Elgar Parishad case: ಬರೋಬ್ಬರಿ 3 ವರ್ಷಗಳ ಬಳಿಕ ಬಿಡುಗಡೆಯಾದ ವಕೀಲೆ ಸುಧಾ ಭಾರದ್ವಾಜ್

By Suvarna NewsFirst Published Dec 9, 2021, 9:03 PM IST
Highlights
  • 3 ವರ್ಷಗಳ ಬಳಿಕ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾದ ವಕೀಲೆ ಸುಧಾ ಭಾರದ್ವಾಜ್
  • 16 ವಿವಿಧ ಕಠಿಣ ಷರತ್ತುಗಳ ಬಳಿಕ ಬಿಡುಗಡೆಗೊಳಿಸಿದ ಎನ್‌ಐಎ ಕೋರ್ಟ್
  • 2017ರಲ್ಲಿ ಎಲ್ಗರ್ ಪರಿಷತ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಬಂಧನ

ಮುಂಬೈ(ಡಿ.9): 2017ರಲ್ಲಿ ಎಲ್ಗರ್ ಪರಿಷತ್‌ನಲ್ಲಿ (Elgar Parishad) ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಮತ್ತು ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 16 ಜನರ ಪೈಕಿ ಒಬ್ಬರಾಗಿದ್ದ ವಕೀಲೆ, ಸಾಮಾಜಿಕ ಕಾರ್ಯಕರ್ತೆ (social activist) ಸುಧಾ ಭಾರದ್ವಾಜ್ (Sudha Bharadwaj) ಮೂರು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ ಡಿಸೆಂಬರ್ 9ರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ.ಬಾಂಬೆ ಹೈಕೋರ್ಟ್ ಡಿಸೆಂಬರ್ 1 ರಂದು ನೀಡಿರುವ ಜಾಮೀನು ಮಂಜೂರು ಆದೇಶಕ್ಕೆ ತಡೆ ನೀಡಬೇಕೆಂದು ರಾಷ್ಟ್ರೀಯ ತನಿಖಾ ದಳ (National Investigation Agency) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು.

ಹೈಕೋರ್ಟ್ ಆದೇಶದೊಂದಿಗೆ ಕಾರಣವಿಲ್ಲದೆ  ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದ ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್ ಆರ್ ಭಟ್ ಮತ್ತು  ಬೆಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ, ಸುಧಾ ಭಾರದ್ವಾಜ್ ಅವರ ಬಿಡುಗಡೆಯನ್ನು ಸ್ಪಷ್ಪಪಡಿಸಿತ್ತು. ಎನ್ ಐಎ ನ್ಯಾಯಾಲಯ (NIA court) ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಸುಧಾ ಭಾರದ್ವಾಜ್ ಬೈಕುಲ್ಲಾ  ಮಹಿಳಾ ಕಾರಾಗೃಹದಿಂದ (Byculla women prison) ಹೊರ ಬಂದಿದ್ದಾರೆ.

60 ವರ್ಷದ ಸಾಮಾಜಿಕ ಕಾರ್ಯಕರ್ತೆ, ಪಾಸ್ ಪೋರ್ಟ್ ಸಲ್ಲಿಸಬೇಕು, ಮುಂಬೈನಲ್ಲಿಯೇ ವಾಸಿಸಬೇಕು, ನಗರದ ಹೊರಗೆ ಹೋಗಬೇಕಾದರೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ಪ್ರಕರಣದಲ್ಲಿ ತನ್ನ ಸಹ-ಆರೋಪಿಗಳೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿರಬಾರದು.  ಪ್ರತಿ 15 ದಿನಗಳಿಗೊಮ್ಮೆ ಹತ್ತಿರದ ಪೊಲೀಸ್ ಠಾಣೆಗೆ ವೀಡಿಯೊ ಕರೆ ಅಥವಾ ದೈಹಿಕವಾಗಿ ಭೇಟಿ ನೀಡಿ ತನ್ನ ಇರುವಿಕೆಯನ್ನು ತೋರಿಸಬೇಕು. ಯಾವುದೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಾರದು  ಎಂಬ ಒಟ್ಟು 16 ಷರತ್ತಿ ನ ಜೊತೆಗೆ  50 ಸಾವಿರ ರೂ. ತಾತ್ಕಾಲಿಕ ಬಾಂಡ್ ನಲ್ಲಿ ಸುಧಾ ಭಾರದ್ವಾಜ್ ಅವರನ್ನು ಬಿಡುಗಡೆ ಮಾಡುವಂತೆ ಎನ್ ಐಎ ವಿಶೇಷ ನ್ಯಾಯಾಲಯ  ಸೂಚಿಸಿತ್ತು. 

CBSE academic session 2021-22: ಸಿಬಿಎಸ್‌ಸಿ ವಿದ್ಯಾರ್ಥಿಗಳ ನೋಂದಣಿ ಡಿ.15 ರಿಂದ ಆರಂಭ

 ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಹಾಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಹತ್ಯೆಗೆ ಸಂಚು ರೂಪಿಸಲು ಯತ್ನಿಸಿದ ಆರೋಪದ ಮೇರೆಗೆ ಹಾಗೂ ಭೀಮಾ-ಕೋರೆಗಾಂವ್ ಹಿಂಸೆಗೆ ಪ್ರಚೋದಿಸಿದ ಆರೋಪದ ಮೇರೆಗೆ ಮಾವೋವಾದಿ ನಕ್ಸಲ್ ಸಿದ್ಧಾಂತದ ಪ್ರತಿಪಾದಕ, ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್, ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಸೇರಿಂದಂತೆ ಐವರನ್ನು  ಆಗಸ್ಟ್ 28, 2018ರಲ್ಲಿ  ಪುಣೆ ಪೊಲೀಸರು ಬಂಧಿಸಿ ನಂತರ ಗೃಹ ಬಂಧನದಲ್ಲಿ ಇಟ್ಟಿದ್ದರು. ತದನಂತರ ಅಕ್ಟೋಬರ್ 27, 2018ರಲ್ಲಿ   ಎನ್‌ಐಎ ಕಸ್ಟಡಿಗೆ ಪಡೆಯಲಾಗಿತ್ತು. ರಾಜ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆಕೆಯನ್ನು ಆರಂಭದಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ತನಿಖೆಯನ್ನು ಎನ್ಐಎಎ ವಹಿಸಿಕೊಂಡ ನಂತರ ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಯಿತು.

Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

15 ಆರೋಪಿಗಳ ಪೈಕಿ ಸುಧಾ , ಜಾಮೀನು ಪಡೆದ ಎರಡನೇ ಆರೋಪಿಯಾಗಿದ್ದಾರೆ. ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅನಾರೋಗ್ಯದ ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು. 2020ರ ಅಕ್ಟೋಬರ್ 8ರಿಂದ ತಲೋಜಾ ಜೈಲಿನಲ್ಲಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ (84) ಜುಲೈನಲ್ಲಿ ಮೃತಪಟ್ಟಿದ್ದರು. ಹೋರಾಟಗಾರರ ಬಂಧನವಾದ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿತ್ತು.

Army Helicopter Crash: ಅತೀ ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಬಿಪಿನ್‌ರ ಇಬ್ಬರು ವೈಯಕ್ತಿ

click me!