ಎಕ್ಸ್‌ಪ್ರೆಸ್‌ವೇಯಲ್ಲಿ ಹಾಲಿನ ಟ್ಯಾಂಕರ್‌ಗೆ ಡಬ್ಬಲ್ ಡೆಕ್ಕರ್ ಬಸ್ ಡಿಕ್ಕಿ: 18 ಜನರ ದಾರುಣ ಸಾವು

By Anusha Kb  |  First Published Jul 10, 2024, 10:01 AM IST

ಡಬ್ಬಲ್ ಡೆಕ್ಕರ್‌ ಬಸ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 18 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 


ನವದೆಹಲಿ: ಡಬ್ಬಲ್ ಡೆಕ್ಕರ್‌ ಬಸ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 18 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಲಕ್ನೋ ಆಗ್ರೋ ಎಕ್ಸ್‌ಪ್ರೆಸ್ ವೇಯಲ್ಲಿ ಈ ಘಟನೆ ನಡೆದಿದೆ. ಈ ಬಸ್ ಬಿಹಾರದ ಸೀತಾಮರ್ಹಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿತ್ತು. ಈ ವೇಳೆ ಇಂದು ಮುಂಜಾನೆ ಎಕ್ಸ್‌ಪ್ರೆಸ್‌ ವೇಯಲ್ಲಿ  ಹಾಲಿನ ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. 

ಉತ್ತರ ಪ್ರದೇಶದ ಉನ್ನಾವೋ ಸಮೀಪ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಮಹಿಳೆಯೂ ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸ ಎಷ್ಟು ತೀವ್ರವಾಗಿತ್ತೆಂದರೆ ಬಸ್‌ನಲ್ಲಿದ್ದ ಜನ ಬಸ್‌ನಿಂದ ಹೊರಗೆ ಹಾರಿ ಬಿದ್ದಿದ್ದಾರೆ. ನೆಲದ ಮೇಲೆ ದೇಹಗಳು ಪ್ರಯಾಣಿಕರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Latest Videos

undefined

ಒಂದೇ ದಿನ ಮಾವ & ಸೊಸೆಯ ಸಾವು; ಅಮ್ಮನ ಮಡಿಲಿಗಾಗಿ ಅಳುತ್ತಿದೆ 6 ತಿಂಗಳ ಕಂದಮ್ಮ

ಇಂದು ಮುಂಜಾನೆ 5.15ರ ಸುಮಾರಿಗೆ ಖಾಸಗಿ ಬಸ್ ಬಿಹಾರದ ಮೋತಿಹಾರಿಯಿಂದ ದೆಹಲಿಗೆ ಆಗಮಿಸುತ್ತಿದ್ದ ವೇಳೆ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ಅವಘಢದಲ್ಲಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಇನ್ನೂ 19 ಜನ ಗಾಯಗೊಂಡಿದ್ದಾರೆ ಎಂದು ಉನ್ನಾವೋದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಥಿ ಹೇಳಿದ್ದಾರೆ.  ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

Bus Accident: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ!

Uttar Pradesh | Several injured after a sleeper bus going from Sitamarhi in Bihar to Delhi rammed into a milk container under Behtamujawar PS on the Lucknow-Agra Expressway in Unnao. Police reached the spot. Further details awaited.

— ANI (@ANI)

 

click me!