ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಮಿಸ್ಸಿಂಗ್‌, ಮಾಹಿತಿ ನೀಡಿದ ಇಡಿ

Published : Jan 29, 2024, 02:50 PM IST
ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಮಿಸ್ಸಿಂಗ್‌, ಮಾಹಿತಿ ನೀಡಿದ ಇಡಿ

ಸಾರಾಂಶ

9 ಬಾರಿ ಸಮನ್ಸ್‌ ನೀಡಿದರೂ ಎಲ್ಲವನ್ನೂ ತಪ್ಪಿಸಿಕೊಂಡಿರುವ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌, ಈಗ ನಾಪತ್ತೆಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ. 

ನವದೆಹಲಿ (ಜ.29): ಆಪಾದಿತ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್‌ ಎದುರಿಸುತ್ತಿರುವ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಅವರನ್ನು ವಿಚಾರಣೆ ಮಾಡುವ ಸಲುವಾಗಿ ಸೋಮವಾರ ಜಾರಿ ನಿರ್ದೇಶನಾಲಯದ ತಂಡ ಅವರ ನವದೆಹಲಿಯ ಅಧಿಕೃತ ನಿವಾಸಕ್ಕೆ ಆಗಮಿಸಿತ್ತು. ಜನವರಿ 27 ರಂದು ಜಾರಿ ನಿರ್ದೇಶನಾಲಯ ಸೊರೆನ್‌ಗೆ 9ನೇ ಸಮನ್ಸ್‌ಅನ್ನು ನೀಡಿತ್ತು. ಆ ಮೂಲಕ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಈಗಾಗಲೇ 9 ಬಾರಿ ಸಮನ್ಸ್‌ಅನ್ನು ತಪ್ಪಿಸಿಕೊಂಡಿದ್ದ ಹೇಮಂತ್‌ ಸೊರೆನ್‌ಗೆ ಜನವರಿ 29 ಅಥವಾ 31 ರಂದು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಕಾಲಾವಕಾಶ ನೀಡುವಂತೆ ಇಡಿ ಮನವಿ ಮಾಡಿತ್ತು. ಇದಕ್ಕೂ ಮುನ್ನ ಜನವರಿ 27 ಅಥವಾ ಜನವರಿ 31ರ ಸಮಯದಲ್ಲಿ ವಿಚಾರಣೆಗೆ ಸಹಾಯ ಮಾಡುವಂತೆ ಇಡಿ ಸೊರೆನ್‌ಗೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಹೇಮಂತ್‌ ಸೊರೆನ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಮತ್ತೊಮ್ಮೆ 48 ವರ್ಷದ ರಾಜಕಾರಣಿ ವಿರುದ್ಧ ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು.

ಜನವರಿ 20 ರಂದು ತನ್ನ ತನಿಖಾಧಿಕಾರಿಗಳು ರಾಂಚಿಯಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ತೆರಳಿದ ನಂತರ ಇಡಿ ಪ್ರಕರಣದಲ್ಲಿ ಮೊದಲ ಬಾರಿಗೆ ಸೋರೆನ್ ಅವರ ಹೇಳಿಕೆಯನ್ನು ದಾಖಲು ಮಾಡಿತ್ತು. ತನಿಖಾಧಿಕಾರಿಗಳು ಅವರ ಮನೆಯಲ್ಲಿ ಕಳೆದ ಸುಮಾರು ಏಳು ಗಂಟೆಗಳ ಅವಧಿಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ. ಅಂದು ವಿಚಾರಣೆ ಪೂರ್ಣಗೊಳ್ಳದ ಕಾರಣ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗಿತ್ತು ಎನ್ನುವುದು ತಿಳಿದುಬಂದಿದೆ.

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೆನ್‌, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರ್ಖಂಡ್‌ನಲ್ಲಿನ ತನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ. ಆ ಕಾರಣದಿಂದಾಗಿ ಸಮನ್ಸ್‌ಅನ್ನು ತಪ್ಪಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು.

ಈ ತಿಂಗಳ ಆರಂಭದಲ್ಲಿ, ತನಿಖಾ ಸಂಸ್ಥೆಯು ಸೊರೆನ್‌ ಅವರ ಪತ್ರಿಕಾ ಸಲಹೆಗಾರರ ಮೇಲೆ ದಾಳಿ ನಡೆಸಿತ್ತು. ಸಾಹಿಬ್‌ಗಂಜ್ ಜಿಲ್ಲೆಯ ಅಧಿಕಾರಿಗಳು ಮತ್ತು ಮಾಜಿ ಶಾಸಕರೊಬ್ಬರ ಆವರಣದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ದಾಳಿ ಮಾಡಲಾಗಿತ್ತು. 2022ರಿಂದ ಇಡಿ, ರಿಂದ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕಾರ್ಯಾಚರಣೆಗಳಿಂದ ಉತ್ಪತ್ತಿಯಾದ "ಅಪರಾಧದ ಆದಾಯ" 100 ಕೋಟಿ ರೂಪಾಯಿಗಳ ಬಗ್ಗೆ ತನಿಖೆ ನಡೆಸುತ್ತಿದೆ.

I-N-D-I-A ಒಕ್ಕೂಟಕ್ಕೆ ಶಾಕ್, ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್!

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಮತ್ತು ರಾಂಚಿಯ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ 2011 ರ ಬ್ಯಾಚ್ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಜನರನ್ನು ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಇದುವರೆಗೆ ಬಂಧಿಸಿದೆ.

ಜಾರ್ಖಂಡ್ ಆರೋಗ್ಯ ಸಚಿವನ ಅನಾರೋಗ್ಯಕಾರಿ ವರ್ತನೆ: ಅಶ್ಲೀಲ ವಿಡಿಯೋ ಚಾಟ್ ವೈರಲ್

ಅಪ್‌ಡೇಟ್‌:
ಹೇಮಂತ್‌ ಸೊರೆನ್‌ ಅವರು ಮಿಸ್ಸಿಂಗ್‌ ಆಗಿದ್ದಾರೆ ಎಂದು ಇಡಿ ತನ್ನ ಮೂಲಗಳಿಂದ ಪತ್ರಿಕೆಗಳಿಗೆ ತಿಳಿಸಿದ ಕೆಲವೇ ಹೊತ್ತಿನಲ್ಲಿ ಜಾರ್ಖಂಡ್‌ ಸಿಎಂ ತಮ್ಮ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವರಿ 31ರಂದು ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್