'ಬಾಂಗ್ಲಾದೇಶದ ಬಗ್ಗೆ ಮೋದಿಯೇ ಉತ್ತರಿಸ್ತಾರೆ..' ಡೊನಾಲ್ಡ್‌ ಟ್ರಂಪ್‌ ಮಾತಿಗೆ ನೆರೆಯ ರಾಷ್ಟ್ರದಲ್ಲಿ ನಡುಕ!

Published : Feb 14, 2025, 09:50 AM ISTUpdated : Feb 14, 2025, 11:03 AM IST
'ಬಾಂಗ್ಲಾದೇಶದ ಬಗ್ಗೆ ಮೋದಿಯೇ ಉತ್ತರಿಸ್ತಾರೆ..' ಡೊನಾಲ್ಡ್‌ ಟ್ರಂಪ್‌ ಮಾತಿಗೆ ನೆರೆಯ ರಾಷ್ಟ್ರದಲ್ಲಿ ನಡುಕ!

ಸಾರಾಂಶ

Donald Trump On Bangladesh Crisis:ಬಾಂಗ್ಲಾದೇಶ ಬಿಕ್ಕಟ್ಟಿನ ಕುರಿತ ಪ್ರಶ್ನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿಗೆ ಬಿಟ್ಟುಕೊಟ್ಟರು. "ನಾನು ಬಾಂಗ್ಲಾದೇಶವನ್ನು ಪ್ರಧಾನಿ ಮೋದಿಗೆ ಬಿಡುತ್ತೇನೆ" ಎಂದು ಹೇಳಿದರು.

ನವದೆಹಲಿ (ಫೆ.14): ಪ್ರಧಾನಿ ಮೋದಿ ಹಾಗೂ ಡೊನಾಲ್ಡ್‌ ಟ್ರಂಪ್‌ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ಗೆ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಬಿಕ್ಕಟ್ಟಿನ ಬಗ್ಗೆ ಪ್ರಶ್ನೆ ಕೇಳಲಾಯಿತು. ಆದರ, ಈ ಪ್ರಶ್ನೆಗೆ ಡೊನಾಲ್ಡ್‌ ಟ್ರಂಪ್‌ ನೀಡಿದ ಉತ್ತರ ನೆರೆ ರಾಷ್ಟ್ರವನ್ನು ಕಂಗಾಲು ಮಾಡಿದೆ. ಬಾಂಗ್ಲಾದೇಶದಲ್ಲಿ ಈಗ ಆಗುತ್ತಿರುವ ಆಂತರಿಕ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಅಮೆರಿಕ ಯಾವುದೇ ಪಾತ್ರ ವಹಿಸೋದಿಲ್ಲ ಎಂದು ತಿಳಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಟ್ರೇಡ್‌ ಡೀಲ್‌ಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಬಾಂಗ್ಲಾದೇಶದ ಕುರಿತಾದ ಪ್ರಶ್ನೆಯನ್ನು ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಲ್ಲದೆ, 'ಬಾಂಗ್ಲಾದೇಶವನ್ನು ನಾನು ಮೋದಿ ಅವರಿಗೆ ನೀಡುತ್ತೇನೆ' ಎಂದರು.

ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ದಾನಿ ಸಂಸ್ಥೆ USAID ಮೂಲಕ ಬಾಂಗ್ಲಾದೇಶದಲ್ಲಿನ ಎಲ್ಲಾ ಕೆಲಸಗಳಿಗೆ ಅನುದಾನವನ್ನು ತಕ್ಷಣದಿಂದಲೇ ನಿಲ್ಲಿಸುವುದಾಗಿ ಘೋಷಿಸಿದ ಬೆನ್ನಲ್ಲಿಯೇ ಈ ಹೇಳಿಕೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರಕ್ಕೆ ಅಮೆರಿಕ ಎಲ್ಲಾ ಸಹಾಯವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಈ ಮಾತು ಆಡಿದ್ದಾರೆ.

ಇದರಲ್ಲಿ ಬಾಂಗ್ಲಾದೇಶದಲ್ಲಿ ಅಮೆರಿಕ ಕೈಗೊಳ್ಳುವ ಒಪ್ಪಂದಗಳು, ಅನುದಾನಗಳು, ಸಹಕಾರಿ ಒಪ್ಪಂದಗಳು ಮತ್ತು ಇತರ ಖರೀದಿ ಸಾಧನಗಳು ಸೇರಿವೆ. USAID ಹೊರಡಿಸಿದ ಪತ್ರದಲ್ಲಿ, ಸಂಸ್ಥೆಯು ತನ್ನ ಬಾಂಗ್ಲಾದೇಶ ಕಾರ್ಯಾಚರಣೆಗಳ ಅಡಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಾಲುದಾರರಿಗೆ ತಿಳಿಸಿದೆ.

ಪ್ರಧಾನಿ ಮೋದಿ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಹೇಳಿದ 7 ಮಾತುಗಳು..

"ಈ ಪತ್ರವು ಎಲ್ಲಾ USAID/ಬಾಂಗ್ಲಾದೇಶ ಅನುಷ್ಠಾನ ಪಾಲುದಾರರಿಗೆ ನಿಮ್ಮ USAID/ಬಾಂಗ್ಲಾದೇಶ ಒಪ್ಪಂದ, ಕೆಲಸದ ಆದೇಶ, ಅನುದಾನ, ಸಹಕಾರಿ ಒಪ್ಪಂದ ಅಥವಾ ಇತರ ನೆರವು ಅಥವಾ ಸ್ವಾಧೀನ ಸಾಧನದ ಅಡಿಯಲ್ಲಿ ಯಾವುದೇ ಕೆಲಸವನ್ನು ತಕ್ಷಣವೇ ನಿಲ್ಲಿಸಲು ಅಥವಾ ಸ್ಥಗಿತಗೊಳಿಸಲು ನಿರ್ದೇಶಿಸುತ್ತಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಏರೋ ಇಂಡಿಯಾದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಎಫ್‌-35 ಭಾರತಕ್ಕೆ, ಮೋದಿ-ಟ್ರಂಪ್‌ ಒಪ್ಪಂದ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!