ಜಾರಿ ನಿರ್ದೇಶನಾಲಯವು (ಇ.ಡಿ.) 2005ರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಜಾರಿಗೆ ಬಂದ ನಂತರ ತೀವ್ರ ಕಾರ್ಯೋನ್ಮುಖವಾಗಿದ್ದು, ಬ್ಯಾಂಕ್‌ಗಳಿಗೆ ಆಗುತ್ತಿದ್ದ ಭಾರಿ ಹಾನಿಯನ್ನು ತಪ್ಪಿಸಿದೆ.
ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ.) 2005ರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಜಾರಿಗೆ ಬಂದ ನಂತರ ತೀವ್ರ ಕಾರ್ಯೋನ್ಮುಖವಾಗಿದ್ದು, ಬ್ಯಾಂಕ್‌ಗಳಿಗೆ ಆಗುತ್ತಿದ್ದ ಭಾರಿ ಹಾನಿಯನ್ನು ತಪ್ಪಿಸಿದೆ. 2005ರ ನಂತರ ಇ.ಡಿ. 23 ಸಾವಿರ ಕೋಟಿ ರು.ಗಳನ್ನು ಬ್ಯಾಂಕ್‌ಗಳಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ 1 ಲಕ್ಷ ಕೋಟಿ ರು.ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ 992 ದೂರುಗಳನ್ನು ಚಾಜ್‌ರ್‍ಶೀಟ್‌ಗಳನ್ನು ಇ.ಡಿ. ದಾಖಲು ಮಾಡಿದೆ. ಅಕ್ಕದೆ, 5400 ಪ್ರಕರಣಗಳ ತನಿಖೆಯನ್ನು ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ 8000 ಶೋಕಾಸ್ ನೋಟಿಸ್‌ಗಳನ್ನು ಇ.ಡಿ. ಜಾರಿ ಮಾಡಿದೆ. ಆರೋಪಿಗಳ ಆಸ್ತಿಪಾಸ್ತಿ ಜಪ್ತಿ, ಬ್ಯಾಂಕ್ ಖಾತೆ ಜಪ್ತಿ- ಮೊದಲಾದ ಕ್ರಮಗಳನ್ನು ಅನುಸರಿಸಿ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚಿಸಿದ್ದವರಿಂದ 23 ಸಾವಿರ ಕೋಟಿ ರು. ಮುಟ್ಟುಗೋಲು ಹಾಕಿಕೊಂಡಿದೆ ಹಾಗೂ ಪುನಃ ಅದನ್ನು ಬ್ಯಾಂಕ್‌ಗೆ ಮರಳಿಸಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.