ರೈತ ಪ್ರತಿಭಟನೆಯ ಭದ್ರತೆ ಜವಾಬ್ದಾರಿ ವಹಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗೆ ಕೊರೋನಾ!

By Suvarna NewsFirst Published Dec 11, 2020, 7:12 PM IST
Highlights

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಪ್ರತಿಭಟನೆ ಪಟ್ಟು ಬಿಗಿಗೊಳ್ಳುತ್ತಿದೆ. ಇದರ ನಡುವೆ ಪ್ರತಿಭಟನಾ ನಿರತ ರೈತರು ಹಾಗೂ ದೆಹಲಿ ಪೊಲೀಸರಿಗೆ ಆತಂಕ ಎದುರಾಗಿದೆ.

ದೆಹಲಿ(ಡಿ.11):  ಕೇಂದ್ರ ಕೃಷಿ ಕಾಯ್ದೆಯನ್ನು ಹಿಂಪಡೆಯಲು ನಡೆಸುತ್ತಿರುವ ರೈತರ ಹೋರಾಟ ಮತ್ತೊಂದು ಹಂತ ತಲುಪುತ್ತಿದೆ. ಭಾರತ್ ಬಂದ್ ಬಳಿಕ ಹಲವು ಸೆಲೆಬ್ರೆಟಿಗಳು, ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಗೆ ಸಾಥ್ ನೀಡಿದೆ. ಇದೀಗ ಮತ್ತೊಂದು ಹಂತದ ದೇಶವ್ಯಾಪಿ ಪ್ರತಿಭಟನೆಗೆ ರೈತ ಸಂಘಟನೆಗಳು ಸಜ್ಜಾಗಿದೆ. ಇದರ ನಡುವೆ ಪ್ರತಿಭಟನಾ ನಿರತ ರೈತರು ಹಾಗೂ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಕೊರೋನಾ ಆತಂಕ ಶುರುವಾಗಿದೆ.

ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!.

ದೆಹಲಿಯ ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನವೆಂಬರ್ 26 ರಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಪ್ರತಿಭಟನೆ ವೇಳೆ ಭದ್ರತೆ ಶಾಂತಿ ಸುವ್ಯಸ್ಥೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದು ಪ್ರತಿಭಟನಾ ನಿರತ ರೈತರು, ರೈತ ಸಂಘಟನೆಗಳ ನಾಯಕರಿಗೆ ಆತಂಕ ಶುರುವಾಗಿದೆ. ಇತ್ತ ಇತರ ಪೊಲೀಸ್ ಸಹೋದ್ಯೋಗಿಗಳಿಗೂ ಇದೀಗ ಕೊರೋನಾ ಆತಂಕ ಎದುರಾಗಿದೆ. ಪ್ರತಿಭಟನೆ ಸ್ವರೂಪ ವಿಸ್ತರಿಸಲು ಯೋಜನೆ ರೂಪಿಸುತ್ತಿರುವಾಗಲೇ ಇದೀಗ ಕೊರೋನಾ ಅಡ್ಡಿಯಾಗುತ್ತಿದೆ.

ಶುಕ್ರವಾರ(ಡಿ.11) ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತ ಸಂಘಟನಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 
 

click me!