ನಾನು ಹಿಮಾಲಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಿದ್ದೇನೆ, ಗೊಗೋಯ್ ಹೆಸರಿನಲ್ಲಿ ವೈರಲ್ ಆಗ್ತಿದೆ ಈ ಸಂದೇಶ

By Suvarna NewsFirst Published Mar 31, 2022, 4:27 PM IST
Highlights

* ಮಾಜಿ ಸಿಜೆಐ ರಂಜನ್ ಗೊಗೋಯ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ

* ಟ್ವಿಟರ್ ಖಾತೆಯಿಂದ ವಿವಾದಾತ್ಮಕ ಟ್ವೀಟ್

* ಫ್ಯಾಕ್ಟ್‌ ಚೆಕ್‌ನಲ್ಲಿ ಬಯಲಾಯ್ತು ಸುಳ್ಳಿನ ಸರಮಾಲೆ

ನವದೆಹಲಿ(ಮಾ.31): ಮಾಜಿ ಸಿಜೆಐ ರಂಜನ್ ಗೊಗೋಯ್ ಹೆಸರಿನಲ್ಲಿ ಟ್ವೀಟ್‌ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ  ನಾನು ಹಿಮಾಲಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಿದ್ದೇನೆ, ನೀವು ನಿಲ್ಲಿಸಿದಿರಾ? ಎಂದು ಪ್ರಶ್ನಿಸಲಾಗಿದೆ. ಜೊತೆಗೊಂದು ಹಿಮಾಲನ್ ಕಂಪನಿ ಹಲಾಲ್ ಬಗೆಗೆ ಹೊಂದಿರುವ ನೀತಿಯ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಲಾಗಿದೆ. ಏಷ್ಯಾನೆಟ್‌ನ್ಯೂಸ್ ಈ ಟ್ವಿಟರ್ ಹ್ಯಾಂಡಲ್ ಬಗ್ಗೆ ತನಿಖೆ ಮಾಡಿದಾಗ, ಅದೊಂದು ನಕಲಿ ಖಾತೆ ಎಂದು ತಿಳಿದುಬಂದಿದೆ. ಭಾರತದ ಮಾಜಿ ನ್ಯಾಯಮೂರ್ತಿ (CJI) ರಂಜನ್ ಗೊಗೋಯ್ ಟ್ವಿಟರ್‌ನಲ್ಲಿ ಖಾತೆಯನ್ನು ಹೊಂದಿಲ್ಲ. ಅವರ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಖಾತೆಗಳು ನಕಲಿ ಎಂಬುವುದು ತಿಳಿದು ಬಂದಿದೆ. 

1. ಮಾಜಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಹೆಸರಿನ ಹ್ಯಾಂಡಲ್ ಅನ್ನು ನಾವು ಮೊದಲು ಸ್ವಯಂ ಪರಿಶೀಲಿಸಿದ್ದೇವೆ.

Latest Videos

ರಂಜನ್ ಗೊಗೊಯ್ ಅವರು ಎಂದಿಗೂ ಟ್ವಿಟರ್‌ಗಗೆ ಎಂಟ್ರಿ ಕೊಟ್ಟಿಲ್ಲ, ಅಂದರೆ ಅವರು ಖಾತೆಯನ್ನು ಹೊಂದಿಲ್ಲ ಎಂಬುವುದು ತಿಳಿದು ಬಂದಿದೆ. ಇನ್ನು ವೈರಲ್ ಆದ ಟ್ವೀಟ್‌ ಮಾಡಿದ ಹ್ಯಾಂಡಲ್ ಅಧಿಕೃತವಲ್ಲ ಅಥವಾ ನೀಲಿ ಟಿಕ್ ಹೊಂದಿಲ್ಲ. ರಂಜನ್ ಗೊಗೋಯ್ ತಮ್ಮ ಟ್ವಿಟರ್ ಹ್ಯಾಂಡಲ್ ಬಳಸಿದ್ದರೆ, ಅವರ ಖಾತೆಗೆ ನೀಲಿ ಬ್ಯಾಡ್ಜ್ ಇರುತ್ತಿತ್ತು. ಎರಡನೆಯದಾಗಿ ನಾವು ಈ ಖಾತೆಯ ಬಯೋವನ್ನು ಪರಿಶೀಲಿಸಿದ್ದು, ಇಲ್ಲೂ ಎಡವಟ್ಟೊಂದು ಕಂಡು ಬಂದಿದೆ. ಸಂಸತ್ತಿನ ಮಾಜಿ ನ್ಯಾಯಾಧೀಶರ ಬಯೋದಲ್ಲಿ ಮೂರೂ ಹೆಸರಲ್ಲೂ ಅಕ್ಷರ ದೋಷ ಕಂಡು ಬಂದಿದೆದೆ. ಅಲ್ಲದೆ, ಇದು PARODY ಫ್ಯಾನ್ ಪೇಜ್ ಆಗಿದೆ. ಹೈಪ್ರೊಫೈಲ್ ವ್ಯಕ್ತಿಯ ಹೆಸರನ್ನಷ್ಟೇ ಬಳಸಿಕೊಂಡು ತಪ್ಪು ಮಾಹಿತಿ ಹಂಚಲಾಗಿದೆ.

ಹಂತ 2: ಭಾರತ ಸರ್ಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ರಂಜನ್ ಗೊಗೋಯ್ ಕುರಿತು ಹಲವು ಬಾರಿ ಟ್ವೀಟ್ ಮಾಡಲಾಗಿದೆ ಆದರೆ ಅವರ ಹ್ಯಾಂಡಲ್ ಅನ್ನು ಎಂದಿಗೂ ಟ್ಯಾಗ್ ಮಾಡಲಾಗಿಲ್ಲ. ರಂಜನ್ ಗೊಗೊಯ್ ಟ್ವಿಟರ್ ಹ್ಯಾಂಡಲ್ ಹೊಂದಿದ್ದರೆ ಅವರನ್ನೂ ಟ್ಯಾಗ್ ಮಾಡಲಾಗುತ್ತಿತ್ತು. 03 ಅಕ್ಟೋಬರ್ 2018 ರಂದು, ನರೇಂದ್ರ ಮೋದಿ ಅವರು ರಂಜನ್ ಗೊಗೊಯ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗುತ್ತಿರುವುದನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು ಅದರಲ್ಲೂ ಯಾವುದೇ ಖಾತೆಯನ್ನು ಟ್ಯಾಗ್ ಮಾಡಿಲ್ಲ.

I congratulate Justice Ranjan Gogoi Ji on taking oath as the Chief Justice of India. His experience, wisdom, insight and legal knowledge will benefit the country greatly. My best wishes for a fruitful tenure. pic.twitter.com/UGT3SIjEms

— Narendra Modi (@narendramodi)

ಹಂತ 3:  Ranjan Gogoi on twitter ಇದೇ ಕೀವರ್ಡ್‌ ಬಳಸಿ ಮೊದಲಿಗೆ ನಾವು ಈ ಕೀ ಗೂಗಲ್ ಸರ್ಚ್ ಮಾಡಿದ್ದೇವೆ. Google ಹುಡುಕಾಟ ಪಟ್ಟಿಯ ಮೊದಲ ಸೂಚ್ಯಂಕ ಪುಟದಲ್ಲಿ, ಬಾರ್ & ಬೆಂಚ್‌ನ ಟ್ವೀಟ್ ಕಾಣಿಸಿದೆ. ಇದನ್ನು 17 ಅಕ್ಟೋಬರ್ 2018 ರಂದು ಪೋಸ್ಟ್ ಮಾಡಲಾಗಿದೆ. ಇದು ಅಧಿಕೃತ ನೀಲಿ ಟಿಕ್ ಪರಿಶೀಲಿಸಿದ ಖಾತೆಯಾಗಿದೆ. ನಕಲಿ ಟ್ವಿಟರ್ ಖಾತೆಯನ್ನು ರಚಿಸಲು ಸಿಜೆಐ ರಂಜನ್ ಗೊಗೊಯ್ ಹೆಸರನ್ನು ಬಳಸಲಾಗಿದೆ. ಸದ್ಯ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

 

ಈ ಮೂಲಕ ಈ ಹಿಂದೆಯೂ ರಂಜನ್ ಗೊಗೊಯ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಯಾಗಿರುವುದು ಸ್ಪಷ್ಟವಾಗಿದೆ. 

ಹಂತ 4: ಈ ಕೀವರ್ಡ್‌ನಿಂದ Google ನ ಇಂಡೆಕ್ಸ್‌ನಲ್ಲಿ ಅನೇಕ ಸುದ್ದಿಗಳೂ ಸಿಕ್ಕಿವೆ. ಹೀಗೊಂದು ವಿವಾದ ಸಂಭವಿಸಿದ್ದು ಇದೇ ಮೊದಲಲ್ಲ. ರಂಜನ್ ಗೊಗೊಯ್ ಹೆಸರಿನಲ್ಲಿ, ಹಲವು ವಿಷಯಗಳ ಬಗ್ಗೆ ನಕಲಿ ಟ್ವೀಟ್‌ಗಳು ಈ ಹಿಂದೆ ವೈರಲ್ ಆಗಿದ್ದವು. 15 ಅಕ್ಟೋಬರ್ 2018 ರಂದು ಪೋಸ್ಟ್ ಮಾಡಿದ News18 ಗೆ ಲಿಂಕ್ ಕೂಡ ಕಂಡುಬಂದಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್ (ಭದ್ರತೆ) ಕರ್ನಲ್ ಕೆಬಿ ಮರ್ವಾ ಅವರು ತಮ್ಮ ಮಟ್ಟದಲ್ಲಿ ಖಾತೆಯನ್ನು ತನಿಖೆ ಮಾಡಿದ್ದಾರೆ ಎಂದು ಲೇಖನದಲ್ಲಿ ಬರೆಯಲಾಗಿದೆ. ಮರ್ವಾ ಎಂಬವರು ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ದೂರು ದಾಖಲಿಸಿದ್ದ. ಅಲ್ಲದೆ, ತಕ್ಷಣ ಕ್ರಮ ಕೈಗೊಂಡ ಪೊಲೀಸರು ಟ್ವಿಟರ್ ಇಂಡಿಯಾಗೆ ಇಮೇಲ್ ಬರೆದು ನಕಲಿ ಖಾತೆಯನ್ನು ಅಮಾನತುಗೊಳಿಸಿದ್ದಾರೆ.

ಹೀಗಾಗಿ ಭಾರತದ ಮಾಜಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಹೆಸರಿನಲ್ಲಿರುವ ಟ್ವಿಟರ್ ಹ್ಯಾಂಡಲ್ ಮತ್ತು ವೈರಲ್ ಆಗುತ್ತಿರುವ ಟ್ವೀಟ್ ಎರಡೂ ನಕಲಿ ಎಂಬುವುದು ಸ್ಪಷ್ಟ. ಅಲ್ಲದೇ ರಂಜನ್ ಗೊಗೊಯ್ ಎಂದಿಗೂ ಟ್ವಿಟರ್‌ನಲ್ಲಿ ಖಾತೆ ಹೊಂದಿರಲಿಲ್ಲ, 

click me!