
ನವದೆಹಲಿ (ಜು.20) ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ಖಡಕ್ ಮಾತು ಹಾಗೂ ಭಾರತದ ಹಿತಾಸಕ್ತಿಗೆ ಅನುಗುಣವಾಗಿ ವಿದೇಶ ನೀತಿಗಳನ್ನು ಕಾರ್ಯರೂಪಕ್ಕೆ ತರುವುದಲ್ಲಿ ನಿಸ್ಸೀಮರಾಗಿದ್ದಾರೆ. ಎಸ್ ಜೈಶಂಕರ್ ವಿದೇಶಾಂಗ ಸಚಿವರಾದರೂ ರಾಜಕಾರಣಿಯಲ್ಲ. ರಾಯಭಾರ ಕಚೇರಿ, ರಾಜತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜೈಶಂಕರ್ ಇದೀಗ ತಾವು ಯುಪಿಎಸ್‌ಸಿ ಪರೀಕ್ಷಾ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯನ್ನು ಬಹಿರಂಗಪಡಿಸಿದ್ದಾರೆ. ಮಾರ್ಟ್ 21, 1977ರಲ್ಲಿ ನಡೆದ ಯುಪಿಎಸ್‌ಸಿ ಸಂದರ್ಶನದಲ್ಲಿ ಜೈಶಂಕರ್‌ಗೆ ಕೇಳಿದ ಪ್ರಶ್ನೆ ಯಾವುದು?
ಸಿವಿಲ್ ಸರ್ವೀಸ್ ಮೊದಲ ಬ್ಯಾಚ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಸ್ ಜೈಶಂಕರ್ ತಮ್ಮ ಯುಪಿಎಸ್‌ಸಿ ಪರೀಕ್ಷೆ, ಸಂದರ್ಶನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಕೇಳಿದ ಪ್ರಶ್ನೆಯನ್ನು ಜೈಶಂಕರ್ ಬಹಿರಂಗಪಡಿಸಿದ್ದಾರೆ. ಮಾರ್ಚ್ 21, 1977ರಂದು ಯುಪಿಎಸ್‌ಸಿ ಪರೀಕ್ಷಾ ಸಂದರ್ಶನ ನಿಗದಿಯಾಗಿತ್ತು. ಶಹಜಹಾನ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಸಂದರ್ಶನ, ನಾನು ಬೆಳಗ್ಗೆ ಮೊದಲಿಗನಾಗಿ ತಲುಪಿದ್ದೆ. ಅದೇ ದಿನ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯನ್ನು ವಾಪಾಸ್ ಪಡೆದಿದ್ದರು.ಈ ಬೆಳವಣಿಗೆ ನಡುವೆ ಸಂದರ್ಶನಕ್ಕೆ ನಾನು ಹಾಜರಾಗಿದ್ದೆ. ಈ ವೇಳೆ ನನ್ನಲ್ಲಿ ಕೇಳಿದ ಮೊದಲ ಪ್ರಶ್ನೆ 1977ರ ಚುನಾವಣೆಯಲ್ಲಿ ಏನಾಗಿತ್ತು ಎಂದು ಕೇಳಿದ್ದಾರೆ.
1977ರ ಪ್ರಶ್ನೆ, ಖಡಕ್ ಉತ್ತರ ನೀಡಿದ್ದ ಜೈಶಂಕರ್
ಜೆನ್‌ಎನ್‌ಯುನಲ್ಲಿ ಪೊಲಿಟಿಕಲ್ ಸೈನ್ಸ ಒದಿದ್ದ ನನಗೆ ಈ ಪ್ರಶ್ನೆ ಬಂದಿದ್ದು ಒಳ್ಳೇದಾಯಿತು. ನಾವು ಒಂದಷ್ಟು ಮಂದಿ 1977ರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದೇವು. ಇಂದಿರಾ ಗಾಂಧಿ ಹೇರಿದ್ದ ಎಮರ್ಜೆನ್ಸಿ ವಿರುದ್ದ ಹೋರಾಟ ನಡೆಸಿದ್ದೆವು. ಹೀಗಾಗಿ ಸುಲಭವಾಗಿ ಉತ್ತರ ನೀಡಿದ್ದೆ. ಈ ಸಂದರ್ಶನದಿಂದ ನನ್ನ ಸಂವಹನ ಕೌಶಲ್ಯ ಮತ್ತಷ್ಟು ಉತ್ತಮವಾಗಿ ನಡೆಸಲು ನೆರವಾಯಿತು. ಜೊತೆಗೆ ನಮ್ಮದೇ ಲೋಕದಲ್ಲಿರುವುದಕ್ಕಿಂತ ಈ ದೇಶದಲ್ಲಿ , ಜಗತ್ತಿನಲ್ಲಿ ಏನು ನಡೆಯುತ್ತಿದೆ ಅನ್ನೋದರ ಬಗ್ಗೆಯೂ ಕಣ್ಣಾಡಿಸುತ್ತಿರಬೇಕು ಅನ್ನೋದು ಈ ಸಂದರ್ಶನದ ಮೂಲಕ ಕಲಿತಕೊಂಡೆ ಎಂದು ಜೈಶಂಕರ್ ಹೇಳಿದ್ದಾರೆ.
1975ರ ಜೂನ್ 25ರಂದು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದ ಮೇಲೆ ತುರ್ತುು ಪರಿಸ್ಥಿತಿ ಹೇರಿತ್ತು. ಸಾವಿರಾರ ಮಂದಿಯನ್ನು ಜೈಲಿಗಟ್ಟಿದರು. ಎಲ್ಲಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಈ ಕುರಿತು ಪರಿಸ್ಥಿತಿಯನ್ನು ಮಾರ್ಚ್ 21, 1977ರಲ್ಲಿ ಹಿಂಪಡೆಯಲಾಯಿತು. ತುರ್ತು ಪರಿಸ್ಥಿತಿ ಹೇರಿ ದೇಶವನ್ನೇ ತನ್ನ ತೆಕ್ಕೆತೆಗೆ ಕಪಿಮುಷ್ಠಿಯಲ್ಲಿ ಹಿಡಿದ ಕಾಂಗ್ರೆಸ್ ಅಮಾಯಕರನ್ನು ಜೈಲಿಗಟ್ಟಿತು. ಇದರಿಂದ ದೇಶದಲ್ಲೇ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಯಾಗಿತ್ತು. 1977ರ ಚುನಾವಣೆಯಲ್ಲಿ ಜನತಾ ಪಾರ್ಟಿ ( ಇಂದಿನ ಭಾರತೀಯ ಜನತಾ ಪಾರ್ಟಿ ) ಗೆಲುವು ದಾಖಲಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ