Viral Video: ರಂಗಪಂಚಮಿ ಸಂಭ್ರಮದ ನಡುವೆ Ambulance ದಾರಿ ಮಾಡಿಕೊಟ್ಟ ಜನರು!

By Santosh Naik  |  First Published Mar 31, 2024, 10:36 AM IST

ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರತಿವರ್ಷ ಹೋಳಿ ಸಮಯದಂದು ದೊಡ್ಡ ಮಟ್ಟದಲ್ಲಿ ರಂಗಪಂಚಮಿ ಆಚರಿಸಲಾಗುತ್ತದೆ. ಲಕ್ಷಾಂತರ ಮಂದಿ ರಸ್ತೆಯಲ್ಲಿ ಇಳಿದು ಬಣ್ಣದೋಕುಳಿಯಾಡುತ್ತಾರೆ. 
 


ನವದೆಹಲಿ (ಮಾ.31): ರಂಗಪಂಚಮಿ ಹಬ್ಬದ ಸಂದರ್ಭದಲ್ಲಿ ಇಂದೋರ್ ಸೇರಿದಂತೆ ಮಧ್ಯಪ್ರದೇಶದ ಜನರು ಬಣ್ಣ ಎರಚಿ ಸಂಭ್ರಮಿಸಿದರು. ಈ ನಡುವೆ ವಿಶೇಷವಾದ ಘಟನೆಯೊಂದಿ ನಡೆದಿದೆ. ರಂಗಪಂಚಮಿ ಸಂಭ್ರಮಕ್ಕಾಗಿ ಲಕ್ಷಾಂತರ ಮಂದಿ ರಸ್ತೆಯಲ್ಲಿ ಸೇರಿದ್ದಾಗ, ಆಂಬ್ಯುಲೆನ್ಸ್‌ವೊಂದು ಜನಸಂದಣಿಯಲ್ಲಿ ಸಿಲುಕಿಕೊಂಡಿತ್ತು. ಇದು ತಿಳಿದ ಬೆನ್ನಲ್ಲೇ ಕೆಲವೇ ನಿಮಿಷದಲ್ಲಿ ಜನರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದು ಅಚ್ಚರಿಗೆ ಕಾರಣವಾಯಿತು. ಆ ಮೂಲಕ ರೋಗಿಯು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಲು ಸಹಾಯ ಮಾಡಿದರು. ರಂಗಪಂಚಮಿ ಉತ್ಸವದ ನಡುವೆ ಸಿಲುಕೊಂಡಿದ್ದ ಆಂಬ್ಯುಲೆನ್ಸ್ ದಾರಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿತ್ತು. ಈ ವೇಳೆ ವಾಹನದ ಸೈರನ್‌ ಕೇಳಿದ ಜನರು, ಕ್ಷಣಮಾತ್ರದಲ್ಲಿ ದಾರಿ ಮಾಡಿಕೊಟ್ಟರು. ಭಾರೀ ಪ್ರಮಾಣದ ಜನಸಂದಣಿಯ ನಡುವೆಯೂ ಕೆಲವೇ ನಿಮಿಷದಲ್ಲಿ ಆಂಬ್ಯುಲೆನ್ಸ್ ಈ ಹಾದಿಯಲ್ಲಿ ಪಾಸ್‌ ಆಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹಾಜರಿದ್ದ ಭದ್ರತಾ ಸಿಬ್ಬಂದಿ ಕೂಡ ಆಂಬ್ಯುಲೆನ್ಸ್ ಅನ್ನು ಜನಸಂದಣಿಯ ಮೂಲಕ ಚಲಿಸಲು ಸಹಾಯ ಮಾಡಿದರು ಮತ್ತು ಅದು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿತು ಎಂದಿದ್ದಾರೆ.

ಉಜ್ಜಯನಿ, ಇಂದೋರ್‌, ಭೋಪಾಲ್‌ ಹಾಗೂ ರತ್ಲಂ ಸೇರಿದಂತೆ ಇಡೀ ಮಧ್ಯಪ್ರದೇಶದಾದ್ಯಂತ, ಜನರು ಬಣ್ಣಗಳನ್ನು ಎರಚುವ ಮೂಲಕ ಶುಭಾಶಯಗಳನ್ನು ವಿನಿಯಮ ಮಾಡಿಕೊಂಡು ಹೋಳಿ ಹಾಡಿಗೆ ನೃತ್ಯ ಮಾಡಿ ರಂಗಪಂಚಮಿಯ ಆಚರಣೆ ಮಾಡುತ್ತಾರೆ.

ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಪವಿತ್ರ ಬೂದಿಯ ಅರ್ಪಣೆ, ಕುಂಕುಮದ ನೀರು, ಭಾಂಗ್, ಶ್ರೀಗಂಧದ ಪೇಸ್ಟ್ ಮತ್ತು ಒಣ ಹಣ್ಣುಗಳಿಂದ ದೇವರನ್ನು ಅಲಂಕರಿಸುವ ಆಚರಣೆಗಳೊಂದಿಗೆ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ. ಭದ್ರತಾ ತಪಾಸಣೆಯ ನಂತರ ಭಕ್ತರನ್ನು ದೇವಸ್ಥಾನದ ಒಳಗೆ ಬಿಡಲಾಯಿತು. ಇಂದೋರ್‌ನಲ್ಲಿ, ಐತಿಹಾಸಿಕ ರಾಜವಾಡದಲ್ಲಿ ಜನರು ಸಾಂಪ್ರದಾಯಿಕ ರಂಗಪಂಚಮಿ ಮೆರವಣಿಗೆಯಲ್ಲಿ ಭಾಗವಹಿಸಿದರು, ಬಣ್ಣ ಮಿಶ್ರಿತ ನೀರನ್ನು ಎರಚುವ ಮೂಲಕ ಸಂಭ್ರಮಿಸುತ್ತಾರೆ. ಮೆರವಣಿಗೆಯಲ್ಲಿ ವಿವಿಧ ಗುಂಪುಗಳು ಭಾಗವಹಿಸಿದ್ದವು, ಹಿಂದೂ ರಕ್ಷಕ ಗುಂಪು ರಾಮ ಮಂದಿರವನ್ನು ಚಿತ್ರಿಸುವ ಸ್ತಬ್ಧಚಿತ್ರವನ್ನೂ ಪ್ರದರ್ಶನ ಮಾಡಿತು.

ದೇಶದ ರೈತರಿಗೆ ಸಹಾಯವಾಗುವ ಅಪ್ಲಿಕೇಶನ್‌ ಸಿದ್ಧ ಮಾಡಿದ ಅಮೆರಿಕದ ಕಾಲೇಜ್‌ ವಿದ್ಯಾರ್ಥಿ SRIPAD GANTI

ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳು ಇಂದೋರ್‌ನಲ್ಲಿ ಮೆರವಣಿಗೆ ಮಾರ್ಗವನ್ನು ಮೇಲ್ವಿಚಾರಣೆ ಮಾಡಿತು ಮತ್ತು ಕಾರ್ಯಕ್ರಮದ ನಂತರ, ಮುನ್ಸಿಪಲ್ ಕಾರ್ಪೊರೇಷನ್ ತಕ್ಷಣವೇ ಪ್ರದೇಶವನ್ನು ಸ್ವಚ್ಛಗೊಳಿಸಿದೆ.  ರಂಗ ಪಂಚಮಿ, ಅದರ ಹೆಸರೇ ಸೂಚಿಸುವಂತೆ, ಐದು ಬಣ್ಣಗಳ ಸಂಯೋಜನೆಯನ್ನು ಸಂಕೇತಿಸುತ್ತದೆ, ಇದು ಮಾನವ ದೇಹ ಮತ್ತು ಬ್ರಹ್ಮಾಂಡ ಎರಡನ್ನೂ ಒಳಗೊಂಡಿರುವ ಐದು ಮೂಲಭೂತ ಅಂಶಗಳನ್ನು ಪ್ರತಿನಿಧಿಸುತ್ತದೆ.

Tap to resize

Latest Videos

ರಾಯಚೂರು: ಶ್ರೀಶೈಲ ಪಾದಯಾತ್ರೆ, ದಾರಿ ಮಧ್ಯೆ ಹೃದಯಾಘಾತ ಯುವಕ ಸಾವು

ಈ ಆಚರಣೆಯು ಅಗ್ನಿ (ಬೆಂಕಿ), ಪೃಥ್ವಿ (ಭೂಮಿ), ಜಲ (ನೀರು), ವಾಯು (ಗಾಳಿ) ಮತ್ತು ಆಕಾಶ (ಬಾಹ್ಯಾಕಾಶ) ಒಳಗೊಂಡಿರುವ ಪಂಚ ತತ್ವವನ್ನು ಗೌರವಿಸುತ್ತದೆ. ಹೋಳಿ ಹಬ್ಬಗಳು ಫಾಲ್ಗುಣ ಪೂರ್ಣಿಮಾ ತಿಥಿಯಂದು ಪ್ರಾರಂಭವಾಗುತ್ತದೆ ಮತ್ತು ಪ್ರಪಂಚದಾದ್ಯಂತದ ವಿವಿಧ ಪ್ರದೇಶಗಳಲ್ಲಿ ರಂಗ ಪಂಚಮಿಯಂದು ಕೊನೆಗೊಳ್ಳುತ್ತದೆ.

| Indore, Madhya Pradesh: Crowd makes way for an ambulance during Rang Panchami celebrations. pic.twitter.com/piIGGLhHoI

— ANI (@ANI)
click me!