ ಮೇಲಿಡಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಗಗನಸಖಿ ಸಹಾಯ ಮಾಡಲಿಲ್ಲ. ವಿಮಾನದ ನಿಗದಿತ ಸೀಟಿಗೆ ತೆರಳಲು ತಾನು ವೀಲ್‌ಚೇರ್‌ ಸಹಾಯವನ್ನು ಪಡೆದಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

Tap to resize

Latest Videos

ನಾನು ಬ್ರೇಸ್‌ ಧರಿಸಿದೆ. ಇದು ಎಲ್ಲರಿಗೂ ಕಾಣಿಸುವಂತಿತ್ತು. ಇದರಿಂದ ನಾನು ಅನಾರೋಗ್ಯ ಹೊಂದಿದ್ದೇನೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ನಾನು ಯಾವುದೇ ಭಾರವನ್ನು ಕೈಯಲ್ಲಿ ಎತ್ತಿಕೊಳ್ಳುವಂತೆ ಇಲ್ಲ.  ಹೆಚ್ಚು ನಡೆಯುವುದರಿಂದ ಮತ್ತು ಭಾರ ಎತ್ತುವುದರಿಂದ ನಾನು ದೈಹಿಕವಾಗಿ ದುರ್ಬಲವಾಗುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಗ್ರೌಂಡ್‌ ಸ್ಟಾಫ್‌ಗಳು ನನಗೆ ತುಂಬಾ ಬೆಂಬಲ ನೀಡಿದ್ದಾರೆ. ವಿಮಾನದೊಳಗೆ ಹೋಗಲು ಮತ್ತು ಸೀಟಿನ ಬದಿಯಲ್ಲಿ ಬ್ಯಾಗ್ ಇರಿಸಲು ನನಗೆ ಸಹಾಯ ಮಾಡಿದರು.   ಆದರೆ, ವಿಮಾನದೊಳಗೆ ನನಗೆ ಗಗನಸಖಿಯರು ಸಹಾಯ ಮಾಡಲಿಲ್ಲ. ನನ್ನ ಮನವಿಯನ್ನು  ನಿರಾಕರಿಸಿದರು ಎಂದಿದ್ದಾರೆ.

ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಹೋದ ಪೋಷಕರು!

ನಾನು ಹಲವು ಬಾರಿ ಆಕೆಯ ಸಹಾಯ ಯಾಚಿಸಿದೆ. ಆದರೆ ಗಗನಸಖಿ ತುಂಬಾ ನಿಷ್ಟುರವಾಗಿ ನಡೆಸಿಕೊಂಡರು. ನಿಮಗೆ ಈ ವಿಮಾನದದಲ್ಲಿ ಆರಾಮದಾಯಕವಾಗಿಲ್ಲದಿದ್ದರೆ ವಿಮಾನದಿಂದ ಇಳಿದುಹೋಗಬಹುದೆಂದು ಹೇಳಿದರು. ಅವರೆಲ್ಲರೂ ನನ್ನನ್ನು ಇಳಿಸುವ ನಿರ್ಧಾರಕ್ಕೆ ಬಂದರು ಎಂದು ಸೇನ್‌ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಸಾಗಾಟ, ಪ್ರಯಾಣಿಕನ ಬಂಧನ

 ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸೇನ್‌ಗುಪ್ತಾ  ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ. ಸದ್ಯ ಈ ಪೋಸ್ಟ್  ವೈರಲ್ ಆಗಿದ್ದು, ವಿಷಯದ ಕುರಿತು ಮಧ್ಯಪ್ರವೇಶಿಸುವಂತೆ ನೆಟ್ಟಿಗರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ದೆಹಲಿಯ ಮಹಿಳಾ ಆಯೋಗಕ್ಕೆ ಟ್ಯಾಗ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ವಿವರಣೆ ನೀಡುವಂತೆ  ಭಾರತದ ವಿಮಾನಯಾನ ನಿರ್ದೇಶನಾಲಯವು ಅಮೆರಿಕ ಏರ್‌ಲೈನ್ಸ್‌ಗೆ ಸೂಚಿಸಿದೆ.

click me!