ಅಗ್ನಿಪಥಕ್ಕೆ ಅಗ್ನಿಪರೀಕ್ಷೆ, ಯೋಜನೆ ವಿರುದ್ಧ ಯುವ ಜನತೆಯ ಆಕ್ರೋಶವೇಕೆ?

Published : Jun 16, 2022, 05:17 PM IST
ಅಗ್ನಿಪಥಕ್ಕೆ ಅಗ್ನಿಪರೀಕ್ಷೆ, ಯೋಜನೆ ವಿರುದ್ಧ ಯುವ ಜನತೆಯ ಆಕ್ರೋಶವೇಕೆ?

ಸಾರಾಂಶ

ದೇಶದ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿಪಥ ಯೋಜನೆಯನ್ನು ಸರ್ಕಾರ ಎರಡು ದಿನಗಳ ಹಿಂದೆ ಪ್ರಕಟಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿ ದೇಶವ್ಯಾಪಿ ಪ್ರತಿಭಟನೆಗಳು ಆರಂಭವಾಗಿದೆ. ಸೇನೆಗೆ ನೇಮಕಾತಿ ಮಾಡುವ ವಿಚಾರದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ.   

ನವದೆಹಲಿ (ಜೂನ್ 16): ಅಗ್ನಿಪಥ ಯೋಜನೆಗೆ (Agnipath scheme) ಸಂಬಂಧಿಸಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬಿಹಾರ (Bihar) ರಾಜ್ಯದ ಯುವಕರು ರೋಷಾವೇಷದಿಂದ ಬೀದಿಗೆ ಇಳಿದಿದ್ದಾರೆ. ಸೇನೆಯಲ್ಲಿ ಹೊಸ ನೇಮಕಾತಿ (New Recruitment) ಯೋಜನೆಗೆ ಸಂಬಂಧಿಸಿದಂತೆ ಬಿಹಾರದಲ್ಲಿ ಬೀದಿಗಿಳಿದ ಪ್ರತಿಭಟನಾನಿರತ ವಿದ್ಯಾರ್ಥಿಗಳ ಹಲವು ಕಳವಳಗಳನ್ನು ತೋಡಿಕೊಂಡಿದ್ದಾರೆ. ಸೇನೆಗೆ (Army) ಸೇರುವ ನಿಟ್ಟಿನಲ್ಲಿ ಇಷ್ಟೆಲ್ಲಾ ಶ್ರಮ ಪಟ್ಟಿದ್ದೇವೆ. ಸೇನೆಗೆ ಸೇರಲೇಬೇಕು ಎನ್ನುವ ಹಾದಿಯಲ್ಲಿ ಬೆವರು ಹರಿಸಿದ್ದೇವೆ. ಇಷ್ಟೆಲ್ಲದರ ನಡುವೆ ನಮ್ಮ ನೇಮಕಾತಿ ಬರೀ ನಾಲ್ಕು ವರ್ಷಕ್ಕೆ ಅಂದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ವಿವಿಧ ಸಚಿವಾಲಯಗಳಲ್ಲಿ, ಅರೆಸೇನಾ ಪಡೆಗಳಲ್ಲಿ ಅಗ್ನಿವೀರರಿಗೆ (Agniveers) ಆದ್ಯತೆ ಸಿಗಲಿದೆ ಎಂದು ಕೇಂದ್ರ ಸರಕಾರ, ರಾಜ್ಯ ಸರಕಾರ ಹೇಳುತ್ತಿರಬಹುದು, ಆದರೆ ಯುವಜನತೆ ಇದರಿಂದ ತೃಪ್ತರಾಗಿಲ್ಲ. ಅಗ್ನಿವೀರ್ ಆಗಿ ನಾಲ್ಕು ವರ್ಷ ಸೇವೆ ನೀಡಿದ ಬಳಿಕ, ಅವರು ಮುಂದೇನು ಮಾಡುವುದು ಎನ್ನುವುದೇ ದೊಡ್ಡ ಚಿಂತೆಯಾಗಿ ಕಾಡಿದೆ.  ಇದುವರೆಗೂ ಸೇನೆಯಲ್ಲಿ ದೈಹಿಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದರೂ ಇನ್ನೂ ಸೇನಾ ಉದ್ಯೋಗ ಸಿಗದಿರುವ ಬಗ್ಗೆಯೂ ಈ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ಸೇರಿದಂತೆ ಹಲವು ರಾಜ್ಯಗಳ ವಿದ್ಯಾರ್ಥಿಗಳು ಅಗ್ನಿಪಥ ಯೋಜನೆಯ ನಿಯಮಗಳ ಬಗ್ಗೆ ಕೋಪಗೊಂಡಿದ್ದಾರೆ. ಅಗ್ನಿಪಥ್ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆ ಬಳಿಕ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ. ಗ್ರ್ಯಾಚುಟಿ ಹಾಗೂ ಪಿಂಚಣಿಯಂಥ ಪ್ರಯೋಜನಗಳು ಕೂಡ ಲಭ್ಯವಿಲ್ಲ. ಅಗ್ನಿಪಥ್ (Agneepath) ಯೋಜನೆಯಲ್ಲಿ ನಾಲ್ಕು ವರ್ಷಗಳ ಬಳಿಕ ಸರ್ಕಾರ ನೀಡುವ ಹಣ ಕೂಡ ಸರಿಯಾದ ಮಾರ್ಗದಲ್ಲಿಲ್ಲ.

ಗುರುವಾರವೂ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಬಿಹಾರದ ಈ ಭಾಗದಿಂದಲೇ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಸೇರ್ಪಡೆಯಾಗುತ್ತಾರೆ. ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಜಾಫರ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹೇಳಿದ್ದಾರೆ. ಅವರು ನೇಮಕಾತಿಗೆ ಅಗತ್ಯವಾದ ದೈಹಿಕ ಪರೀಕ್ಷೆಯನ್ನು ಸಹ ಉತ್ತೀರ್ಣರಾಗಿದ್ದಾರೆ, ಆದರೂ ಅವರಿಗೆ ಕೆಲಸ ಸಿಕ್ಕಿಲ್ಲ. ಏತನ್ಮಧ್ಯೆ, ಸೇನೆಯಲ್ಲಿ ಉದ್ಯೋಗದ ಹೊಸ ನಿಯಮಗಳನ್ನು ತಂದಿರುವುದು ಅವರ ಹತಾಶೆಗೆ ಕಾರಣವಾಗಿದೆ.

ಯುವಕರ ನಿರೀಕ್ಷೆ ಹುಸಿಯಾಗಿದೆ: ಇದಲ್ಲದೇ ಕಳೆದ ಮೂರು ವರ್ಷಗಳಿಂದ ಸೇನೆಗೆ ಸೇರುವ ಹಾದಿಯಲ್ಲಿ ಪ್ರಯತ್ನ ನಡೆಸಿದ ಸಾಕಷ್ಟು ಯುವಕರಿದ್ದಾರೆ. ಕರೋನಾದಿಂದಾಗಿ ಸೇನಾ ನೇಮಕಾತಿಯನ್ನು ಸ್ಥಗಿತ ಮಾಡಲಾಗಿತ್ತು. ಈಗ ಹೆಚ್ಚಿನ ಸಂಖ್ಯೆಯ ಯುವಕರು ಅಗ್ನಿಪಥ್ ಯೋಜನೆಗೆ ವಯೋಮಿತಿ ಅರ್ಹತೆ ಪಡೆಯುವುದಿಲ್ಲ. ಏಕೆಂದರೆ, ಗರಿಷ್ಠ 21 ವರ್ಷ ವಯಸ್ಸಿನವರು ಮಾತ್ರವೇ ಅಗ್ನಿಪಥ್ ಯೋಜನೆಗೆ ಸೇರಿಕೊಳ್ಳಬಹುದಾಗಿದೆ.  ಇಂತಹ ಪರಿಸ್ಥಿತಿಯಲ್ಲಿ ಅಗ್ನಿಪಥ್ ಯೋಜನೆ ಜಾರಿಯಾದ ಬಳಿಕ,  ಸೇನಾ ನೇಮಕಾತಿಗಾಗಿ ಕಾದು ಕುಳಿತಿರುವ ವಯೋಮಿತಿ ಯುವಕರ ಹಾಗೂ ಲಿಖಿತ ಪರೀಕ್ಷೆ, ಸೇನಾ ನೇಮಕಾತಿಗೆ ದೈಹಿಕ ಪರೀಕ್ಷೆ ಬರೆದಿದ್ದ ಯುವಕರ ನಿರೀಕ್ಷೆಯೂ ಹುಸಿಯಾಗಿದೆ ಎನ್ನುತ್ತಾರೆ.

Agneepath: ಭಾರತೀಯ ಸೇನೆಯಲ್ಲಿ 4 ವರ್ಷಗಳಿಗೆ 'ಅಗ್ನಿವೀರ್' ನೇಮಕ, ಏನಿದು? ಆಯ್ಕೆ ಹೇಗೆ? ಇಲ್ಲಿದೆ ವಿವರ

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ತಮ್ಮ ಆಕ್ರೋಶವನ್ನು ತೋಡಿಕೊಂಡಿದ್ದಾರೆ.  ಸೇನೆಗೆ ಸೇರಲು ನಾವು ತುಂಬಾ ಕಷ್ಟಪಟ್ಟಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾರೆ. ಕೇವಲ ನಾಲ್ಕು ವರ್ಷಕ್ಕೆ ಈ ಯೋಜನೆ ಮಿತಿ ಮಾಡಲು ಹೇಗೆ ಸಾಧ್ಯ? ಅದೂ ತರಬೇತಿ ಹಾಗೂ ರಜಾದಿನ ಸೇರಿದಂತೆ. ಕೇವಲ ಮೂರು ವರ್ಷದ ತರಬೇತಿಯ ಬಳಿಕ ನಾವು ದೇಶವನ್ನು ರಕ್ಷಣೆ ಮಾಡಲು ಸಾಧ್ಯವೇ? ಸರ್ಕಾರವು ಈ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

‘ಅಗ್ನಿವೀರ’ರಿಗೆ ಕೇಂದ್ರೀಯ ಪೊಲೀಸ್‌ ಪಡೆ, ರಾಜ್ಯಗಳ ಆದ್ಯತೆ!

ಜೆಹಾನಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ನಾಲ್ಕು ವರ್ಷಗಳ ನಂತರ ನಾವು ಎಲ್ಲಿಗೆ ಹೋಗಬೇಕು? ನಾಲ್ಕು ವರ್ಷಗಳ ಸೇವೆಯ ನಂತರ ನಾವು ನಿರಾಶ್ರಿತರಾಗುತ್ತೇವೆ. ಆ ಕಾರಣಕ್ಕಾಗಿ ಬೀದಿಗಿಳಿದಿದ್ದೇವೆ. ಸಾರ್ವಜನಿಕರು ಜಾಗೃತರಾಗಿದ್ದಾರೆ ಎಂಬುದನ್ನು ನಾಡಿನ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು