5 ರೂ. ‘ಮಾ’ ಕ್ಯಾಂಟೀನ್‌ ಊಟ, ಮುಖ್ಯಮಂತ್ರಿಯಿಂದ ಚಾಲನೆ!

Published : Feb 16, 2021, 04:22 PM IST
5 ರೂ. ‘ಮಾ’ ಕ್ಯಾಂಟೀನ್‌ ಊಟ, ಮುಖ್ಯಮಂತ್ರಿಯಿಂದ ಚಾಲನೆ!

ಸಾರಾಂಶ

ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ| ಬಡವರ ಕ್ಯಾಂಟೀನ್‌ಗೆ ಮಮತಾ ಬ್ಯಾನರ್ಜಿ ಚಾಲನೆ| ಪ.ಬಂಗಾಳದಲ್ಲಿ 5 ರು.ಗೆ ‘ಮಾ’ ಕ್ಯಾಂಟೀನ್‌ ಊಟ

ಕೋಲ್ಕತಾ(ಫೆ.16): ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ ನೀಡುವ ‘ಮಾ’ ಕ್ಯಾಂಟೀನ್‌ ಯೋಜನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಚಾಲನೆ ನೀಡಿದ್ದಾರೆ.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಮಾ ಕ್ಯಾಂಟೀನ್‌ನಲ್ಲಿ 5 ರು.ಗೆ ಒಂದು ಪ್ಲೇಟ್‌ ಅನ್ನ, ದಾಲ್‌, ತರಕಾರಿ ಅಥವಾ ಎಗ್‌ಕರಿ ದೊರೆಯಲಿದೆ. ಪ್ರತಿ ಊಟಕ್ಕೆ ಸರ್ಕಾರ 15 ರು.ಸಬ್ಸಿಡಿ ನೀಡಲಿದ್ದು, ಗ್ರಾಹಕರಿಂದ ಕೇವಲ 5 ರು. ಶುಲ್ಕ ಪಡೆಯಲಾಗುವುದು.

ಸ್ವಯಂಸೇವಾ ಸಂಸ್ಥೆಗಳು ಪ್ರತಿನಿತ್ಯ ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಕ್ಯಾಂಟೀನ್‌ ಅನ್ನು ನಡೆಸಲಿವೆ. ಹಂತ ಹಂತವಾಗಿ ರಾಜ್ಯದೆಲ್ಲೆಡೆ ‘ಮಾ’ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್