ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ರಾಜಕೀಯ ಪಕ್ಷಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದಾರೆ. ಮೋದಿ ಸರ್ಕಾರ ಕಂಡ ಬೃಹತ್ ಪ್ರತಿಭಟನೆಗಳಲ್ಲಿ ಸದ್ಯ ನಡೆಯುತ್ತಿರುವ ರೈತ ಪ್ರತಿಭಟನೆ ಒಂದಾಗಿದೆ. ಆದರೆ ಪ್ರತಿಭಟನೆಯ ಮುಂದಾಳತ್ವವಹಿಸಿರುವ ರೈತ ಸಂಘಟನೆಯ ನಾಯಕರು ಅಸಲಿಗೆ ರೈತರೇ ಇಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ. ಅಸಲಿ ಸತ್ಯ ಇಲ್ಲಿದೆ.
ದೆಹಲಿ(ಡಿ.12): ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ಭಾರತ್ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘಟನೆಗಳು, ಇಂದು(ಡಿ.12) ದೆಹಲಿ, ಆಗ್ರಾ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದೆ. ಕಾಯ್ದೆ ಪರಿಷ್ಕರಣೆ ಅಗತ್ಯವಿಲ್ಲ, ಹಿಂಪಡೆಯಲೇ ಬೇಕು ಎಂದು ರೈತ ಸಂಘಟನೆಗಳು ಪಟ್ಟು ಹಿಡಿದಿದೆ. ಆದರೆ ರೈತ ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುತ್ತಿರುವ, ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ರೈತ ಸಂಘಟನೆಗಳ ಮುಖಂಡರು ಅಸಲಿಗೆ ರೈತರೇ ಅಲ್ಲ.
ಪ್ರತಿಭಟನಾ ರೈತರಿಂದ ಜಿಯೋ ಸಿಮ್, ರಿಲಾಯನ್ಸ್,ಅದಾನಿ ಉತ್ಪನ್ನ ಬಹಿಷ್ಕಾರ!
undefined
ದೆಗಲಿ ಗಡಿಯಲ್ಲಿ ನವೆಂಬರ್ 26 ರಿಂದ ನಡೆಯುತ್ತಿರುವ ರೈತ ಪ್ರತಿಭಟನೆಗೆ ರೈತ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ರೈತ ಸಂಘಟನೆಗಳ ಮುಖಂಡರ ಕುರಿತ ಮಾಹಿತಿ ಇಲ್ಲಿದೆ.
ದರ್ಶನ್ ಪಾಲ್:
ದರ್ಶನ್ ಪಾಲ್, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಪಂಜಾಬ್ ಸಂಘಟನೆ ರಾಜ್ಯಾಧ್ಯಕ್ಷರಾಗಿದ್ದಾರೆ.
CPI(ವಾವೋವಾದಿ) ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ
ಹಿನ್ನಲೆ ಹಾಗೂ ಉದ್ಯೋಗ: ಪಟಿಯಾಲದ ನಿವಾಸಿಯಾಗಿರುವ ದರ್ಶನ್ ಪಾಲ್, ಪಂಜಾಬ್ ಆರೋಗ್ಯ ವಿಭಾಗದ ನಿವೃತ್ತ ವೈದ್ಯರಾಗಿದ್ದಾರೆ. AIKSCCನ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿಕ್ಕು ತಪ್ಪಿತಾ ಅನ್ನದಾತನ ಹೋರಾಟ; ನಕ್ಸಲ್, ದೇಶ ವಿರೋಧಿಗಳ ಬಿಡುಗಡೆಗೆ ರೈತರ ಆಗ್ರಹ?.
ಹನನ್ ಮೊಲ್ಲ:
ಹನನ್ ಮೊಲ್ಲ ಕುಲ್‌ಹಿಂದ ಕಿಸಾನ್ ಸಂಘರ್ಷ ತಾಲ್‌ಮೇಲ್ ಕಮಿಟಿ(AIKS) ಸದಸ್ಯರಾಗಿದ್ದಾರೆ.
CPI(ಮಾರ್ಕ್ಸ್‌ವಾದಿ) ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ಪಶ್ಚಿಮ ಬಂಗಾಳದ ಹೋವ್ರಾ ನಿವಾಸಿಯಾಗಿದ್ದಾರೆ. ಉಲುಬೆರಿಯಾ ಪಿಸಿ ಕ್ಷೇತ್ರದ CPI ಸಂಸದರಾಗಿದ್ದರು. 1980 ರಿಂದ 2009ರ ವರೆಗೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 1980 ರಿಂದ 1991ರ ವರೆಗೆ DYFI ಸಂಘಟನೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು. ಸದ್ಯ ಹನನ್ ಮೊಲ್ಲ AIKS ಮುಖ್ಯ ಕಾರ್ಯದರ್ಶಿ ಹಾಗೂ ಆಲ್ ಇಂಡಿಯಾ ಎಗ್ರಿಕಲ್ಚರ್ ವರ್ಕರ್ಸ್ ಯೂನಿಯನ್ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಅಕ್ಷಯ್ ಕುಮಾರ್:
ಅಕ್ಷಯ್ ಕುಮಾರ್ ನವಿ ನಿರ್ಮಾಣ ವಿಕಾಸ್ ಸಂಘಟನೆ(NNVS)ಸದಸ್ಯರಾಗಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ಒಡಿಶಾದ ಜಗತ್‌ಸಿಂಗ್‌ಪುರದ ನಿವಾಸಿಯಾದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಷಯ್ ಕುಮಾರ್ ಅಣ್ಣಾ ಹಜಾರೆ ಹಾಗೂ ಮೇಧಾ ಪಾಟ್ಕರ್ ನಿಕಟವರ್ತಿಯಾಗಿದ್ದಾರೆ. ನರ್ಮದಾ ಬಚಾವ್ ಅಂದೋಲನ ಹಾಗೂ ಆಝಾದಿ ಬಚಾವ್ ಆಂದೋಲನದ ಪ್ರಮುಖ ಸದಸ್ಯರಾಗಿದ್ದರು. ಸದ್ಯ ಅಕ್ಷಯ್ ಕುಮಾರ್ NNVS ಹಾಗೂ ಫಾರ್ಮರ್ ಫ್ರಂಟ್ ಆಫ್ ನವ ನಿರ್ಮಾಣ ಸಮಿತಿ ವಕ್ತಾರರಾಗಿದ್ದಾರೆ. ಯುವ ಭಾರತಿ ಸಂಘಟನೆ ಸಂಚಾಲಕರಾಗಿ ದುಡಿದಿದ್ದಾರೆ. ಇನ್ನು ವಿನೋಬ ಭಾವೆಯ ಹಿಂಬಾಲಕರಾಗಿದ್ದಾರೆ.
ಕವಿತಾ ಕುರುಂಗತಿ:
ಕವಿತಾ ಕುರುಂಗತಿ AIKSCC ಸಂಘಟನೆ ಸದಸ್ಯರಾಗಿದ್ದಾರೆ
ಹಿನ್ನಲೆ ಹಾಗೂ ಉದ್ಯೋಗ: ಸಾಮಾಜಿಕ ಕಾರ್ಯಕರ್ತರಾಗಿರುವ ಕವಿತಾ ಎರಡೂ NGO ನಡೆಸುತ್ತಿದ್ದಾರೆ. ಮಹಿಳಾ ಕಿಸಾನ್ ಅಧಿಕಾರ್ ಮಂಚ್((MAKAAM)ಹಾಗೂ ಅಲೈಯನ್ಸ್ ಫಾರ್ ಸಸ್ಟೆನೇಬಲ್ ಹೊಲಿಸ್ಟಿಕ್ ಅಗ್ರಿಕಲ್ಚರ್(ASHA) ಸ್ಥಾಪಕರಾಗಿದ್ದಾರೆ .
ಯೋಗೆಂದ್ರ ಯಾದವ್:
ಸ್ವರಾಜ್ ಇಂಡಿಯಾ ಸಂಘಟನೆಯ ಕನ್ವೀನರ್ ಆಗಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ ಚಿಂತಕನಾಗಿ ಗುರಿತಿಸಿಕೊಂಡಿದ್ದಾರೆ. ವಿಶೇಷ ಅಂದರೆ ರೈತ ನಿಯೋಗದ ಭಾಗವಲ್ಲದಿದ್ದರೂ, ಸರ್ಕಾರದ ಪ್ರತಿನಿಧಿಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಇನ್ನು ರೈತ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಯೋಗಂದ್ರ ಯಾದವ್, ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರೀಯ ಸದಸ್ಯರಾಗಿದ್ದಾರೆ. UGC ಮತ್ತು ಶಿಕ್ಷಣ ಹಕ್ಕಿನ ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ .
ಜಗ್‌ಮೋಹನ್ ಸಿಂಗ್ ಪಟಿಯಾಲ:
ಜಗ್‌ಮೋಹನ್ ಸಿಂಗ್ BKU(ದಕೌಂದ) ಸಂಘಟನೆ ಸದಸ್ಯರಾಗಿದ್ದಾರೆ.
CPI(ವಾವೋವಾದಿ) ಪಕ್ಷದ ನಿಕವರ್ತಿಯಾಗಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ಕೀರನ್‌ಜೀತ್ ಸೆಖೋ:
ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯರಾಗಿದ್ದಾರೆ.
CPI(ಮಾರ್ಕಿಸ್ಟ್) ಪಕ್ಷದ ನಿಕಟವರ್ತಿಯಾಗಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!
ಪ್ರೇಮ್ ಸಿಂಗ್ ಬ್ನಾಂಗು:
ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯರಾಗಿದ್ದಾರೆ.
ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ದೆಹಲಿಯಲ್ಲಿ ನಡೆಯತ್ತಿರುವ ರೈತ ಪ್ರತಿಭಟನೆಯಲ್ಲಿ ಈ ಮುಖಂಡರು ತಮ್ಮ ತಮ್ಮ ಸಂಘಟನೆಗಳೊಂದಿಗೆ ಠಿಕಾಣಿ ಹೂಡಿದ್ದಾರೆ. ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.