
ಸದ್ಯ ಈರುಳ್ಳಿ ಬೆಲೆ ನೂರರ ಗಡಿ ದಾಟಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಟ್ರಕ್‌ಗಟ್ಟಲೆ ಈರುಳ್ಳಿಯನ್ನು ತಡೆಹಿಡಿದಿದೆ. ಹಣದುಬ್ಬರ ಉಂಟಾಗುವಂತೆ ಮಾಡಲು ಮಮತಾ ಸರ್ಕಾರ ಹೀಗೆ ಮಾಡಿದೆ.
ನೂರಾರು ಟನ್ ಈರುಳ್ಳಿ ತುಂಬಿರುವ ಹಲವು ಟ್ರಕ್‌ಗಳ ವಿಡಿಯೋವನ್ನು ಪೋಸ್ಟ್ ಮಾಡಿ, ‘ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಪಿತೂರಿಯಿಂದಾಗಿ ಈರುಳ್ಳಿ ದಾಸ್ತಾನು ಕೊಳೆಯುತ್ತಿದೆ. ಟ್ರಕ್ ಚಾಲಕರ ಗೋಳನ್ನು ಯಾರೂ ಕೇಳುತ್ತಿಲ್ಲ. ಈರುಳ್ಳಿ ಪೂರೈಕೆಯನ್ನು ನಿಲ್ಲಿಸಿ, ಹಣದುಬ್ಬರ ಹೆಚ್ಚುವಂತೆ ಮಾಡಿ ಮೋದಿ ಸರ್ಕಾರವನ್ನು ಹೇಗಾದರೂ ಜನವಿರೋಧಿ ಎಂದು ಬಿಂಬಿಸಲು ಈ ರೀತಿಯ ಕುತಂತ್ರ ಮಾಡಲಾಗಿದೆ’ ಎಂಬ ಸಂದೇಶವೊಂದು ವೈರಲ್ ಆಗುತ್ತಿದೆ.
Fact Check| ಈ ಹಕ್ಕಿಯ ವಿಡಿಯೋ ಸೆರೆ ಹಿಡಿಯಲು 62 ದಿನ ಬೇಕಾಯ್ತಂತೆ!
ವಿಡಿಯೋದಲ್ಲಿ ‘ಎಲ್ಲಾ ಟ್ರಕ್ ಡೈವರ್ ಬಳಿ ಬೇಡಿಕೊಳ್ಳುತ್ತೇನೆ. ದಯವಿಟ್ಟು ಲೋಡ್ ಮಾಡಬೇಡಿ. ಸೆ.25ರಿಂದ ನಾವು ಇಲ್ಲಿಯೇ ಇದ್ದೇವೆ. ಟ್ರಕ್ ತುಂಬಿದ ಈರುಳ್ಳಿ ಕೊಳೆತು ನೀರು ಸೋರುತ್ತಿದೆ. ಟ್ರಕ್‌ಗಳು ಖಾಲಿಯಾಗದಿದ್ದರೆ ಮಾಲಿಕರು ಎಲ್ಲಿ ಕಂತು ನೀಡುತ್ತಾರೆ? ಕನಿಷ್ಠ 200 ಟ್ರಕ್‌ಗಳನ್ನು ಇಲ್ಲಿ ನಿಲ್ಲಿಸಲಾಗಿದೆ’ ಎಂದ ಧ್ವನಿ ಕೇಳಿಸುತ್ತದೆ.
Fact check: ಮೋದಿ ಮೇಕಪ್‌ಗೆ ತಿಂಗಳಿಗೆ .15 ಲಕ್ಷ ಬೇಕಂತೆ, ಹೌದಾ!
ಆದರೆ ಈ ವಿಡಿಯೋದ ಸತ್ಯಾಸತ್ಯ ಪರಿಶೀಲಿಸಿದಾಗ ಎರಡು ತಿಂಗಳ ಹಿಂದೆ ಬಾಂಗ್ಲಾಗೆ ರಫ್ತು ಮಾಡುವ ಈರುಳ್ಳಿ ಟ್ರಕ್‌ಗಳನ್ನು ಪಶ್ಚಿಮ ಬಂಗಾಳದ ಘೋಜದಂಗ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಅದೇ ವಿಡಿಯೋವನ್ನು ಈಗ ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈರುಳ್ಳಿ ಕೊರತೆ ಉಂಟಾಗಿದ್ದರಿಂದ ಸೆ.25ರ ಬಳಿಕ ರಫ್ತನ್ನು ನಿಲ್ಲಿಸಲಾಯಿತು. ಹಾಗಾಗಿ ಟ್ರಕ್‌ಗಳು ಗಡಿಭಾಗದಲ್ಲಿ ನಿಂತಿದ್ದವು. ಕೆಲ ದಿನ ಬಳಿಕ ಅವುಗಳನ್ನು ಬಾಂಗ್ಲಾಗೆ ಸಾಗಿಸಲಾಗಿತ್ತು ಎಂದು ತಿಳಿದುಬಂದಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ