ಒಂದೇ ಕುಟುಂಬದ 11 ಮಂದಿ ಇನ್ನೋವಾ ಕಾರಿನಲ್ಲಿ ಮದುವೆಗೆ ತೆರಳುತ್ತಿದ್ದ ವೇಳೆ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಕ್ಷಣಾರ್ಧದಲ್ಲಿ ನದಿಯಂತಾದ ರಸ್ತೆಯಲ್ಲಿ ಕಾರು ಕೊಚ್ಚಿ ಹೋಗಿದೆ.
ಹೋಶಿಯಾರ್‌ಪುರ್(ಆ.11) ಭಾರತದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರ್ವತ ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿದೆ. ಕೇರಳದ ವಯನಾಡು, ಕರ್ನಾಟಕದ ಅಂಕೋಲ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದುರಂತಗಳೇ ಸಂಭವಿಸಿದೆ. ಇದೀಗ ಭಾರಿ ಮಳೆ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ 11 ಮಂದಿ ಕೊಚ್ಚಿ ಹೋದ ಘಟನೆ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಗಡಿ ಭಾಗದಲ್ಲಿ ನಡೆದಿದೆ. ಘಟನೆ ವಿಡಿಯೋ ಲಭ್ಯವಾಗಿದೆ.
ಹೋಶಿಯಾರ್‌ಪುರ್ ಜಿಲ್ಲೆಯ ಜೆಜೋನ್ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಕುಟುಂಬ ಪಂಜಾಬ್ ಗಡಿಯಿಂದ ಹಿಮಾಚಲ ಪ್ರದೇಶಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದು ಹಲವರು ದಾರುಣ ಅಂತ್ಯಕಂಡಿದ್ದಾರೆ. ರಾವೈನ್ ಬಳಿ ಇರುವ ನದಿಯಲ್ಲಿ ಪ್ರವಾಹ ನೀರು ಉಕ್ಕಿ ಹರಿದಿದೆ. ಅಕ್ಕ ಪಕ್ಕದ ರಸ್ತೆ ಮೇಲೆ ಪ್ರವಾಹ ನೀರು ಹರಿದಿದೆ. ಸೇತುವೆ ಕೂಡ ಮುಳುಗವ ಹಂತಕ್ಕೆ ಬಂದಿದೆ.
undefined
ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಬಾರದಿತ್ತು ಆಗಿದೆ; ಇದಕ್ಕೆ ಕೇಂದ್ರ ದುಡ್ಡು ಕೊಡಬೇಕು: ಮಧು ಬಂಗಾರಪ್ಪ
ಇದೇ ವೇಳೆ ಈ ದಾರಿಯಿಂದ ಸಾಗಿ ಬಂದ ಇನ್ನೋವಾ ಕಾರು ರಸ್ತೆಯಲ್ಲಿರುವ ನೀರು ಲೆಕ್ಕಿಸದೇ ಸಾಗಿದೆ. ಸ್ಥಳೀಯರು ಎಚ್ಚರಿಕೆ ನೀಡುತ್ತಿದ್ದರೂ ಕಾರು ನೇರವಾಗಿ ಸಾಗಿದೆ. ಕೆಲ ದೂರ ಸಾಗುತ್ತಿದ್ದಂತೆ ಪ್ರವಾಹ ನೀರು ಹೆಚ್ಚಾಗಿದೆ. ಕಾರು ಕೊಚ್ಚಿ ಹೋಗಿದೆ. ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಮಗುವನ್ನು ರಕ್ಷಿಸಿದ್ದಾರೆ. ಇನ್ನುಳಿದವರ ರಕ್ಷಣೆ ವೇಳೆ ಕಾರು ರಭಸದಿಂದ ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದ 9 ಮಂದಿಯ ಮೃತದೇಹವನ್ನು ಹೊರಕ್ಕೆ ತೆಗೆಯಾಗಿದೆ. ಇನ್ನುಳಿದವರು ನಾಪತ್ತೆಯಾಗಿದ್ದಾರೆ.
हिमाचल के ऊना में पानी के तेज बहाव में यात्रियों से भरी गाड़ी बह गई। 9 लोगों की मौत हो गई। वहीं एक व्य pic.twitter.com/A9SXeUbzya
— Himani Sharma (@hennysharma22)
ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರಿದಿದೆ. ಇದೇ ವೇಳೆ ಹಿಮಾಚಲ ಪ್ರದೇಶ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಸ್ಥಳೀಯ ಜಿಲ್ಲಾಡಳಿತಗೆ ಕುಟುಂಬಕ್ಕೆ ನೆರವು ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾಯದಲ್ಲಿರುವ ಸ್ಥಳಗಲ್ಲಿ ರೆಡ್ ಅಲರ್ಟ್ ಘೋಷಿಸುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಪಾಯದ ರಸ್ತೆಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ.
ಮುಂದಿನ 4 ದಿನ ಉತ್ತರಕ್ಕೆ ಮೇಘಸ್ಫೋಟ, ದಕ್ಷಿಣ ಭಾರತಕ್ಕೆ ಪ್ರವಾಹ ಎಚ್ಚರಿಕೆ ನೀಡಿದ IMD!
ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಇದೇ ವೇಳೆ ಪರ್ವತ ಪ್ರದೇಶದಲ್ಲಿನ ಜನ ವಸತಿಯನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತದಿಂದ ಹಲವು ಅನಾಹುತಗಳು ಸಂಭವಸಿದೆ. ಕೇರಳದ ವಯನಾಡು ದುರಂತ ವೇಳೆ ಹಿಮಾಚಲ ಪ್ರದೇಶದಲ್ಲೂ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿತ್ತು.