ಇಂಗ್ಲಿಷ್ ಬಾರದ ಟೀಚರಮ್ಮ: ಅನಿರೀಕ್ಷಿತ ಭೇಟಿ ಕೊಟ್ಟ ಜಿಲ್ಲಾಧಿಕಾರಿಗೆ ಆಘಾತ!

By Web DeskFirst Published Nov 30, 2019, 3:05 PM IST
Highlights

ಶಿಕ್ಷಕಿಗೇ ಓದಲು ಬರದಿದ್ದರೆ ಮಕ್ಕಳಿಗೇನು ಕಲಿಸ್ತಾರೆ?| ಶಾಲೆಗೆ ಅನಿರೀಕ್ಷಿತ ಭೇಟಿ ನಡೆಸಿದ ಜಿಲ್ಲಾಧಿಕಾರಿ ಎದುರು ಸತ್ಯದ ಅನಾವರಣ| ಬಿಎ ಪಧವೀದರೆ, ಅನುವಾದ ಮಾಡಲು ಹೇಳಿರಲಿಲ್ಲ, ಪಾಠ ಓದಲು ಆಗಲ್ವೇ?

ಲಕ್ನೋ[ನ.30]: ಶಿಕ್ಷಕಿಯ ವರ್ತನೆಯಿಂದ ಕೋಪಗೊಂಡ ಜಿಲ್ಲಾಧಿಕಾರಿ, ದೇವೇಂದ್ರ ಕುಮಾರ್ ಪಾಂಡೆ 'ಆ ಶಿಕ್ಷಕಿಯನ್ನು ಈ ಕೂಡಲೇ ಅಮಾನತು ಮಾಡಬೇಕು. ಅವರು ಒಬ್ಬ ಇಂಗ್ಲ;ಈಷ್ ಪಾಠ ಹೇಳಿಕೊಡುವ ಶಿಕ್ಷಕಿ. ಆದರೆ ಅವರಿಗೇ ಇಂಗ್ಲೀಷ್ ಓದಲು ಬರುವುದಿಲ್ಲ. ಶಿಕ್ಷಕಿಯಾಗಿ ಪಠ್ಯಪುಸ್ತಕದಲ್ಲಿರುವ ಸಾಲುಗಳನ್ನು ಓದಲು ಪರದಾಡುತ್ತಿದ್ದಾರೆ' ಎಂದು ರೇಗಾಡಿದ್ದಾರೆ.

ಈ ನಡುವೆ ಇಂಗ್ಲೀಷ್ ಶಿಕ್ಷಕಿ ಸಮರ್ಥನೆ ನೀಡಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. 'ಆದರೇನಂತೆ? ನೀವೊಬ್ಬ ಬಿಎ ಪದವೀಧರೆ ಅಲ್ಲವೇ? ನಾನು ನಿಮ್ಮ ಬಳಿ ಅನುವಾದ ಮಾಡಲು ಹೇಳಿರಲಿಲ್ಲ. ಕೇವಲ ಇಂಗ್ಲೀಷ್ ಪುಸ್ತಕದಲ್ಲಿದ್ದ ಕೆಲ ಸಾಲುಗಳನ್ನು ಓದಲು ಹೇಳಿದ್ದೆ. ಆದರೆ ನಿಮಗೆ ಅದು ಕೂಡಾ ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ್ದ ಅಧಿಕಾರಿ ಪಾಂಡೆ ಎಲ್ಲಕ್ಕಿಂತ ಮೊದಲು ವಿದ್ಯಾರ್ಥಿಗಳ ಬಳಿ ಆ ಸಾಲುಗಳನ್ನು ಓದಲು ಹೇಳಿದ್ದರು. ಆದರೆ ಮಕ್ಕಳು ಕಷ್ಟಪಡುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಅಲ್ಲೇ ನಿಂತಿದ್ದ ಶಿಕ್ಷಕಿಗೆ ಓದಲು ತಿಳಿಸಿದ್ದಾರೆ. ಈ ವೇಳೆ ಶಿಕ್ಷಕಿಯೂ ಪರದಾಡುತ್ತಿರುವುದನ್ನು ಗಮನಿಸಿದ ಪಾಂಡೆಯವರಿಗೆ ವಾಸ್ತವತೆ ಅರಿವಿಗೆ ಬಂದಿದೆ. 

Unnao: An English teacher fails to read a few lines of the language from a book after the District Magistrate, Devendra Kumar Pandey, asked her to read during an inspection of a govt school in Sikandarpur Sarausi. (28.11) pic.twitter.com/wAVZSKCIMS

— ANI UP (@ANINewsUP)

ಈ ಸಂಬಂಧ ತಾನು ಉನ್ನತ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ಪಾಂಡೆ ತಿಳಿಸಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಬಕೆಟ್ ನೀರಿಗೆ, ಒಂದು ಲೀಟರ್ ಹಾಲು ಬೆರೆಸಿ ಕೊಡುತ್ತಿರುವ ವಿಡಿಯೋ ವೈರಲ್ ಆದ ಎರಡು ದಿನಗಳಲ್ಲೇ ಶಿಕ್ಷಕಿಯ ಸಲಿಯತ್ತಿನ ವಿಡಿಯೋ ಬಹಿರಂಗಗೊಂಡಿದೆ.

click me!