
ಕೊಚ್ಚಿ(ಮಾ.28): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರಿಗೆ ಸೇರಿದ ಐಟಿ ಕಂಪನಿಗೆ ಮಿನರಲ್ಸ್ ಕಂಪನಿಯೊಂದರಿಂದ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ.), ಅವರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ವೀಣಾ ಅವರು ಮುನ್ನಡೆಸುತ್ತಿರುವ ಎಕ್ಸಾಲಾಜಿಕ್ ಐಟಿ ಸಲ್ಯೂಷನ್ಸ್‌ಗೆ ಕೊಚ್ಚಿ ಮಿನರಲ್ಸ್ ಮತ್ತು ರ್‍ಯೂಟೈಲ್ ಲಿಮಿಟೆಡ್ ಎಂಬ ಕಂಪನಿಗಳು 2018-19ರ ಅವಧಿಯಲ್ಲಿ ಯಾವುದೇ ಸೇವೆ ಪಡೆಯದೇ 1.72 ಕೋಟಿ ರು. ಅಕ್ರಮ ಹಣ ವರ್ಗಾವಣೆ ಮಾಡಿವೆ ಎಂದು ಇ.ಡಿ. ಆರೋಪಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಸಮನ್ಸ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಕೇರಳ ಸಿಎಂ ಪುತ್ರಿಯ 135 ಕೋಟಿ ವಂಚನೆ ಕೇಸ್, ವೀಣಾ ವಿಜಯನ್ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
ಈ ಕುರಿತು ಈ ಹಿಂದೆ ಗಂಭೀರ ಆಪರಾದಗಳ ತನಿಖಾ ಕಚೇರಿ (ಎಸ್‌ಎಫ್‌ಐಒ) ಆರಂಭಿಸಿದ್ದ ತನಿಖೆಯನ್ನು ರದ್ದು ಮಾಡಬೇಕೆಂದು ಕೋರಿ ವೀಣಾ ಅವರ ಕಂಪನಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆ ಕಳೆದ ತಿಂಗಳಷ್ಟೇ ನ್ಯಾಯಾಲಯ ತಿರಸ್ಕರಿಸಿ ವಜಾ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ