
ನೋಯ್ಡಾ(ಫೆ.17): ಪ್ರತಿ ದಿನ 100ಕ್ಕೂ ಹೆಚ್ಚು ಬಡವರು, ನಿರ್ಗತಿಕರು, ಹಸಿದು ದಣಿದವರಿಗೆ ಊಟ, ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಪೋಷಕರ ಕಳೆದುಕೊಂಡ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಸೇರಿದಂತೆ ಹಲವು ಸಮಾಜಮುಖಿ ಸೇವೆ ಮೂಲಕ ನೋಯ್ಡಾದ ಸರ್ಫರಾಜ್ ಖಾನ್ ಹೊಸ ಅಧ್ಯಾಯ ಬರೆದಿದ್ದಾರೆ. ಸರ್ಫರಾಜ್ ಹಾಗೂ ಅವರ ಕುಟುಂಬ ಕಳೆದ 5 ವರ್ಷದಿಂದ ಸಮಾಜಸೇವೆಯನ್ನೇ ದೇವರ ಸೇವೆ ಎಂದು ಮಾಡುತ್ತಿದ್ದಾರೆ. ಯಾರ ನೆರವಿಲ್ಲದೆ, ಯಾಾವುದೇ ಪ್ರಚಾರವಿಲ್ಲದೆ ಡಾ. ಸರ್ಫರಾಜುದ್ದೀನ್ ಹಾಗೂ ಅವರ ಕುಟಂಬ ಸಮಾಜಸೇವೆಯಲ್ಲಿ ತೊಡಗಿದೆ.
ಡಾ. ಸರ್ಫರಾಜುದ್ದೀನ್ ಗೆಝಾ ಗ್ರಾಮದ ಬಳಿಕ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದಿದ್ದಾರೆ. ಇಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. 2009ರಲ್ಲಿ ಈ ಶಾಲೆ ಆರಂಭಿಸಿದ್ದಾರೆ. ಇದೀಗ ಶಾಲೆಯ ಎಲ್ಲಾ ತರಗತಿಗಳು ಭರ್ತಿಯಾಗಿದೆ. ಮಕ್ಕಳಿಗೆ ಉಚಿತ ಶಿಕ್ಷಣ ಜೊತೆ, ಉಚಿತ ಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದಾರೆ. ತಮ್ಮ ಸ್ವಂತ ಹಣದಿಂದ ಶಾಲೆ ಆರಂಭಿಸಿ ಇದೀಗ ಗೆಝಾ ಗ್ರಾಮದ ಮಾದರಿ ಶಾಲೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಮಾಜ ಸೇವಕ ನಸೀರ್ ಅಹಮದ್‌ಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್!
2 ಅಂತಸ್ತಿನ ಶಾಲೆಯಲ್ಲಿ 20 ಕೊಠಡಿಗಳಿವೆ. ಈ ಶಾಳೆಯಲ್ಲಿ ಪೋಷಕರನ್ನು ಕಳೆದಕೊಂಡ ಮಕ್ಕಳು, ಅನಾಥ ಮಕ್ಕಳು, ಕೂಲಿ ಕೆಲಸ ಮಾಡುವ ಬಡವರ ಮಕ್ಕಳು ಸೇರಿದಂತೆ ಕಡು ಬಡತನದ ಬೇಗೆಯಲ್ಲಿ ಸಿಲುಕಿ ಶಿಕ್ಷಣದಿಂದ ವಂಚಿತರಾಗುವ ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಇತರ ಮಕ್ಕಳು ಕಲಿಯುತ್ತಿದ್ದಾರೆ. ಸಾಮಾನ್ಯ ಮಕ್ಕಳು ಹಣ ಪಾವತಿಸಿ ಕಲಿಯುತ್ತಿದ್ದರೆ, ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. 400 ಮಕ್ಕಳು ಸದ್ಯ ಸರ್ಫರಾಜುದ್ದೀನ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ 40 ಮಕ್ಕಳು ಹತ್ತಿರದಲ್ಲಿರುವ ಮದರಸಾದಿಂದ ಮಕ್ಕಳಾಗಿದ್ದರೆ, ಹೆಚ್ಚಿನ ಮಕ್ಕಳು ಮಸ್ಲಿಮೇತರರಾಗಿದ್ದಾರೆ.
ಶಿಕ್ಷಣ ಮಾತ್ರವಲ್ಲ ಇದರ ಜೊತೆಗೆ ಮಕ್ಕಳಿಗೆ ಕ್ರೀಡಾ ತರಬೇತಿಗಳನ್ನು ನೀಡಲಾಗುತ್ತದೆ. ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ಗ್ರಾಮದಲ್ಲಿನ ಸರ್ಕಾರಿ ಶಾಲೆ ಹಾಗೂ ಮದರಸಾ ಮಕ್ಕಳಿಗೆ ಕ್ರೀಡಾ ತರಬೇತಿ ಸೇರಿದಂತೆ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಇನ್ನು ಅತೀವ ಹಣ ಪಾವತಿಸಿ ಕೋಚಿಂಗ್ ಪಡೆಯುವಷ್ಟು ಶಕ್ತರಾಗಿಲ್ಲ. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಸರ್ಫರಾಜುದ್ದೀನ್ ಹೇಳಿದ್ದಾರೆ.
ಶಾಲೆಯಲ್ಲಿ ಕ್ರೀಡಾ ತರಬೇತಿಗಾಗಿ ಕೋಚ್‌ಗಳನ್ನು ನೇಮಿಸಲಾಗಿದೆ. ವಾಲಿಬಾಲ್ ಕೋಚ್ ವಿಶಾಲ್ ಶಾಲೆಯಲ್ಲಿನ ತರಬೇತಿ ಕಾರ್ಯಕ್ರಮ ಹಾಗೂ ಉಚಿತ ಅವಕಾಶಗಳ ಕುರಿತು ಮಾತನಾಡಿದ್ದಾರೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರೆ. ತಾಯಿ ಇತರರ ಮನೆಯಲ್ಲಿ ಮನೆಗೆಲಸ ಮಾಡಿ ನನ್ನ ಸಾಕಿದ್ದಾರೆ. ನನಗೆ ವಿದ್ಯಾಭ್ಯಾಸದ ವೇಳೆ ಹಣದ ಕೊರತೆಗಳು ಕಾಡಿತ್ತು. ವಾಲಿಬಾಲ್ ತರಬೇತಿದಾರರನಾಗಿ ಇಲ್ಲಿ ನಿಯೋಜನೆಗೊಂಡಿದ್ದೇನೆ. ನನಗೆ ಸರ್ಫರಾಜ್ ಉತ್ತಮ ವೇತನ ನೀಡುತ್ತಿದ್ದಾರೆ. ನಾನು 100 ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ.
ಸುದೀಪ್‌ರಿಂದ ಮತ್ತೊಂದು ಮಹತ್ತರ ಕಾರ್ಯ; ಅನಾಥ ಮಹಿಳೆಗೆ ಮನೆ ನಿರ್ಮಾಣ
ವೃತ್ತಿಯಲ್ಲಿ ವೈದ್ಯರಾಗಿರುವ ಸರ್ಫಾರಜ್ ಗೆಝಾ ಜಿಲ್ಲಿಯಲ್ಲಿ ಕ್ಲೀನಿಕ್ ನಡೆಸುತ್ತಿದ್ದಾರೆ. ಶಾಲೆಯ ಮಕ್ಕಳು, ಪೋಷಕರು, ನಿರ್ಗತಿಕರು, ಬಡವರು ಚಿಕಿತ್ಸೆಗಾಗಿ ತೆರಳಿದರೆ ಅವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ವಿಶಾಲ್ ಹೇಳಿದ್ದಾರೆ. ಶಾಲಾ ಮಕ್ಕಳ ಉಚಿತ ತಪಾಸಣೆ, ಆನಾರೋಗ್ಯವಿದ್ದರೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ 200 ರಿಂದ 250 ಉಚಿತ ಮೆಡಿಕಲ್ ಕ್ಯಾಂಪ್ ಮಾಡಲಾಗಿದೆ.
ನನ್ನ ತಂದೆ ಉತ್ತರ ಪ್ರದೇಶ ಸರ್ಕಾರಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಅವರು ಮಾಡುತ್ತಿದ್ದ ಸಾಮಾಜಿಕ ಸೇವೆಗಳನ್ನು ಹತ್ತಿರದಿಂದ ನೋಡಿ ಬೆಳೆದಿದ್ದೇನೆ.ಹೀಗಾಗಿ ನಾನು ಕೂಡ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹಂಬಲ ಬೆಳೆಯಿತು. ತಂದೆಯ ಮಾರ್ಗದರ್ಶನದಂತೆ ಶಾಲೆ ಆರಂಭಿಸಿದೆ. ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇನೆ. ಪ್ರತಿ ದಿನ 100ಕ್ಕೂ ಹೆಚ್ಚು ಬಡವರಿಗೆ ಊಟ ನೀಡುತ್ತಿದ್ದೇನೆ. ಇದಕ್ಕೆಲ್ಲ ಹಣದ ಅವಶ್ಯತೆಯೂ ಇದೆ. ಕ್ಲೀನಿಕ್, ಇತರ ಮೂಲಗಳಿಂದ ಬರುವ ನನ್ನ ಆದಾಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಇನ್ನು ನನ್ನ ಆತ್ಮೀಯರ ಬಳಗ ಕೂಡ ನೆರವು ನೀಡುತ್ತಿದೆ ಎಂದು ಡಾ.ಸರ್ಫರಾಜುದ್ದೀನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ