ದೆಹಲಿ ಸೇರಿ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು!

By Suvarna NewsFirst Published Dec 20, 2019, 6:01 PM IST
Highlights

ದೆಹಲಿ ಸೇರಿ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ| ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲು| ದೆಹಲಿಯಲ್ಲಿ ಒಂದು ನಿಮಿಷಗಳವರೆಗೆ ನಡುಗಿದ ಭೂಮಿ| ಜಮ್ಮು ಮತ್ತು ಕಾಶ್ಮೀರ, ಹರಿಯಾಣಗಳಲ್ಲೂ ಭೂಮಿ ನಡುಗಿದ ಅನುಭವ| ಅಫ್ಘಾನಿಸ್ತಾನದ ಹಿಂದುಕುಷ್ ಪರ್ವತದಲ್ಲಿ ಭೂಕಂಪ ಕೇಂದ್ರ ಪತ್ತೆ|

ನವದೆಹಲಿ(ಡಿ.20): ರಾಷ್ಟ್ರ ರಾಜಧಾನಿ ನವದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Earthquake tremors felt in Delhi NCR pic.twitter.com/JEy0hK6RBa

— ANI (@ANI)

ಅಫ್ಘಾನಿಸ್ತಾನದ ಹಿಂದುಕುಷ್ ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂಕಂಪದಿಂದ ದೇವಸ್ಥಾನಕ್ಕೇಕೆ ಹಾನಿಯಾಗುವುದಿಲ್ಲ?

India Meteorological Department (IMD): Earthquake of magnitude 6.3 struck the Hindu Kush region in Afghanistan https://t.co/rlwUelwNxR

— ANI (@ANI)

ದೆಹಲಿಯಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ನಡುಗಿದ್ದು, ಜಮ್ಮು ಮತ್ತು ಕಾಶ್ಮೀರ, ಹರಿಯಾಣಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

An earthquake with a magnitude of 6.3 on the Richter scale hit Hindu Kush region in Afghanistan. Earthquake tremors also felt in Pakistan's Islamabad and Lahore. pic.twitter.com/npNxkVHYiT

— ANI (@ANI)

ಅತ್ಪಾತ ಕಿಸ್ತಾನದಲ್ಲೂ ಭೂಮಿ ಕಂಪಿಸಿದ ಕುರಿತು ವರದಿಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಎನ್‌ಸಿಆರ್‌ ಪ್ರದೇಶದಲ್ಲಿ ಹೆಚ್ಚಿನ ತೀವ್ರತೆ ಕಂಡುಬಂದಿದೆ.   

click me!