ಸ್ಮೃತಿ ಇರಾನಿ, ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿ ದ್ವಿವೇದಿಗೆ ರಾಜ್ಯಸಭೆ ಟಿಕೆಟ್‌?

Published : Sep 29, 2026, 07:27 AM IST
BJP leader Smriti Irani

ಸಾರಾಂಶ

ಉತ್ತರಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿ, ಸ್ಮೃತಿ ಇರಾನಿ ಮತ್ತು ಹರೀಶ್‌ ದ್ವಿವೇದಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಅಲ್ಲದೆ, ಮಾಜಿ ಸಂಸದ ವರುಣ್ ಗಾಂಧಿ ಅವರಿಗೂ ಟಿಕೆಟ್ ನೀಡುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಲಖನೌ: ಉತ್ತರಪ್ರದೇಶದಿಂದ 10 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಅ.16ರಂದು ಚುನಾವಣೆ ನಡೆಯಲಿದ್ದು, ಎಂಟು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ, ಬಿಜೆಪಿಯ ಕರ್ನಾಟಕ ರಾಜ್ಯ ಉಸ್ತುವಾರಿಯೂ ಆಗಿರುವ ಹರೀಶ್‌ ದ್ವಿವೇದಿಗೆ ಟಿಕೆಟ್‌ ಬಹುತೇಕ ಖಚಿತ ಎನ್ನಲಾಗಿದೆ.

ಇನ್ನು ಮಾಜಿ ಸಂಸದ ವರುಣ್‌ ಗಾಂಧಿ ಅವರ ಹೆಸರೂ ರಾಜ್ಯಸಭಾ ಸ್ಥಾನಕ್ಕೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿಯನ್ನು ಸೋಲಿಸಿದ್ದ ಸ್ಮೃತಿ ಇರಾನಿ

ಸ್ಮೃತಿ ಇರಾನಿ ಮತ್ತು ದ್ವಿವೇದಿ ಅವರನ್ನು ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿತ್ತು. ಈ ಹಿಂದೆ ಅಮೇಠಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನಾಯಕಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿಗೆ ರಾಜ್ಯಸಭೆ ಟಿಕೆಟ್‌ ಖಚಿತ ಎನ್ನಲಾಗುತ್ತಿದೆ. ಅದೇ ರೀತಿ ಸಂಘಟಕ ಮಾಜಿ ಸಂಸದ ಹರೀಶ್‌ ದ್ವಿವೇದಿ ಅವರ ಹೆಸರೂ ಟಿಕೆಟ್‌ಗಾಗಿ ಮುನ್ನಲೆಯಲ್ಲಿದೆ ಎಂದು ಮೂಲಗಳು ಹೇಳುತ್ತಿವೆ.

ವರುಣ್‌ ಗಾಂಧಿ ಟಿಕೆಟ್ ನೀಡುವ ಸಾಧ್ಯತೆ

ಅದೇ ರೀತಿ 2024ರಲ್ಲಿ ಟಿಕೆಟ್‌ ನಿರಾಕರಿಸಲ್ಪಟ್ಟ ಬಳಿಕ ಬಹುತೇಕ ಮೂಲೆಗುಂಪಾಗಿದ್ದ ವರುಣ್‌ ಗಾಂಧಿ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡುವ ಮೂಲಕ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡುವ ಕುರಿತೂ ಚರ್ಚೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಸ್ಮೃತಿ ಇರಾನಿ, ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿ ದ್ವಿವೇದಿಗೆ ರಾಜ್ಯಸಭೆ ಟಿಕೆಟ್‌?
Supreme Court: 10 ವರ್ಷದ ಕಂದಮ್ಮನ ಕಣ್ಣೀರಿಗೆ ಸಿಕ್ಕಿತು ನ್ಯಾಯ; ಆ ಕಾಮುಕ ವಯಸ್ಸಾಗುವವರೆಗೂ ಕಂಬಿ ಎಣಿಸಲಿ ಎಂದ ಜಡ್ಜ್ ಸ್ಪಂದನೆ ವೈರಲ್