ಸಿದ್ದರಾಮಯ್ಯ ಬಜೆಟ್ ಮಂಡನೆಯಾಗುತ್ತಿದ್ದಂತೆ ಕಾವು ಪಡೆದ ರೈತರ ಗ್ರಾಮೀಣ ಭಾರತ ಬಂದ್!

By Suvarna News  |  First Published Feb 16, 2024, 11:05 AM IST

ಕರ್ನಾಟಕದಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದರೆ, ಮತ್ತೊಂದೆಡೆ ರೈತರ ಪ್ರತಿಭಟನೆ ಬಿಸಿ ಜೋರಾಗುತ್ತಿದೆ. ರೈತರು ಕರೆ ನೀಡಿದಂತೆ ಗ್ರಾಮೀಣ ಭಾರತ ಬಂದ್ ಬಿಸಿ ಹೆಚ್ಚಾಗುತ್ತಿದೆ. ಕರ್ನಾಟಕದ ರೈತರೂ ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲ ನೀಡಿದ್ದು,  ಹೆದ್ದಾರಿ, ರಸ್ತೆ ಬಂದ್ ನಡೆಸಲು ಮುಂದಾಗಿದ್ದಾರೆ.
 


ನವದೆಹಲಿ(ಫೆ.16) ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ರೈತರು ನಡೆಸುತ್ತಿರುವ ರೈತ ಪ್ರತಿಬಟನೆ ಜೋರಾಗಿದೆ. ರೈತರು ಕರೆ ನೀಡಿದಂತೆ ಗ್ರಾಮೀಣ ಭಾರತ್ ಬಂದ್‌ ನಡೆಸುತ್ತಿದ್ದಾರೆ. ಪಂಜಾಬ್, ಹರ್ಯಾಣ ಭಾಗದಲ್ಲಿ ಗ್ರಾಮೀಣ ಭಾರತ್ ಬಂದ್ ತೀವ್ರ ಸ್ಪರೂಪ ಪಡೆದುಕೊಂಡಿದ್ದರೆ, ದೇಶದ ಇತರ ಭಾಗದಲ್ಲಿ ನಿರೀಕ್ಷಿತ. ಯಶಸ್ಸು ಸಿಕ್ಕಿಲ್ಲ. ಆದರೆ ಕರ್ನಾಟಕಕ ಕೆಲ ರೈತರು ರೈತರ ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲ ನೀಡಿದ್ದಾರೆ.

ಇಂದು 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂದ್‌ ಆಚರಿಲಾಗುತ್ತದೆ. ಈ ವೇಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಪಂಜಾಬ್‌ನಲ್ಲಿ ಪ್ರತಿಭಟನೆಯ ಸಮಯದಲ್ಲಿ ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ಪಂಜಾಬ್, ಹರ್ಯಾಣ ಭಾಗದಲ್ಲಿ ಈಗಾಗಲೇ ರಸ್ತೆ ತಡೆದೆ ರೈತರು ತಯಾರಿ ನಡೆಸಿದ್ದಾರೆ. ಇನ್ನು ಕೆಲ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿದೆ. 

Tap to resize

Latest Videos

 

ಫೆ.16ಕ್ಕೆ ಗ್ರಾಮೀಣ ಭಾರತ್ ಬಂದ್‌‌ಗೆ ಕರೆ, ರೈತ ಪ್ರತಿಭಟನೆಯಿಂದ ಏನಿರುತ್ತೆ? ಏನಿರಲ್ಲ?

ಪ್ರಮುಖವಾಗಿ ರೈತರ ಕೃಷಿ ಚಟುವಟಿಕೆಗಳು ಬಂದ್ ಆಗಲಿದೆ. ರೈತ ಮಾರುಕಟ್ಟೆ, ಅಂಗಡಿ, ಬೇಳೆ ಕಾಳು ಸಾಗಾಣೆ ಸೇರಿದಂತೆ ಹಲವು ಕೃಷಿ ಸಂಬಂಧಿತ ಚಟುವಟಿಕೆಗಳು ಬಂದ್ ಆಗಲಿವೆ. ಇನ್ನು ಮಧ್ಯಾಹ್ನ 12 ಗಂಟೆಯಿಂದ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಮುಂದಾಗಿದ್ದಾರೆ. 

ಈ ಬಗ್ಗೆ ಮಾತನಾಡಿದ ಎಸ್‌ಕೆಎಮ್‌ ಮುಖಂಡ ಡಾ. ದರ್ಶನ್‌ ಪಾಲ್‌ ‘ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಯೋಜಿಸಲಾಗಿತ್ತು. ಬಂದ್‌ ವೇಳೆ ಗ್ರಾಮಗಳ ಜನರು ತಮ್ಮೆಲ್ಲ ಕೃಷಿ ಚಟುವಟಿಕೆಗಳು ಹಾಗೂ ನರೇಗಾ ಗ್ರಾಮೀಣ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಅಂಬುಲೆನ್ಸ್‌, ಸಾವು, ಮದುವೆ, ಮೆಡಿಕಲ್‌ ಶಾಪ್‌ಗಳು, ಸುದ್ದಿ ಪತ್ರಿಕೆ ವಿತರಣೆ, ಪರೀಕ್ಷೆ, ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ ಸೇರಿದಂತೆ ಇತರ ತುರ್ತು ಅವಶ್ಯಕಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ’ ಎಂದಿದ್ದಾರೆ.

ಚಿಕ್ಕಬಳ್ಳಾಪುರ : ಬಂದ್‌ಗೆ ರೈತ, ಕನ್ನಡಪರ ಸಂಘಟನೆಗಳ ಬೆಂಬಲ

ಅಲ್ಲದೇ ‘ಬಂದ್‌ ದಿನದಂದು ತರಕಾರಿಗಳು ಮತ್ತು ಇತರ ಬೆಳೆಗಳ ಮಾರಾಟ, ಗ್ರಾಮೀಣ ಅಂಗಡಿಗಳು, ಧಾನ್ಯ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು ಗ್ರಾಮೀಣ ಕೈಗಾರಿಕೆಗಳನ್ನು ಬಂದ್‌ ಮಾಡುವಂತೆ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ. 

click me!