ರೈತರ ಚಕ್ಕಾ ಜಾಮ್ ಪ್ರತಿಭಟನೆ; ಅಮಿತ್ ಶಾ-ದೋವಲ್ ತುರ್ತು ಸಭೆ!

By Suvarna NewsFirst Published Feb 4, 2021, 8:02 PM IST
Highlights

ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತೊಮ್ಮೆ ಆಗದಿರಲು ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾರಣ ಇದೇ ಫೆಬ್ರವರಿ 6 ರಂದು ರೈತರು ದೇಶಾದ್ಯಂತ ಚಕ್ಕ ಜಾಮ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತುರ್ತು ಸಭೆ ಕರೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಫೆ.04): ರೈತ ಸಂಘಟನೆಗಳು ಕರೆ ನೀಡಿದ ದೇಶಾದ್ಯಂತ ರಸ್ತೆ ತಡೆ ಪ್ರತಿಭಟನೆ ಮತ್ತೆ ಹಿಂಸಾ ರೂಪ ಪಡೆಯದಿರಲು ಈ ಬಾರಿ ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಕಣಕ್ಕಿಳಿದಿದ್ದಾರೆ. ಫೆಬ್ರವರಿ 6 ರಂದು ರೈತ ಸಂಘಟನೆಗಳು ಚಕ್ಕಾ ಜಾಮ್ ನಡೆಸಲಿದ್ದಾರೆ.

ರೈತ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರೋಧಿ ಪಿತೂರಿಗೆ ಟೂಲ್ ಕಿಟ್ ನೀಡಿದ ಗ್ರೇಟಾ ಧನ್ಬರ್ಗ್!.

ಅಜಿತ್ ದೋವಲ್, ದೆಹಲಿ ಪೊಲೀಸ್ ಕಮಿಷನರ್ ಎಸ್ ಎಲ್ ಶ್ರೀವಾತ್ಸವ್ ಹಾಗೂ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ. ರೈತರ ರಸ್ತೆ ತಡೆ ಪ್ರತಿಭಟನೆ ಹಾಗೂ ಭದ್ರತಾ ನಿಯೋಜನೆ ಕುರಿತು ಸಭೆ ನಡೆಸಲಾಗಿದೆ. ಇಷ್ಟೇ ಅಲ್ಲ ರೈತ ಪ್ರತಿಭಟನೆ ಲಾಭ ಗಳಿಸಲು ಪ್ರಯತ್ನಿಸುತ್ತಿರುವ ಉಗ್ರಗಾಮಿ ಗುಂಪಗಳನ್ನು ಹತ್ತಿಕ್ಕಲು ಮಾಸ್ಟರ್ ಪ್ಲಾನ್ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಫೆಬ್ರವರಿ 6 ರಂದು ಚಕ್ಕಾ ಜಾಮ್ ನಡೆಸುವುದಾಗಿ ರೈತ ಸಂಘಟನೆ ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ. ಆದರೆ ದೆಹಲಿಯಲ್ಲಿ ಈ ಪ್ರತಿಭಟನೆ ಇರುವುದಿಲ್ಲ. ದೆಹಲಿ ಹೊರತು ಪಡಿಸಿ ದೇಶಾದ್ಯಂತ ಪ್ರತಿಭಟನೆ ಇರಲಿದೆ ಎಂದಿದ್ದಾರೆ.

click me!