ವಿಶ್ವಕಪ್ ಫೈನಲ್ ಪಂದ್ಯದ ದಿನ ಮದ್ಯದಂಗಡಿ ಬಂದ್, ಡ್ರೈ ಡೇ ಘೋಷಿಸಿದ ದೆಹಲಿ ಅಬಕಾರಿ ಆಯುಕ್ತ!

Published : Nov 18, 2023, 03:38 PM IST
ವಿಶ್ವಕಪ್ ಫೈನಲ್ ಪಂದ್ಯದ ದಿನ ಮದ್ಯದಂಗಡಿ ಬಂದ್, ಡ್ರೈ ಡೇ ಘೋಷಿಸಿದ ದೆಹಲಿ ಅಬಕಾರಿ ಆಯುಕ್ತ!

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಭರ್ಜರಿ ತಯಾರಿ ಮಾಡುತ್ತಿದ್ದಾರೆ. ಹೆಲವೆಡೆ ಸ್ಕ್ರೀನ್ ಹಾಕಲಾಗಿದೆ.  ಒಂದೊಂದೆ ಗುಟುಕು ಸೇವಿಸುತ್ತಾ ಪಂದ್ಯ ವೀಕ್ಷಿಸಲು ಪ್ಲಾನ್ ಮಾಡಿದವರಿಗೆ ಅಬಕಾರಿ ಆಯುಕ್ತರು ಶಾಕ್ ನೀಡಿದ್ದಾರೆ. ಭಾನುವಾರ ಸಂಪೂರ್ಣ ಮದ್ಯದ ಅಂಗಡಿ ಬಂದ್ ಮಾಡಲು ಆದೇಶ ನೀಡಿದ್ದಾರೆ.

ನವದೆಹಲಿ(ನ.18) ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕಾತರ ಹೆಚ್ಚಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಪ್ರಶಸ್ತಿಗಾಗಿ ನ.19 ರಂದು ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ಹೋರಾಟ ನಡೆಸಲಿದೆ. ಈ ಫೈನಲ್ ಪಂದ್ಯಕ್ಕೆ ಕ್ರಿಕೆಟಿಗರು ಮಾತ್ರವಲ್ಲ, ಅಭಿಮಾನಿಗಳು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ.  ಪಂದ್ಯದ ವೇಳೆ ಯಾವುದೇ ಕೆಲಸ, ಸಭೆ, ಪ್ರಯಾಣ ಮಾಡದೇ ಪಂದ್ಯ ವೀಕ್ಷಣೆ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಹೆಲೆವೆಡೆ ಸ್ಕ್ರೀನ್ ಹಾಕಲಾಗಿದೆ. ಇದರ ನಡುವೆ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಭಾನುವಾರ(ನ.19) ದೆಹಲಿಯಲ್ಲಿ ಎಲ್ಲಾ ಮದ್ಯದ ಅಂಗಡಿ ಬಂದ್ ಮಾಡಲು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯದ ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ಕಾರಣಕ್ಕೆ ಡ್ರೈ ಡೇ ಘೋಷಣೆ ಮಾಡಿಲ್ಲ. ನವೆಂಬರ್ 19 ರಂದು ಛತ್ ಪೂಜೆ ಆಚರಿಸಲಾಗುತ್ತದೆ. ಇದೇ ದಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಭಾರತದ ಉತ್ತರ ಭಾಗದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸುವ ಛತ್ ಪೂಜೆ ಕಾರಣ ದೆಹಲಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ. 

 

ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ

ದೆಹಲಿ ಅಬಕಾರಿ ಆಯುಕ್ತ ಕೃಷ್ಣ ಮೋಹನ್ ಉಪು ಈ ಆದೇಶ ಹೊರಡಿಸಿದ್ದಾರೆ. ಭಾನುವಾರ ದೆಹಲಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಸೂರ್ಯ ಷಷ್ಠಿ ಅಥವಾ ಛತ್ ಪೂಜೆ ಕಾರಣದಿಂದ ಮದ್ಯ ಮಾರಾಟ ಬಂದ್ ಮಾಡಲಾಗಿದೆ ಎಂದು ಕೃಷ್ಣ ಮೋಹನ್ ಹೇಳಿದ್ದಾರೆ. 4 ದಿನದ ಹಬ್ಬದಲ್ಲಿ ಉಪವಾಸ ಮಾಡುತ್ತಾರೆ. ಅರ್ಘ್ಯಗಳನ್ನು ಸೂರ್ಯದೇವರಿಗೆ ಅರ್ಪಿಸುತ್ತಾರೆ. ಪವಿತ್ರ ಹಬ್ಬಕ್ಕೆ ಡ್ರೈ ಡೇ ಘೋಷಿಸಲಾಗಿದೆ ಎಂದಿದ್ದಾರೆ.

2023ರಲ್ಲಿ ಇದುವರೆಗೆ 4 ಡ್ರೈ ಡೇ ಘೋಷಿಸಲಾಗಿದೆ. ಮಾರ್ಚ್ 8 ರಂದು ಹೋಳಿ ಹಬ್ಬಕ್ಕೆ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಇನ್ನು ಅಕ್ಟೋಬರ್ 2 ರ ಗಾಂಧಿ ಜಯಂತಿ ಆಚರಣೆಗೂ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಇನ್ನು ಅಕ್ಟೋಬರ್ 24 ರಂದು ದಸರಾ ಹಬ್ಬ ಹಾಗೂ ನವೆಂಬರ್ 12ರ ದೀಪಾವಳಿ ಹಬ್ಬಕ್ಕೂ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಇನ್ನು ಡಿಸೆಂಬರ್ 25 ಕ್ರಿಸ್ಮಸ್ ದಿನ ಕೂಡ ದೆಹಲಿಯಲ್ಲಿ ಡ್ರೈ ಡೇ ಘೋಷಣೆ ಮಾಡಲಾಗುತ್ತದೆ ಎಂದು ಕೃಷ್ಣ ಮೋಹನ್ ಉಪು ಹೇಳಿದ್ದಾರೆ.  

ಛತ್ ಪೂಜೆ ದಿನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದ ಕುತೂಹಲ ಹೆಚ್ಚಾಗಿದೆ. 2013ರಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಇದೀಗ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ರಚಿಸಲು ಸಜ್ಜಾಗಿದೆ. ಈ ಪಂದ್ಯ ವೀಕ್ಷಣೆಗೆ ಭಾರಿ ತಯಾರಿ ನಡೆಯುತ್ತಿದೆ. ಪಂದ್ಯದ ವೇಳೆ ಬಾರ್ ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ಸ್ಕ್ರೀನ್ ಹಾಕಲಾಗುತ್ತದೆ. ಆದರೆ ಈ ಬಾರಿ ದೆಹಲಿಯಲ್ಲಿ ಮದ್ಯದ ಅಂಗಡಿ ಬಂದ್ ಮಾಡಿರುವ ಕಾರಣ ದಾಖಲೆ ಪ್ರಮಾಣದ ಮಾರಾಟಕ್ಕೆ ಬ್ರೇಕ್ ಬಿದ್ದಿದೆ.

ಬಂಧನ ಭೀತಿಯಿಂದ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು, ಸಮನ್ಸ್ ಹಿಂಪಡೆಯಲು ಹೋರಾಟ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜ.20ಕ್ಕೆ ನಿತಿನ್‌ ಬಿಜೆಪಿ ಅಧ್ಯಕ್ಷ?
ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ