ತಮ್ಮ ಇಸ್ಲಾಂ ವಿರೋಧಿ ದೃಷ್ಟಿಕೋನದ ಕಾರಣದಿಂದಾಗಿ ಮೂಲಭೂತವಾದಿ ಸಂಘಟನೆಗಳಿಂದ ಅತಿಯಾಗಿ ಕೊಲೆ ಬೆದರಿಕೆ ಎದುರಿಸಿದ್ದ ಲೇಖಕಿ ತಸ್ಲೀಮಾ ನಸ್ರೀನ್ 1994ರಲ್ಲಿ ಬಾಂಗ್ಲಾದೇಶವನ್ನು ತೊರೆದಿದ್ದು, ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ.
ನವದೆಹಲಿ (ಜೂನ್ 11): ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮ(Nupur Shama) ಪ್ರವಾದಿ ಮೊಹಮದ್ ಪೈಗಂಬರ್ (Prophet Muhammad) ಕುರಿತಾಗಿ ನೀಡಿದ ವಿವಾದಿತ ಹೇಳಿಕೆಗಳ ಕುರಿತಾಗಿ ಶುಕ್ರವಾರ ದೇಶವ್ಯಾಪಿ ಮುಸ್ಲೀಮರಿಂದ ಪ್ರತಿಭಟನೆ, ಹಿಂಸಾಚಾರ, ಕಲ್ಲು ತೂರಾಟ ನಡೆದಿತ್ತಯ. ಇದರ ಕುರಿತಾಗಿ ಬಾಂಗ್ಲಾದೇಶದಿಂದ ಗಡಿಪಾರುಗೊಂಡಿರುವ ಲೇಖಕಿ ತಸ್ಲಿಮಾ ನಸ್ರೀನ್ (Tasleema Nasreen) ಮಾತನಾಡಿದ್ದು, ಬಹುಶಃ ಪ್ರವಾದಿ ಮೊಹಮದ್ ಪೈಗಂಬರ್ ಈಗೇನಾದರೂ ಬದುಕಿದ್ದರೆ, ಜಗತ್ತಿನಾದ್ಯಂತ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಆಘಾತಕ್ಕೆ ಒಳಗಾಗುತ್ತಿದ್ದರು ಎಂದು ಹೇಳಿದ್ದಾರೆ.
"ಹಾಗೇನಾದರೂ ಇಂದು ಪ್ರವಾದಿ ಮೊಹಮದ್ ಬದುಕಿದ್ದರೆ, ವಿಶ್ವದಾದ್ಯಂತ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೀಡಿ ಖಂಡಿತಾ ಆಘಾತಕ್ಕೆ ಒಳಗಾಗುತ್ತಿದ್ದರು' ಎಂದು ತಸ್ಲಿಮಾ ನಸ್ರೀನ್ ಬರೆದಿದ್ದಾರೆ. ಇವರು ಮಾಡಿರುವ ಟ್ವೀಟ್ ಗೆ 22300 ಲೈಕ್ ಗಳು ಬಂದಿದ್ದು ಅಂದಾಜು 5 ಸಾವಿರ ರೀಟ್ವೀಟ್ ಗಳಾಗಿವೆ.
Even if prophet Muhammad was alive today, he would have been shocked to see the madness of the Muslim fanatics around the world.
— taslima nasreen (@taslimanasreen)
ಎರಡು ದಿನಗಳ ಹಿಂದೆಯೂ ಟ್ವಿಟರ್ ನಲ್ಲಿ ಈ ಕುರಿತಾಗಿ ತಸ್ಲೀಮಾ ನಸ್ರೀನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. " ಮಾನವ, ಸಂತ, ಪ್ರವಾದಿ, ದೇವರು ಯಾರೂ ಕೂಡ ಟೀಕೆಗಿಂತ ಮೇಲಲ್ಲ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ವಿಮರ್ಶಾತ್ಮಕ ಪರಿಶೀಲನೆ ಅಗತ್ಯ' ಎಂದು ಬರೆದಿದ್ದರು.
No one is above criticism, no human, no saint, no messiah, no prophet, no god. Critical scrutiny is necessary to make the world a better place.
— taslima nasreen (@taslimanasreen)
ತಸ್ಲೀಮಾ ನಸ್ರೀನ್ ಅವರ ಪುಸ್ತಕ "ಲಜ್ಜಾ"(Lajja) ಬಾಂಗ್ಲಾದೇಶದಲ್ಲಿ (Bangladesh) ತೀವ್ರ ಟೀಕೆಗೆ ಕಾರಣವಾದ ನಂತರ ದೇಶಭ್ರಷ್ಟರೆನಿಸಿಕೊಂಡು ಕಳೆದ ಮೂರು ದಶಕದಿಂದ ಭಿನ್ನ ದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಮ್ಮ ಇಸ್ಲಾಂ ವಿರೋಧಿ ದೃಷ್ಟಿಕೋನದ ಕಾರಣದಿಂದಾಗಿ ಮೂಲಭೂತವಾದಿ ಸಂಘಟನೆಗಳಿಂದ ಅತಿಯಾಗಿ ಕೊಲೆ ಬೆದರಿಕೆ ಎದುರಿಸಿದ್ದ 59 ವರ್ಷದ ಲೇಖಕಿ ತಸ್ಲೀಮಾ ನಸ್ರೀನ್ 1994ರಲ್ಲಿ ಬಾಂಗ್ಲಾದೇಶವನ್ನು ತೊರೆದಿದ್ದರು. ಪ್ರಸ್ತುತ ಭಾರತದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ.
ತಸ್ಲೀಮಾ ನಸ್ರೀನ್ ಸ್ವೀಡಿಷ್ ಪೌರತ್ವವನ್ನು ಹೊಂದಿದ್ದರೂ, ಕಳೆದ ಎರಡು ದಶಕಗಳಲ್ಲಿ ಬಹುಕಾಲ ಅಮೆರಿಕ ಮತ್ತು ಯುರೋಪ್ ನಲ್ಲಿ ತಮ್ಮ ಜೀವನವನ್ನು ಕಳೆದಿದ್ದರು. ಇನ್ನು ಸಣ್ಣ ರೆಸಿಡೆನ್ಸಿ ಲೈಸೆನ್ಸ್ ಮೇಲೆ ಭಾರತದಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ, ಭಾರತದ ಪೌರತ್ವವನ್ನು ಪಡೆಯುವ ಇಚ್ಛೆಯನ್ನು ತಸ್ಲೀಮಾ ನಸ್ರೀನ್ ಬಹುವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು.
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಹಾಗೂ ಅವರ ಉಚ್ಛಾಟಿತ ಸಹೋದ್ಯೋಗೊ ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗೆ ಸಂಬಂಧಿಸಿದಂತೆ, ದೇಶವ್ಯಾಪಿ ಶುಕ್ರವಾರ ಪ್ರತಿಭಟನೆಗಳು ನಡೆದಿದ್ದವು. ಶನಿವಾರ ಕೋಲ್ಕತದ ಹೌರಾ ಸೇರಿದಂತೆ ವಿವಿಧ ನಗರಗಳಲ್ಲಿ ಮತ್ತೆ ಪ್ರತಿಭಟನೆಯಾಗಿದ್ದರೆ, ರಾಂಚಿಯಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, 10ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಎರಡು ವಾರಗಳ ಹಿಂದೆ ಮಾಡಿದ್ದ ಕಾಮೆಂಟ್ ಗಳ ಕುರಿತಾಗಿ ಅರಬ್ ರಾಷ್ಟ್ರಗಳು ಕೂಡ ಭಾರತದ ರಾಯಭಾರಿಗಳನ್ನು ಕರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದವು. ಕುವೈತ್, ಬಹರೇನ್ ಸೇರಿದಂತೆ ಕೆಲ ದೇಶಗಳಲ್ಲಿ ಭಾರತದಲ್ಲಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ಕೂಡ ನೀಡಲಾಗಿತ್ತು. ಇದರ ಬೆನ್ನಲ್ಲಿಯೇ ನೂಪುರ್ ಶರ್ಮ ತಮ್ಮ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.
Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!
ನೂಪುರ್ ಶರ್ಮ ಅವರು ನೀಡಿದ್ದ ಹೇಳಿಕೆ ವೈಯಕ್ತಿಕವಾದದ್ದು, ಅದಕ್ಕೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ಭಾರತದ ಮುಸ್ಲೀಮರು ಕೇವಲ ಇದಕ್ಕೆ ಸುಮ್ಮನಾಗಿರಲ್ಲ. ಅವರಿಬ್ಬರನ್ನೂ ಬಂಧನ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದವು.
ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಪ್ರತಿಭಟನೆ: ಶೂಟ್ ಆ್ಯಟ್ ಸೈಟ್ ಆರ್ಡರ್ ಬಗ್ಗೆ ಸಿಎಂ ಹೇಳಿದ್ದಿಷ್ಟು
ಗುರುವಾರ, ದೆಹಲಿಯ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ "ಜನರನ್ನು ವಿಭಜಿಸುವ ಮಾರ್ಗಗಳಲ್ಲಿ ಪ್ರಚೋದಿಸಿದ ಕಾರಣಕ್ಕಾಗಿ ನೂಪುರ್ ಶರ್ಮಾ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾಗಿ ಹೇಳಿದ್ದಾರೆ. ಇಬ್ಬರು ನಾಯಕರ ವಿರುದ್ಧ ಆಂತರಿಕ ಕ್ರಮ ಕೈಗೊಂಡಿರುವ ಬಿಜೆಪಿ, ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮದ ಬಗ್ಗೆ ಮಾತನಾಡುವಾಗ "ಅತ್ಯಂತ ಎಚ್ಚರಿಕೆ" ವಹಿಸಿ ಎಂದು ಪ್ರತಿನಿಧಿಗಳಿಗೆ ಸೂಚಿಸಿದೆ ಮತ್ತು ಯಾವುದೇ ಪಂಥ ಅಥವಾ ಧರ್ಮದ ವಿರುದ್ಧ ಅವಮಾನವನ್ನು ಉತ್ತೇಜಿಸುವುದಿಲ್ಲ ಎಂದು ಹೇಳಿದೆ.